ಉಡುಪಿ : ಜಿಲ್ಲೆಯ ಬಂಟ್ವಾಳದಲ್ಲಿ ನಡೆದಂತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬಂಟ್ವಾಳದ ಲಾಡ್ಜ್ ಒಂದರಲ್ಲಿ ನಡೆದಿದ್ದಂತಹ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಬಂಧಿತ ನಾಲ್ವರು ಆರೋಪಿಗಳಲ್ಲಿ ಮೂವರು ಆರೋಪಿಗಳು ಉಡುಪಿಯವರಾಗಿದ್ದು ಇಬ್ಬರು ಆರೋಪಿಗಳು ಬಾಲಕಿಗೆ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಪರಿಚಿತರಾಗಿದ್ದವರಾಗಿದ್ದಾರೆ ಹಾಗೂ ಸಂತ್ರಸ್ತೆ ಅವರಿಬ್ಬರ ಜೊತೆಗೂ ಚಾಟ್ ಮಾಡಿಕೊಂಡಿದ್ದಾಗಿ ತನಿಖೆಯ ವೇಳೆ ತಿಳಿದುಬಂದಿದೆ.
ಬಾಲಕಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಶರತ್ ಶೆಟ್ಟಿ ಎಂಬ ಯುವಕ ಫೋನ್ ನಂಬರ್ ತೆಗೆದುಕೊಂಡು ಪ್ರತಿದಿನ ಫೋನಿನಲ್ಲಿ ಮಾತನಾಡುತ್ತಿದ್ದರು, ನಂತರ ಆ ಆರೋಪಿ ತನ್ನ ಸಂಬಂಧಿ ಎಂದು ಮಂಜುನಾಥ್ ಎಂಬುವವನಿಗೂ ಪರಿಚಯ ಮಾಡಿಕೊಟ್ಟಿದ್ದ ಅವನ ಜೊತೆಯಲ್ಲಿಯೂ ಸಲುಗೆಯಿಂದ ಇದ್ದ ಬಾಲಕಿ ವಾಟ್ಸ್ ಆಪ್ ನಲ್ಲಿಯೂ ವಿಡಿಯೋ ಚಾಟ್ ನಡೆಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ನಂತರ ಆ ಬಾಲಕಿಯನ್ನು ಭೇಟಿ ಮಾಡುವ ಸಲುವಾಗಿ ಇಬ್ಬರು ಆರೋಪಿಗಳು ಮಂಗಳೂರಿಗೆ ಬಾಲಕಿಯನ್ನು ಕರೆಸಿಕೊಂಡಿದ್ದಾರೆ
ಮಂಗಳೂರಿಗೆ ಬಂದಂತ ಸಂತ್ರಸ್ತ ಬಾಲಕಿಯನ್ನು ಮಾಲ್, ಸಿಟಿ ಎಲ್ಲಾ ಕಡೆ ಸುತ್ತಾಡಿಸಿ ಸುಸ್ತಾಗಿದೆ ಅಂತ ಪುಸಲಾಯಿಸಿ ಮಂಗಳೂರಿನ ಲಾಡ್ಜ್ ಗೆ ಕರೆದೋಯ್ದು ನಂತರ ಇದಾಯುತ್ತಲ್ಲ ಎಂಬ ಸ್ನೇಹಿತನಿಗೆ ಕರೆ ಮಾಡಿದ ಶರತ್ ಅವನನ್ನು ಸಹ ಕರೆಸಿದ್ದಾನೆ ನಂತರ ಲಾಡ್ಜ್ ನಲ್ಲಿ ಅವಕಾಶ ನೀಡಿದ ಸತೀಶ್ ಎಂಬುವವನು ಸಹ ಬಾಲಕಿಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾನೆ ನಂತರ ಎಲ್ಲಾ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಬಂಟ್ವಾಳ ಎ.ಎಸ್.ಪಿ.ಶಿವಾಂಶು ರಜಪೂತ್ ಹಾಗೂ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತ್ರತ್ವದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹಾಗೂ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರ ತಂಡದಲ್ಲಿ ಎ ಎಸ್ ಐ ಗಿರೀಶ್, ಹೆಚ್ ಸಿ ಲೋಕೇಶ್, ಕೃಷ್ಣಾ ಕುಲಾಲ್, ಸುಜು ಹಾಗೂ ಎ ಎಸ್ ಪಿ ವಿಶೇಷ ತಂಡದ ಉದಯ ರೈ, ಪ್ರವೀಣ್ , ಪ್ರಶಾಂತ್, ವಿವೇಕ್, ಕುಮಾರ್ ಹಾಗೂ ಚಾಲಕ ವಿಜಯ್ ರವರು ಈ ಆರೋಪಿಗಳನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ಆರೋಪಿಗಳಾದ ಶರತ್ ಶೆಟ್ಟಿ, ಮಂಜುನಾಥ್, ಇದಾಯುತ್ತಲ್ಲ, ಮತ್ತು ಲಾಡ್ಜ್ ಸತೀಶ್ ನನ್ನು ಬಂಧಿಸಲಾಗಿದೆ