ಮಂಗಳೂರು: ನಗರದ ಹೊರವಲಯದಲ್ಲಿ 8 ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಧ್ಯಪ್ರದೇಶ ಮೂಲದ ಜಯ ಸಿಂಗ್ (21)ಮುನೀಮ್ ಸಿಂಗ್(20) , ಮನೀಶ್ ತಿರ್ಕಿ(33 ) ಮತ್ತು ಝಾರ್ಖಂಡ್ ಮೂಲದ ಮುಖೇಶ್ ಸಿಂಗ್ (20) ಎಂದು ತಿಳಿದುಬಂದಿದೆ. ಈ ಆರೋಪಿಗಳು ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದು ಮಧ್ಯಪ್ರದೇಶದ ಮೂವರು ಮತ್ತು ಝಾರ್ಖಂಡ್ ಮೂಲದ ಓರ್ವ ಕಾರ್ಮಿಕ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೈಸೂರು ನಗರ ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದಂತಹ ಜಾರ್ಖಂಡ್ ಕುಟುಂಬದ 8 ವರ್ಷದ ಹೆಣ್ಣು ಮಗುವನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಭಾನುವಾರ ಮದ್ಯಾಹ್ನ ಆಟವಾಡುತ್ತಿದ್ದ ಬಾಲಕಿಯನ್ನು ಕಾರ್ಖಾನೆಯ ಕೊಠಡಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿ ಒಬ್ಬ ಆರೋಪಿ ಆಕೆಯ ಕತ್ತನ್ನು ಹಿಸುಕಿ ಕೊಲೆಮಾಡಿದ್ದಾನೆ. ನಂತರ ಸಾಕ್ಷಿ ಸಿಗಬಾರದೆಂದು ಆಕೆಯ ಮೃತದೇಹವನ್ನು ನೀರು ಹರಿಯುವ ಚರಂಡಿಗೆ ಎಸೆದಿದ್ದಾರೆ. ಬಾಲಕಿಯ ಪಾಲಕರು ಹುಡುಕಾಟ ಪ್ರಾರಂಭಿಸಿದಾಗ ಆಕೆಯ ಮೃತದೇಹ ಟೈಲ್ಸ್ ಫ್ಯಾಕ್ಟರಿಯ ಸಮೀಪದ ಚರಂಡಿಯಲ್ಲಿ ಪತ್ತೆಯಾಗಿತ್ತು.
ಅಲ್ಲಿ ಕೆಲಸ ಮಾಡುತ್ತಿದ್ದ 30 ಜನರಲ್ಲಿ ಭಾನುವಾರ 19 ಜನ ಕೆಲಸಕ್ಕೆ ಬಂದಿದ್ದರು ಭಾನುವಾರವೇ ಅವರೆಲ್ಲರನ್ನು ತನಿಖೆ ನಡೆಸಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಕೃತ್ಯವೆಸಗಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೃತ್ಯ ವೆಸಗಿದ ನಂತರ ಇಬ್ಬರು ಆರೋಪಿಗಳು ಪುತ್ತೂರಿಗೆ ತೆರಳಿದ್ದರು, ಇನ್ನಿಬ್ಬರು ಆರೋಪಿಗಳು ಬಾಲಕಿಯನ್ನು ಹುಡುಕುವ ವೇಳೆ ತಾವು ಬಂದು ಯಾರಿಗೂ ಗೊತ್ತಾಗದಂತೆ ನಟಿಸಿದ್ದರು ಎಂದು ಪೊಲೀಸ್ ಅಧಿಕಾರಿ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.