Friday, June 9, 2023
Homeಇತರೆನೋಟಿನಲ್ಲಿರುವ ಗಾಂಧಿ ಭಾವಚಿತ್ರ ತೆಗೆಸಲು ಒತ್ತಾಯಿಸಿ ಮೋದಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ.

ನೋಟಿನಲ್ಲಿರುವ ಗಾಂಧಿ ಭಾವಚಿತ್ರ ತೆಗೆಸಲು ಒತ್ತಾಯಿಸಿ ಮೋದಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ.

ಕಾಂಗ್ರೆಸ್ ಶಾಸಕ ಭರತ್ ಸಿಂಗ್ ನವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೋಟಿನಲ್ಲಿರುವ ಗಾಂಧೀಜಿ ಭಾವಚಿತ್ರವನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ.

ಸಂಗೋಡಿನ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಸಿಂಗ್ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಈಗ ಚಾಲ್ತಿಯಲ್ಲಿರುವ 500 ಹಾಗೂ 2000 ನೋಟಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ತೆಗೆದುಹಾಕುವಂತೆ ಮೋದಿಗೆ ಮನವಿ ಪತ್ರವನ್ನು ಬರೆದಿದ್ದಾರೆ.

ಮಹಾತ್ಮ ಗಾಂಧಿ ಸತ್ಯದ ಸಂಕೇತ ಆಗಿದ್ದಾರೆ ಭಾರತೀಯ ರಿಸರ್ವ್ ಬ್ಯಾಂಕಿನ ನೋಟುಗಳಲ್ಲಿ ಗಾಂಧಿಯ ಭಾವಚಿತ್ರವಿದೆ, ಈ ನೋಟುಗಳನ್ನು ಲಂಚ ವಹಿವಾಟಿಗೆ ಬಳಸಲಾಗುತ್ತದೆ. ಎಸಿಬಿ ಇಲಾಖೆಯು ಲಂಚದ ಮೊತ್ತವನ್ನು 500 ಮತ್ತು 2000 ನೋಟುಗಳಲ್ಲಿ ಪಡೆಯುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರವಿರುವ ದೊಡ್ಡ ಮೊತ್ತದ 500 ಮತ್ತು 2000 ನೋಟುಗಳನ್ನು ಬಾರ್, ಲಿಕ್ಕರ್ ಪಾರ್ಟಿಗಳು ಮತ್ತು ಇತರ ಪಾರ್ಟಿಗಳಲ್ಲಿ ನೃತ್ಯ ಮಾಡುವವರ ಮೇಲೆ ಎಸೆಯಲಾಗುತ್ತದೆ. ಇದು ಮಹಾತ್ಮ ಗಾಂಧಿಗೆ ಮಾಡುವ ಅವಮಾನ 5, 10, 20, 50, 100 ಮತ್ತು 200 ನೋಟುಗಳ ಮೇಲೆ ಮಾತ್ರ ಗಾಂಧಿ ಫೋಟೋವನ್ನು ಮುದ್ರಿಸಬೇಕು ಈ ನೋಟುಗಳು ಬಡವರಿಗೆ ಉಪಯುಕ್ತವಾಗುತ್ತವೆ ಎಂದು ಪತ್ರದಲ್ಲಿ ಬರೆದಿದ್ದಾರೆ

Most Popular

Recent Comments