ಬಂಟ್ವಾಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಫರಂಗಿಪೇಟೆ ಆಟೋ ಚಾಲಕ ರಿಝ್ವಾನ್, ಅರ್ಕುಳ ಖಾಸಿಂ, ಹಾಗೂ ಮತ್ತೊರ್ವ ಅಜ್ಮಲ್ ಹುಸೈನ್ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಟ್ವಾಳ ತಾಲ್ಲೂಕಿನ ಮಹಿಳೆಯೊಬ್ಬರು ನಗರದ ಗ್ರಾಮಾಂತರ ಠಾಣೆಗೆ ನವೆಂಬರ್4 ರಂದು ತೆರಳಿ ತನ್ನ ಮಗಳ ಮೇಲೆ ಫರಂಗಿಪೇಟೆ ರಿಕ್ಷಾ ಚಾಲಕನೊಬ್ಬ ಮೈ ಕೈ ಮುಟ್ಟಿ ಲೈಂಗಿಕ ಶೋಷಣೆಯನ್ನು ನಡೆಸಿದ್ದಾನೆ ಎಂದು ದೂರನ್ನು ನೀಡಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ಮೇಲೆ ಪೊಕ್ಸೋ ಪ್ರಕರಣದಡಿಯಲ್ಲಿ ದೂರನ್ನು ದಾಖಲಿಸಿ ಆತನನ್ನು ಬಂಧಿಸಲಾಗಿತ್ತು.
ನಂತರ ನವೆಂಬರ್ 5 ರಂದು ಆ ಬಾಲಕಿ ತನ್ನ ತಾಯಿಯೊಂದಿಗೆ ಠಾಣೆಗೆ ಬಂದು 5 ತಿಂಗಳ ಹಿಂದೆ ಇಬ್ಬರು ಯುವಕರು ನನ್ನನ್ನು ಪರಿಚಯ ಮಾಡಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿ ನನಗೆ ಜೀವ ಬೆದರಿಕೆಯನ್ನು ನೀಡಿದ್ದರು ಎಂದು ದೂರನ್ನು ನೀಡಿದ್ದಳು ಬಾಲಕಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಅರ್ಕುಳದ ಖಾಸಿಂ ಮತ್ತು ಅಜ್ಮಲ್ ಹುಸೈನ್ ನನ್ನು ಬಂಧಿಸಿದ್ದಾರೆ.