Monday, December 11, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ರೈತರಿಂದ ರಾಗಿ ಖರೀದಿಸಿ 51 ಕೋಟಿ ಸಾಲ ಉಳಿಸಿಕೊಂಡ ಸರ್ಕಾರ

ಚಿಕ್ಕಮಗಳೂರು: ರೈತರಿಂದ ರಾಗಿ ಖರೀದಿಸಿ 51 ಕೋಟಿ ಸಾಲ ಉಳಿಸಿಕೊಂಡ ಸರ್ಕಾರ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರೈತರಿಂದ ರಾಗಿ ಖರೀದಿಸಿ 51 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರದ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ. ಮಾರುಕಟ್ಟೆಯಲ್ಲಿ ರಾಗಿ ಮಾರಿದರೆ ತಕ್ಷಣ ಹಣ ಸಿಗುತ್ತದೆ. ಆದರೆ ಸ್ವಲ್ಪ ಜಾಸ್ತಿ ಹಣ ಸಿಗಲೆಂದು ಬೆಂಬಲ ಬೆಲೆಗೆ ರಾಗಿ ಮಾರಿ ಈಗ ರಾಗಿಯೂ ಇಲ್ಲ. ಹಣವೂ ಇಲ್ಲ ಎಂಬಂತಾಗಿದೆ. ವರ್ಷಪೂರ್ತಿ ಹಗಲಿರುಳೆನ್ನದೆ ಕಷ್ಟಪಟ್ಟು ದುಡಿದ ರೈತರು ಸರ್ಕಾರಕ್ಕೆ ಬೆಳೆ ಮಾರಿ ಹಣಕ್ಕಾಗಿ ಪರಿತಪ್ಪಿಸುತ್ತಾ ಸರ್ಕಾರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಆಗುಂಬೆ: ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಸಹಸವಾರೆಯೂ ಸಾವು

ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕಿನ 23.886 ರೈತರು, ಸರ್ಕಾರಕ್ಕೆ ಒಟ್ಟು 3.98.911 ಕ್ವಿಂಟಾಲ್ ರಾಗಿ ಕೊಟ್ಟಿದ್ದರು. ಆದರೆ 51 ಕೋಟಿ ಹಣವನ್ನು ಸರ್ಕಾರ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದು, ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ .

ಇದನ್ನೂ ಓದಿ; ಹೃದಯಾಘಾತದಿಂದ ಮಹಿಳಾ ಪೊಲೀಸ್ ಪೇದೆ ಸಾವು

ಯಾವ ಜಿಲ್ಲೆಯಲ್ಲಿ ಎಷ್ಟು ಬಾಕಿ?;
ಚಿಕ್ಕಮಗಳೂರು ರೈತರಿಗೆ 2.40 ಕೋಟಿ, ತರೀಕೆರೆ ರೈತರಿಗೆ 7.51 ಕೋಟಿ, ಅಜ್ಜಂಪುರ ರೈತರಿಗೆ 10.32 ಕೋಟಿ, ಕಡೂರು ರೈತರಿಗೆ 30 ಕೋಟಿಗೂ ಅಧಿಕ, ಒಟ್ಟು 51 ಕೋಟಿಗೂ ಅಧಿಕ ಹಣವನ್ನು ಸರ್ಕಾರ ರೈತರಿಗೆ ನೀಡಬೇಕಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಾ ಮುಂದು ತಾ ಮುಂದು ಅಂತ ಹಗಲಿರುಳು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿಕೊಂಡು ಕಾದು ರಾಗಿ ನೀಡಿದ್ದರು. ರೈತರು ಮುಂಗಾರು ಬಿತ್ತನೆ ವೇಳೆಗೆ ಹಣ ಸಿಗುವ ನೀರಿಕ್ಷೆಯಲ್ಲಿದ್ದರು. ಆದರೆ, ಎರಡು ತಿಂಗಳು ಕಳೆದರೂ ಹಣ ಬಾರದೆ ವ್ಯವಸಾಯ ಮಾಡಲು ಬೇರೆ ದಾರಿ ಇಲ್ಲದೆ ರೈತರು ಮತ್ತೆ ಸಾಲದ ಮೊರೆ ಹೋಗಿದ್ದಾರೆ.

ಒಟ್ಟಾರೆ, ಎಲ್ಲಾ ಫ್ರೀ ಕೊಟ್ಟು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದುಕೊಳ್ಳುವ ಸರ್ಕಾರ ಕಷ್ಟಪಡುವ ಅನ್ನದಾತನಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರಕ್ಕೆ ರಾಗಿ ಮಾರಿದ ಜಿಲ್ಲೆಯ ಸುಮಾರು 23 ಸಾವಿರಕ್ಕೂ ಅಧಿಕ ರೈತರು ಹಣಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಅನ್ನದಾತನಿಗೆ ಕೂಡಲೇ ಹಣ ನೀಡಬೇಕಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ

ಆಗುಂಬೆ: ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಸಹಸವಾರೆಯೂ ಸಾವು

ಆಗುಂಬೆ/ಹೆಬ್ರಿ: (ನ್ಯೂಸ್ ಮಲ್ನಾಡ್ ವರದಿ) ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿ ದಾರುಣ ರೀತಿಯಲ್ಲಿ ಮೃತಪಟ್ಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಶಶಾಂಕ್‌ ಮತ್ತು ನಿರ್ಮಿತಾ ಬೈಕಿನಲ್ಲಿ ತೀರ್ಥಹಳ್ಳಿ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಖಾಸಗಿ ಬಸ್‌ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಹೆಬ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆಗುಂಬೆ ಘಾಟಿ ತಿರುವಿನಲ್ಲಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಶಶಾಂಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಹಿಂಬದಿ ಕುಳಿತಿದ್ದ ನಿರ್ಮಿತಾಗೆ ಕೂಡ ತೀವ್ರ ತರಹದ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿವಿಲ್‌ ಎಂಜಿನಿಯರಿಂಗ್‌ ಮುಗಿಸಿ ಕಂಟ್ರಾಕ್ಟರ್‌ ಜತೆಗೆ ಕೆಲಸ ಮಾಡುತ್ತಿದ್ದ ಬಾರ್ಕೂರು ನಿವಾಸಿ ಸಶಾಂಕ್ (22) ಸ್ಥಳದಲ್ಲೇ ಮೃತಪಟ್ಟಿದ್ದ, ಗಂಭೀರ ಗಾಯಗೊಂಡಿದ್ದ ಸಹಸವಾರೆ ನಿರ್ಮಿತ(19) ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Most Popular

Recent Comments