Sunday, December 3, 2023
Homeಇತರೆನಾಲ್ವರು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಾಂಶುಪಾಲ ಮತ್ತು ಶಿಕ್ಷಕರು

ನಾಲ್ವರು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಾಂಶುಪಾಲ ಮತ್ತು ಶಿಕ್ಷಕರು

ಜೈಪುರ : ನಾಲ್ಕು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಅವರ ಮೇಲೆ ಗ್ಯಾಂಗ್ ರೇಪ್ ನಡೆಸಿದ ಪ್ರಾಂಶುಪಾಲ ಮತ್ತು ಶಿಕ್ಷಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಈ ಘಟನೆ ರಾಜ್ಯದ ಆಲ್ವಾರ್ ಜಿಲ್ಲೆಯ ಮಂಡಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಸಂತ್ರಸ್ತ ಬಾಲಕಿಯರು 3, 4, 6, ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೊದಲು 10 ನೇ ತರಗತಿ ಬಾಲಕಿ ಶಾಲೆಗೆ ಹೋಗಲು ನಿರಾಕರಿಸಿದಾಗ ಮನೆಯವರು ವಿಚಾರಿಸಿದಾಗ ಆಕೆಯ ಮೇಲೆ ಶಾಲೆಯ ಪ್ರಾಂಶುಪಾಲ ಮತ್ತು ಇತರ ಶಿಕ್ಷಕರು ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರ ನಡೆಸುತ್ತಿರುವುದನ್ನು ಅಲ್ಲದೇ ಶಾಲೆಯ ಶಿಕ್ಷಕಿಯರು ವಿಡಿಯೋ ಮಾಡುತ್ತಿರುವುದಾಗಿ ತನ್ನ ತಂದೆಗೆ ತಿಳಿಸಿದ್ದಾಳೆ.

ಸಂತ್ರಸ್ತೆಯ ತಂದೆ ದೂರು ನೀಡಿದ ನಂತರ ಪೊಲೀಸರು ವಿಚಾರಣೆ ನಡೆಸುವ ವೇಳೆ ಇನ್ನೂ 3 ಜನ ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಆ ಮೂರು ಜನ ಹೆಣ್ಣುಮಕ್ಕಳ ಮೇಲೂ ಸಹ ಅತ್ಯಾಚಾರ ನಡೆಸಿ ಮನೆಯವರಿಗೆ ವಿಷಯ ಹೇಳಿದರೆ ಸಾಯಿಸಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಶಿಕ್ಷಕರು ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಶಾಲೆಯ ಶಿಕ್ಷಕಿಯರಿಗೆ ತಿಳಿಸಿದಾಗ ಅವರು ನನ್ನನ್ನು ಬೆದರಿಸುತ್ತಿದ್ದರು ಅಲ್ಲದೇ ಪ್ರಾಂಶುಪಾಲರ ಮತ್ತು ಶಿಕ್ಷಕರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಮದ್ಯ ಕುಡಿದು ಬಟ್ಟೆ ತೆಗೆದು ಕೆಟ್ಟ ಕೆಲಸ ಮಾಡುತ್ತಿದ್ದರು ಎಂದು ಓರ್ವ ಸಂತ್ರಸ್ತ ಬಾಲಕಿ ಮಾಹಿತಿಯನ್ನು ನೀಡಿದ್ದಾಳೆ.

ಒಬ್ಬ ಸಂತ್ರಸ್ತೆಯ ತಂದೆ ಶಾಲೆಗೆ ಹೋಗಿ ಈ ವಿಷಯದ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಅವರಿಗೂ ಬೆದರಿಕೆ ಹಾಕಿ ತಮಗೆ ಅನೇಕ ರಾಜಕೀಯ ವ್ಯಕ್ತಿಗಳ ಪ್ರಭಾವವಿದೆ ಎಂದು ಗದರಿಸಿದ್ದಾರೆ ಎಂದು ದೂರನ್ನು ನೀಡಿದ್ದಾರೆ.

ಸದ್ಯ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿರುವುದಾಗಿ ಠಾಣಾಧಿಕಾರಿ ಮುಕೇಶ್ ಯಾದವ್ ತಿಳಿಸಿದ್ದಾರೆ.

Most Popular

Recent Comments