Sunday, December 3, 2023
Homeರಾಜ್ಯ7ನೇ ವೇತನ ಜಾರಿಗೆ ಸಿಎಂ ಗಮನ ಸೆಳೆಯುವುದಾಗಿ ಸಚಿವರ ಭರವಸೆ; ಸರ್ಕಾರಿ ನೌಕರರಿಗೆ ಶುಭಸುದ್ದಿ

7ನೇ ವೇತನ ಜಾರಿಗೆ ಸಿಎಂ ಗಮನ ಸೆಳೆಯುವುದಾಗಿ ಸಚಿವರ ಭರವಸೆ; ಸರ್ಕಾರಿ ನೌಕರರಿಗೆ ಶುಭಸುದ್ದಿ

ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾದ 7ನೇ ರಾಜ್ಯ ವೇತನ ಜಾರಿ ಹಾಗೂ ಎನ್.ಪಿ,ಎಸ್ ರದ್ದುಗೊಳಿಸಿ, ಓ.ಪಿ.ಎಸ್ ಜಾರಿಗೆ ತರುವಂತೆ ಮುಖ್ಯಮಂತ್ರಿಗಳ ಹಮನ ಸೆಳೆಯುವ ಭರವಸೆಯನ್ನು ಇಂದು ಸಚಿವ ಹೆಚ್ ಕೆ ಪಾಟೀಲ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ; ತರೀಕೆರೆ: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಸಿ.ಎಸ್ ಷಡಾಕ್ಷರಿ ಅವರು ಸಂಸದೀಯ ಮತ್ತು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ್ ಅವರನ್ನು ಅಭಿನಂದಿಸಿ, 7ನೇ ವೇತನ ಆಯೋಗದ ಅನುಷ್ಠಾನ ಹಾಗೂ ಓಪಿಎಸ್ ಜಾರಿಗೊಳಿಸುವ ಸರ್ಕಾರಿ ನೌಕರ ಪರವಾಗಿ ಸದನದಲ್ಲಿ ಮಾತನಾಡುವಂತೆ ಕೋರಿದರು.


ಇತ್ತೀನ ಜನಪ್ರಿಯ ಸುದ್ದಿಗಳು 

ಸರ್ಕಾರಿ ನೌಕರರ ಕೋರಿಕೆಗೆ ಸ್ಪಂದಿಸಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಮುಖ್ಯಮಂತ್ರಿಗಳ ಗಮನಸೆಳೆಯುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಶೀಘ್ರವೇ ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿ ಹಾಗೂ 7ನೇ ವೇತನ ಆಯೋಗ ಜಾರಿಯ ಭರವಸೆ ನೀಡಿದ್ದಾರೆ.

ಇನ್ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ ವಾರದ ಏಳು ದಿನವೂ ಸಿಗಲಿದೆ ವೆರೈಟಿ ಊಟ, ತಿಂಡಿ

ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಗಳಿಗೆ ಮರು ಜೀವ ಸಿಕ್ಕಂತಾಗಿದೆ. ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಸಿಗುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಕಾಂಗ್ರೆಸ್ ಸರ್ಕಾರ ಮರುಜೀವ ನೀಡಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಕಾರ್ಮಿಕ ಮಹಿಳೆಯ ಹತ್ಯೆ ಮಾಡಿ ಸುಟ್ಟುಹಾಕಿದ ಹಂತಕರು, ಸ್ಥಳಕ್ಕೆ sp ಉಮಾ ಪ್ರಶಾಂತ್ ಭೇಟಿ

2017 ರಲ್ಲಿ ಸಿದ್ದರಾಮಯ್ಯ ಸರ್ಕಾರ ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಯಾಂಟೀನ್ ಗಳು ಹಳ್ಳ ಹಿಡಿದಿದ್ದವು. ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಗಳಿಗೆ ಮರು ಜೀವ ನೀಡಲಾಗುತ್ತಿದೆ. ಅದರಂತೆ ಈಗ ಹೊಸ ಮೆನೂ ಕೂಡ ಸಿದ್ದವಾಗಿದೆ.

ಇದನ್ನೂ ಓದಿ; ಕಡೂರು; ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಟ್ರಯಲ್ ರನ್ ಯಶಸ್ವಿ

ಹೌದು ಈ ಹಿಂದೆ ಇಂದಿರಾ ಕ್ಯಾಂಟೀನ್ ಅಲ್ಲಿ ನೀಡುತ್ತಿದ್ದ ಫುಡ್ ನಲ್ಲಿ ಕ್ವಾಲಿಟಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇತ್ತೀಚಿಗೆ ಕ್ಯಾಂಟೀನ್ ಗೆ ಬರುತ್ತಿರುವ ಊಟದಲ್ಲಿ ರುಚಿ ಇಲ್ಲ. ಕ್ವಾಲಿಟಿಯು ಇರೋದಿಲ್ಲ ಎಂದಿದ್ದರು. ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಹೊಸ ಮೆನು ಬಿಡುಗಡೆ ಮಾಡಿದೆ.

ಹಾಗಾದರೆ ಹೊಸ ಮೆನುವಿನಲ್ಲಿ ಏನೆಲ್ಲಾ ಸೇರ್ಪಡೆಯಾಗಿದೆ?:
ಇಂದಿರಾ ಕ್ಯಾಂಟೀನ್ ನಲ್ಲಿ ಇನ್ಮುಂದೆ ಬಗೆ ಬಗೆಯ ತಿಂಡಿ ತಿನಿಸುಗಳು ಸಿಗಲಿವೆ. ಇಡ್ಲಿ ಚಟ್ನಿ/ ಸಾಂಬಾರ್, ಬ್ರೆಡ್ & ಜಾಮ್, ಮಂಗಳೂರು ಬನ್ಸ್, ಪಲಾವ್, ಟೊಮ್ಯಾಟೊ ಬಾತ್, ಖಾರಾ ಪೊಂಗಲ್, ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ರಾಗಿ ಮುದ್ದೆ ಸೊಪ್ಪುಸಾರು, ಚಪಾತಿ & ಪಲ್ಯ, ಟೀ ಕಾಫಿಗಳು ಇಂದಿರಾ ಕ್ಯಾಂಟೀನ್ ನಲ್ಲಿ ಇನ್ಮುಂದೆ ಸಿಗಲಿದೆ.

ಯಾವ ವಾರ ಏನೇನು ಮೆನು?:
ಭಾನುವಾರ:
ಬೆಳಗ್ಗೆ : ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್-ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿ ಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ಸೋಮವಾರ:
ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್-ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪ್ಪು ಸಾರು + ಕೀರ್
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ಮಂಗಳವಾರ:
ಬೆಳಗ್ಗೆ: ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ರೈತ / ಚಪಾತಿ + ವೆಜ್ ಕರಿ

ಬುಧವಾರ :
ಬೆಳಗ್ಗೆ: ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ + ಸೊಪ್ಪು ಸಾರು

ಗುರುವಾರ:
ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್-ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ

ಶುಕ್ರವಾರ :
ಬೆಳಗ್ಗೆ: ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ಶನಿವಾರ:
ಬೆಳಗ್ಗೆ: ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ದರ ಎಷ್ಟು?;
ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರಕ್ಕೆ 5 ರೂ. ಹಾಗೂ ಮಧ್ಯಾಹ್ನ, ರಾತ್ರಿಯ ಊಟಕ್ಕೆ 10 ರೂ. ಅನ್ನು ನಿಗದಿಪಡಿಸಲಾಗಿದೆ.

Most Popular

Recent Comments