Friday, June 9, 2023
Homeಇತರೆಸಾಮೂಹಿಕ ಅತ್ಯಾಚಾರ ಮತ್ತು ಅಪ್ರಾಪ್ತ ಮಗಳಿಗೆ ಲೈಂಗಿಕ ದೌರ್ಜನ್ಯ ಆರೋಪ : ಹಲವು ವರ್ಷದ ನಂತರ...

ಸಾಮೂಹಿಕ ಅತ್ಯಾಚಾರ ಮತ್ತು ಅಪ್ರಾಪ್ತ ಮಗಳಿಗೆ ಲೈಂಗಿಕ ದೌರ್ಜನ್ಯ ಆರೋಪ : ಹಲವು ವರ್ಷದ ನಂತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ.

ಉತ್ತರಪ್ರದೇಶ: ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಮಗಳಿಗೆ ದೌರ್ಜನ್ಯ ಯತ್ನಿಸಿದ ಪ್ರಮುಖ ಆರೋಪಿ ಸಚಿವರೊಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

ಪ್ರಕರಣದ ಸಂಬಂಧ ಗಾಯಿತ್ರಿ ಪ್ರಜಾಪತಿ ಮತ್ತು ಅವರ ಸಹಚರರಾದ ಆಶಿಶ್ ಶುಕ್ಲಾ, ಅಶೋಕ್ ತಿವಾರಿ ಗೆ ಜೀವಾವಧಿ ಶಿಕ್ಷೆ ಜೊತೆಗೆ ತಲಾ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಲಖ್ನೋ ಕೋರ್ಟ್ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

2014 ಅಕ್ಟೋಬರ್ ನಲ್ಲಿ ಸಚಿವ ಪ್ರಜಾಪತಿ ಮತ್ತು ಆತನ ಸಹಚರರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ಅದಾದ 2 ವರ್ಷದ ನಂತರ ನನ್ನ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು ಮಾತ್ರವಲ್ಲದೇ ಆಕೆಯ ಮೇಲೂ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂದು ಅವರ ವಿರುದ್ಧ ಗೌತಂಪಲ್ಲಿ ಠಾಣೆಯಲ್ಲಿ ದೂರನ್ನು ನೀಡಿದ್ದಳು. ದೂರನ್ನು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಜಾಪತಿ ಮತ್ತು ಆತನ ಸಹಚರರನ್ನು 2017 ರಲ್ಲಿ ಬಂಧಿಸಿದ್ದರು.

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ತನಿಖೆಯಲ್ಲಿ ಸಿಕ್ಕ ಸಾಕ್ಷ್ಯದ ಆಧಾರದ ಮೇಲೆ ಈ ಮೂವರು ನಿಜವಾದ ಆರೋಪಿಗಳು ಎಂದು ನಿರ್ಧರಿಸಿ ಅವರಿಗೆ ಹಲವು ವರ್ಷದ ನಂತರ ನವೆಂಬರ್ 10 2021 ರಂದು ಜೀವಾವಧಿ ಶಿಕ್ಷೆಯನ್ನು ನೀಡಿದೆ.

Most Popular

Recent Comments