Tuesday, November 28, 2023
Homeಇತರೆಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದೆ ಶವವನ್ನು ಫ್ರಿಡ್ಜ್ ನೊಳಗೆ ಇಟ್ಟ ಮೊಮ್ಮಗ!!

ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದೆ ಶವವನ್ನು ಫ್ರಿಡ್ಜ್ ನೊಳಗೆ ಇಟ್ಟ ಮೊಮ್ಮಗ!!

ಹೈದರಾಬಾದ್: ಅಂತ್ಯ ಸಂಸ್ಕಾರ ನಡೆಸಲು ಹಣ ಇಲ್ಲದ ಕಾರಣದಿಂದ 93 ವರ್ಷದ ಅಜ್ಜನ ಶವವನ್ನು ಫ್ರಿಡ್ಜ್ ನೊಳಗೆ ಅಡಗಿಸಿ ಇಟ್ಟಿರುವ ಭಯಾನಕ ಘಟನೆ ತೆಲಂಗಾಣದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರಂಗಲ್ ನ ಪರ್ಕಾಲಾ ಎಂಬ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿರುವುದಾಗಿ ಸುತ್ತಮುತ್ತಲಿನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸ್ ತಂಡ ಮನೆಯೊಳಗೆ ಶೋಧ ಕಾರ್ಯ ನಡೆಸಿದ ವೇಳೆ ರೆಫ್ರಿಜರೇಟರ್ ನೊಳಗೆ ಶವ ಇದ್ದಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪರ್ಕಾಲಾ ಪ್ರದೇಶದಲ್ಲಿ ನಿವೃತ್ತ ವ್ಯಕ್ತಿ ಮತ್ತು ಮೊಮ್ಮಗ ನಿಖಿಲ್ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈ ಹಿರಿಯ ವ್ಯಕ್ತಿಗೆ ಬರುತ್ತಿದ್ದ ಪೆನ್ಶನ್ ಹಣದಿಂದಲೇ ಮೊಮ್ಮಗ ಜೀವನ ಸಾಗಿಸುತ್ತಿದ್ದ

ನಿಖಿಲ್ ತನ್ನ ಅಜ್ಜ ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದರು. ನಂತರ ಅಜ್ಜನ ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಫ್ರಿಡ್ಜ್ ನೊಳಗೆ ಇಟ್ಟಿದ್ದೆ. ನನ್ನಲ್ಲಿ ಹಣ ಇಲ್ಲದ ಕಾರಣ ಅಜ್ಜ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗಿಲ್ಲವಾಗಿತ್ತು ಎಂದು ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ.

ಅಜ್ಜನ ಅಂತ್ಯ ಸಂಸ್ಕಾರ ನಡೆಸಲು ಹಣ ಇಲ್ಲದಿದ್ದ ಕಾರಣದಿಂದ ಫ್ರಿಡ್ಜ್ ನೊಳಗೆ ಅಡಗಿಸಿಟ್ಟಿರುವುದಾಗಿ ನಿಖಿಲ್ ತಿಳಿಸಿದ್ದು, ಇದೊಂದು ಅಸಹಜ ಸಾವೊ ಅಥವಾ ಇನ್ಯಾವುದೋ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ತನಿಖೆಯಿಂದ ತಿಳಿದು ಬರಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

Most Popular

Recent Comments