Saturday, December 9, 2023
Homeಇತರೆ14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಹತ್ಯೆ ಮಾಡಿದ ಕಾಮುಕರು.

14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಹತ್ಯೆ ಮಾಡಿದ ಕಾಮುಕರು.

ಗುಜರಾತ್: 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಕತ್ತನ್ನು ಹಿಸುಕಿ ಹತ್ಯೆ ಮಾಡಿರುವ ಘಟನೆ ನಗರದ ಭರೂಚ್ ಪಟ್ಟಣದಲ್ಲಿ ನಡೆದಿದೆ.

ಮನೆಯಿಂದ ಮದ್ಯಾಹ್ನದ ವೇಳೆ ಸೌದೆ ತರಲು ಹೋಗಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಆಕೆಯನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ.

ಸಂಜೆ ಕತ್ತಲಾದರೂ ಹಿಂದುರುಗದ ಬಾಲಕಿಯನ್ನು ಹುಡುಕಾಡಿದರು ನಂತರ ಆಕೆಯ ಶವ ಅಲ್ಲೇ ಇದ್ದ ಹತ್ತಿಯ ತೋಟದಲ್ಲಿ ಸಿಕ್ಕಿದೆ. ನಂತರ ಪೋಷಕರು ಸ್ಥಳೀಯ ಅಮೋದ್ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಮತ್ತು ಫೋಕ್ಸೋ ಕಾಯ್ದೆಯಡಿಯಲ್ಲಿ ದೂರನ್ನು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಭರೂಚ್ ಆಸ್ಪತ್ರೆಗೆ ರವಾನಿಸಿದ್ದಾರೆ. ಶವ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಧೃಢಪಟ್ಟಿದೆ.

ಆರೋಪಿಗಳ ಪತ್ತೆಗಾಗಿ ಸ್ಥಳೀಯ ಅಪರಾಧ ವಿಭಾಗ, ವಿಶೇಷ ಕಾರ್ಯಾಚರಣೆ ತಂಡ ತನಿಖೆಯನ್ನು ಮುಂದುವರೆಸಿದ್ದಾರೆ.

Most Popular

Recent Comments