Sunday, October 1, 2023
Homeಇತರೆಮನೆಬಿಟ್ಟು ಓಡಿಹೋಗಿದ್ದ ಬಾಲಕಿಗೆ ಶುಧ್ಧೀಕರಿಸುವ ನೆಪದಲ್ಲಿ ಮಸಿ ಬಳಿದು, ತಲೆ ಬೋಳಿಸಿ, ಮೆರವಣಿಗೆ ಮಾಡಿ ವಿಕೃತ...

ಮನೆಬಿಟ್ಟು ಓಡಿಹೋಗಿದ್ದ ಬಾಲಕಿಗೆ ಶುಧ್ಧೀಕರಿಸುವ ನೆಪದಲ್ಲಿ ಮಸಿ ಬಳಿದು, ತಲೆ ಬೋಳಿಸಿ, ಮೆರವಣಿಗೆ ಮಾಡಿ ವಿಕೃತ ಮೆರೆದ ಕುಟುಂಬ ಸದಸ್ಯರು ಅರೆಸ್ಟ್.

ಗುಜರಾತ್ : ಪ್ರಿಯಕರನೊಂದಿಗೆ ಓಡಿಹೋಗಿದ್ದ ಬಾಲಕಿಯೊಬ್ಬಳಿಗೆ ಮಸಿ ಬಳಿದು ಚಿತ್ರಹಿಂಸೆ ನೀಡಿದ ಘಟನೆ ನಗರದ ವ್ಯಾಪ್ತಿಯಲ್ಲಿ ನಡೆದಿದೆ.

ಗುಜರಾತ್ ನ ಪಟಾನ್ ಜಿಲ್ಲೆಯ ಹರಿಜ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ವಾಡಿ ಸಮುದಾಯಕ್ಕೆ ಸೇರಿದ ಬಾಲಕಿ ತನ್ನ ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಓಡಿಹೋದ ಅವಳನ್ನು ಕರೆತಂದು ಆಕೆಗೆ ಶುದ್ಧಿಕರಿಸುವ ಆಚರಣೆಯ ನೆಪದಲ್ಲಿ ಆಕೆಗೆ ದೇಹದ ತುಂಬಾ ಮಸಿ ಬಳಿದು ಆಕೆಯ ಕೈ ಕಾಲು ಕಟ್ಟಿ ನೆಲದಲ್ಲಿ ಕೂರಿಸಿ. ಆಕೆಯ ತಲೆ ಕೂದಲನ್ನು ಸಂಪೂರ್ಣವಾಗಿ ಕತ್ತರಿಸಿ ಆಕೆಯನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಿ ಅಂದಿನ ದಿನವೇ ಆಕೆಯನ್ನು ಬೇರೆ ಯುವಕನೊಂದಿಗೆ ಮದುವೆ ನಡೆಸಿರುವುದಾಗಿ ತಿಳಿದುಬಂದಿದೆ.

ಘಟನೆ ಜರುಗುವ ವೇಳೆ ಆ ಬಾಲಕಿ ತನ್ನನ್ನು ರಕ್ಷಿಸುವಂತೆ ಬೇಡಿಕೊಂಡರೂ ಅಲ್ಲಿದ್ದವರು ಯಾರು ಸಹಾಯಕ್ಕೆ ಬರದೇ ಕೃತ್ಯವೆಸಗಲು ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡ ನೆಟ್ಟಿಗರು ಆ ಕುಟುಂಬಸ್ಥರ ನಿರ್ಧಾರಕ್ಕೆ ವಿರೋಧ ವ್ಯಕ್ತಡಿಸಿದ್ದಾರೆ, ಈ ಕೃತ್ಯವೆಸಗಲು ಆಕೆಯ ಕುಟುಂಬವರ್ಗದವರು, ನೆರೆಹೊರೆಯವರು, ಆಕೆಯ ಸಮುದಾಯದವರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ವಿಡಿಯೋ ನೋಡಿ ಕೃತ್ಯವೆಸಗಿದ ಆರೋಪಿಗಳ ತನಿಖೆ ಕಾರ್ಯ ಶುರುಮಾಡಿದ ಸ್ಥಳೀಯ ಪೊಲೀಸರು ಬಾಲಕಿಯ ಕುಟುಂಬ ಸದಸ್ಯರು ಸೇರಿದಂತೆ 19 ಮಂದಿ ಜನರನ್ನು ಬಂಧಿಸಿದ್ದಾರೆ.

Most Popular

Recent Comments