ಸರ್ಕಾರಿ ಕಚೇರಿಯ ಒಳಗೆ ಟೇಬಲ್ ಮೇಲಿದ್ದ ಕಾಗದದ ಕಡತವನ್ನು ಮೇಕೆಯೊಂದು ಕಚ್ಚಿಕೊಂಡು ಹೋಗುತ್ತಿರುವಾಗ ಅದನ್ನು ಹಿಂಬಾಲಿಸಿ ಕಚೇರಿಯ ಸಿಬ್ಬಂದಿಗಳು ಓಡಿ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ऐसा भी होता हैं।
ब्लॉक ऑफिस : #कानपुर में कर्मचारी बाहर धूप सेंकते रहे, फाइल लेकर भागा बकरा #UttarPradesh #Kanpur #ViralVideo pic.twitter.com/dPaglplIfi— Urdu Safar (@UrduSafar1) December 2, 2021
ಉತ್ತರ ಪ್ರದೇಶದ ಕಾನ್ಪುರದ ಸರ್ಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು ಮೇಕೆಯ ಹಿಂದೆ ಕಚೇರಿ ಸಿಬ್ಬಂದಿಗಳು ಅಟ್ಟಾಡಿಸಿಕೊಂಡು ಅರೆ ಕಾಗದ ನೀಡು ಎಂದು ಓಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಜನರು ವಿಡಿಯೋ ನೋಡಿ ನಕ್ಕಿದ್ದಾರೆ.
ಕಾನ್ಪುರ ಸರ್ಕಾರಿ ಕಚೇರಿಯ ಮುಂಭಾಗ ಹೊರಗೆ ಕುಳಿತು ಕಚೇರಿಯ ಸಿಬ್ಬಂದಿಗಳು ಬಿಸಿಲು ಕಾಯಿಸುವ ವೇಳೆ ಕಚೇರಿಯ ಒಳಗೆ ಪ್ರವೇಶಿಸಿದ ಕಪ್ಪು ಬಣ್ಣದ ಮೇಕೆಯೊಂದು ಕಚೇರಿಯ ಒಳಗೆ ನುಗ್ಗಿ ಅಲ್ಲಿದ್ದ ಮೇಜಿನ ಬಳಿ ಹೋಗಿ ಮೇಜಿನ ಮೇಲಿದ್ದ ಕಾಗದದ ಕಡತವನ್ನು ಬಾಯಲ್ಲಿಟ್ಟುಕೊಂಡು ಓಡಿ ಹೋಗುತ್ತಿತ್ತು. ಅದನ್ನು ಮೊದಲು ಸಿಬ್ಬಂದಿಗಳು ಗಮನಿಸಿರಲಿಲ್ಲ ನಂತರ ಅದು ಕಾಗದವನ್ನು ತಿನ್ನಲು ಶುರು ಮಾಡಿದಾಗ ಸಿಬ್ಬಂದಿಗಳು ಅದನ್ನು ಗಮನಿಸಿ ಮೇಕೆಯನ್ನು ಬೆನ್ನಟ್ಟಿದ್ದರು.
ಮೇಕೆಯನ್ನು ಬೆನ್ನಟ್ಟಿದ ನೌಕರರು ಅರೆ ಕಾಗದ ನೀಡು ಎಂದು ಹೇಳುತ್ತಾ ಅದರ ಹಿಂದೆಯೇ ಓಡಿಯೋಗಿದ್ದಾರೆ. ಆ ಮೇಕೆ ಸಿಗಬೇಕಾದರೆ ಅರ್ಧ ಕಾಗದವನ್ನು ಅದು ತಿಂದು ಹಾಕಿತ್ತು. ಈ ವೇಳೆ ಅಲ್ಲಿದ್ದ ಸಿಬ್ಬಂದಿಯೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಒಟ್ಟಾರೆಯಾಗಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು ನೆಟ್ಟಿಗರಿಗೆ ನಗೆ ತರಿಸುವ ದೃಶ್ಯವಾಗಿದೆ. ಅನೇಕರು ಸಿಬ್ಬಂದಿಗಳ ನಿರ್ಲಕ್ಷ ದ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಮೇಕೆ ಓಡುತ್ತಿರುವುದನ್ನು ಕಂಡು ಎಂಜಾಯ್ ಮಾಡಿದ್ದಾರೆ.