ಧಾರವಾಡ: ಅಫ್ಘಾನಿಸ್ತಾನ್ ನಲ್ಲಿ ತಾಲಿಬಾನ್ ಸಮಸ್ಯೆಯಿಂದ ಭಾರತದಲ್ಲಿ ಅನಿಲದ ಬೆಲೆ ಏರಿಕೆಯಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ರವರು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲಿಬಾನ್ ಸಮಸ್ಯೆಯಿಂದಾಗಿ ಎಲ್ ಪಿ ಜಿ ಯ ಬೆಲೆ ಏರಿಕೆಯಾಗಿವೆ. ಅಲ್ಲದೇ ಯಾವುದೇ ರೀತಿಯ ಕಚ್ಚಾ ತೈಲ ಬರುತ್ತಿಲ್ಲ.
ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಮತ್ತು ಗ್ಯಾಸ್ ದರ ಹೆಚ್ಚಳ ಯಾಕೆ ಆಗಿದೆ ಎಂದು ಮತದಾರರೇ ವಿಚಾರ ಮಾಡಿ ಯೋಚನೆ ಮಾಡಿ ಮತವನ್ನು ಹಾಕುತ್ತಾರೆ ಎಂದು ನುಡಿದಿದ್ದಾರೆ.