ದಾವಣಗೆರೆ/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಕೆ.ಟಿ.ಜೆ. ನಗರ ಠಾಣೆ ಪೊಲೀಸರು 39.62 ಲಕ್ಷ ಮೌಲ್ಯದ 762 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಕರಣ ದಾಖಲು
ಚಿಕ್ಕಮಗಳೂರು ಜಿಲ್ಲೆಯ ಗಡಬನಹಳ್ಳಿಯ ಎಚ್.ಎಲ್.ಜಗದೀಶ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕುಪ್ಪಿನಕೆರೆ ಗ್ರಾಮದ ರಾಜ ಅಲಿಯಾಸ್ ಪೋತರಾಜ್, ದಾವಣಗೆರೆಯ ನಿಟುವಳ್ಳಿಯ ಕೊರಚರಹಟ್ಟಿಯ ಮನು ಹಾಗೂ ಎಚ್.ಎಲ್. ಗಿರೀಶ್ ಬಂಧಿತರು.
ರಾಜ ಆಟೊ ಡ್ರೈವರ್ ಆಗಿದ್ದು, ಉಳಿದ ಮೂವರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ರುದ್ರಪ್ಪ ಎಂಬುವರ ಮನೆಯಲ್ಲಿ ಏಪ್ರಿಲ್ 15 ರಂದು 285 ಗ್ರಾಂ ಚಿನ್ನ ಹಾಗೂ 1.50 ಲಕ್ಷ ಕಳ್ಳತನವಾಗಿದ್ದು, ಈ ಕುರಿತು ಕೆ.ಟಿ.ಜೆ. ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ; ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ – ಸಿ.ಟಿ.ರವಿ
ದೂರನ್ನು ಆಧರಿಸಿ ಆರೋಪಿಗಳ ಪತ್ತೆಗೆ ಎಎಸ್‌ಪಿ ಆರ್.ಬಿ. ಬಸರಗಿ ನಿರ್ದೇಶನದಲ್ಲಿ ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಕೆ.ಟಿ.ಜೆ. ನಗರ ಠಾಣೆಯಲ್ಲಿ 1, ಹಾಸನದಲ್ಲಿ 1, ಚಿಕ್ಕಮಗಳೂರು ನಗರದಲ್ಲಿ 2, ಆಂಧ್ರದ ಚಿತ್ತೂರು ಠಾಣೆಯಲ್ಲಿ 2 ಹಾಗೂ ಟೌನ್ ಠಾಣೆಯಲ್ಲಿ ಒಂದು ಪ್ರಕರಣಗಳನ್ನು ಪತ್ತೆಯಾದವು.
ಆರೋಪಿಗಳನ್ನು ಪತ್ತೆ ಮಾಡಿದ ಕೆ.ಟಿ.ಜೆ. ನಗರ ಠಾಣೆಯ ಎಸ್‌ಐ ರುದ್ರೇಶ ಎ.ಕೆ., ಪಿಎಸ್‌ಐಗಳಾದ ಎನ್. ಆರ್. ಕಾಟೆ, ವಿಶ್ವನಾಥ ಜಿ.ಎನ್., ಮಂಜುನಾಥ ಕಲ್ಲೇದೇವರು, ಅಪರಾಧ ವಿಭಾಗದ ಸಿಬ್ಬಂದಿ ಪ್ರಕಾಶ ಟಿ., ಶಂಕರ ಆರ್. ಜಾಧವ್, ತಿಮ್ಮಣ್ಣ ಎನ್. ಆರ್., ಶಿವರಾಜ ಎಂ. ಎಸ್. ಪುಷ್ಪಲತಾ, ವತ್ಸಲ, ಅಕ್ತ ಎಸ್.ಎಂ., ನಾಗರಾಜ ಕುಂಬಾರ, ವೀರೇಶ ಶಾಂತರಾಜ್ ಅವರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ತಂಡಕ್ಕೆ 10,000 ನಗದು ಬಹುಮಾನ ಘೋಷಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾಂಗ್ರೆಸ್ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಕಡೆ ಕೈಜೋಡಿಸುವ ಪರಿಸ್ಥಿತಿ ಬಂದರು ಅಚ್ಚರಿಯಿಲ್ಲ
- ಚುನಾವಣಾ ಪ್ರಚಾರಕ್ಕೆ ಬಂದಾಗ ಪ್ರಶ್ನಿಸಿದ ಮಹಿಳೆ ಮೇಲೆ ಪ್ರೀತಂಗೌಡ ಬೆಂಬಲಿಗನಿಂದ ಹಲ್ಲೆ
- ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಫಾರಿ
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಬೇಕೇ; ಇಲ್ಲಿದೆ ಸರಳ ವಿಧಾನ, ಹೀಗೆ ಪರಿಶೀಲಿಸಿ.
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದ್ದು, ವೋಟರ್ ಐಡಿ ಪ್ರಮುಖ ದಾಖಲೆಯಾಗಿದೆ ಏಕೆಂದರೆ ಚುನಾವಣೆಯಲ್ಲಿ ಮತ ಚಲಾಯಿಸುವುದು ಅತ್ಯಗತ್ಯ. ಎಲ್ಲಾ ಅರ್ಹ ನಾಗರಿಕರಿಗೆ ಮಾನ್ಯವಾದ ಮತದಾರರ ಗುರುತಿನ ಚೀಟಿಯ ಅಗತ್ಯವಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬ ಸಂಶಯ ಹಲವರನ್ನು ಕಾಡುತ್ತಿರಬಹುದು. ಈ ಗೊಂದಲ ನಿವಾರಿಸುವ ವಿಧಾನ ಇಲ್ಲಿ ವಿವರಿಸುತ್ತೇವೆ.
ಇದನ್ನೂ ಓದಿ; ʻಕೈ ʼ-jds ಕಾರ್ಯಕರ್ತರ ನಡುವೆ ಘರ್ಷಣೆ
ಒಂದು ನಿರ್ದಿಷ್ಟ ಕ್ಷೇತ್ರದ ಮತದಾರರ ಹೆಸರು ಮತ್ತು ಇತರ ವಿವರಗಳನ್ನು ಒಳಗೊಂಡಿರುವ ಸಮಗ್ರ ಮಾಹಿತಿಯನ್ನು ಮತದಾರರ ಪಟ್ಟಿ ಎಂದು ಕರೆಯಲಾಗುತ್ತದೆ. ಭಾರತದ ಚುನಾವಣಾ ಆಯೋಗವು ನಿಯಮಿತವಾಗಿ ನವೀಕರಿಸಿದ ಮತದಾರರ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ. ಆನ್ ಲೈನ್ ಮೂಲಕ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಪತ್ತೆ ಹಚ್ಚಬಹುದು.
ಮತದಾರರ ಗುರುತಿನ ಚೀಟಿ ಎಂದರೇನು?
ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಕಾರ್ಡ್ ಭಾರತದ ಚುನಾವಣಾ ಆಯೋಗವು(election commission) ತನ್ನ ಮತವನ್ನು ಚಲಾಯಿಸಲು ಅರ್ಹರಾಗಿರುವ ಭಾರತೀಯ ನಾಗರಿಕರಿಗೆ ನೀಡಿದ ಫೋಟೋ ಗುರುತಿನ ಪುರಾವೆಯಾಗಿದೆ. ಮತದಾರರ ನೋಂದಣಿ ಕಾರ್ಡ್ ಎಂದೂ ಕರೆಯಲ್ಪಡುವ ಮತದಾರರ ಗುರುತಿನ ಚೀಟಿಯು ಒಬ್ಬರ ಪೌರತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ, ಒಬ್ಬ ವ್ಯಕ್ತಿಯನ್ನು ಭಾರತದಲ್ಲಿ ಮತ ಚಲಾಯಿಸಲು ಅರ್ಹರನ್ನಾಗಿ ಮಾಡುತ್ತದೆ.
ಇದನ್ನೂ ಓದಿ; ವರದಕ್ಷಿಣೆ ಕಿರುಕುಳ, ಮಹಿಳೆಯ ಕೊಲೆ
ಮತದಾರರ ಗುರುತಿನ ಚೀಟಿ ಏಕೆ ಅತ್ಯಗತ್ಯ?
ಇದು ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗುರುತಿನ ರೂಪವಾಗಿ ಕಾರ್ಯನಿರ್ವಹಿಸುತ್ತದೆ.
ಇದು ಒಬ್ಬರ ಮತದಾರರ ನೋಂದಣಿಯ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ.
ಚುನಾವಣೆಗಳಲ್ಲಿ ಬಹು ಮತದಾನವನ್ನು ಗುರುತಿಸುವಿಕೆಯ ಮೂಲಕ
ಕಡಿಮೆ-ಸಾಕ್ಷರತೆಯ ಜನಸಂಖ್ಯೆಯ ಚುನಾವಣಾ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಸ್ಥಿರ ವಿಳಾಸವನ್ನು ಹೊಂದಿರದ ಮತದಾರರಿಗೆ ಇದು ಪ್ರಮುಖ ಗುರುತಿನ ಪುರಾವೆಯಾಗಿದೆ. ತಮ್ಮ ಉದ್ಯೋಗದ ಕಾರಣದಿಂದಾಗಿ ಆಗಾಗ್ಗೆ ಚಲಿಸುವ ವ್ಯಕ್ತಿಗಳಿಗೆ ಇದು ಸೂಕ್ತವಾಗಿದೆ. ಇದು ಫೋಟೋ ಗುರುತಿನ ಪುರಾವೆಯಾಗಿರುವುದರಿಂದ, ಇದು ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸುತ್ತದೆ ಮತ್ತು ಚುನಾವಣಾ ವಂಚನೆಯ ಪ್ರಕರಣಗಳನ್ನು ಪರಿಶೀಲಿಸುತ್ತದೆ.
ಇದನ್ನೂ ಓದಿ; ರಸ್ತೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ
ಮೊದಲಿಗೆ https://electoralsearch.in ಸೈಟ್ ಭೇಟಿ ನೀಡಿ ಸರ್ಚ್ ಬೈ ಡೀಟೇಲ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಮಾಹಿತಿ ನೀಡಲಾಗುತ್ತದೆ.
ಇನ್ನೊಂದು ವಿಧಾನ:
ನೀವು ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದರ ಸಂಖ್ಯೆ ಬಳಸುವುದರ ಮೂಲಕ ಪರಿಶೀಲಿಸಬಹುದು.
https://electoralsearch.in ಸೈಟ್ ಗೆ ಭೇಟಿ ನೀಡಿ, ಸರ್ಚ್ ಬೈ ಎಪಿಕ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಗುರುತಿನ ಚೀಟಿಯ ಸಂಖ್ಯೆ, ರಾಜ್ಯ, ಕ್ಯಾಪ್ಚಾ ಕೋಡ್ ನ್ನು ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ವಿವರ ಮೂಡುತ್ತದೆ.
ಇದನ್ನೂ ಓದಿ; ಜಿಲ್ಲೆಯ ಹಲವು ಕಡೆ ಬಜರಂಗದಳದ ಕಾರ್ಯಕರ್ತರಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ
ಗಮನಿಸಬೇಕಾದ ಸಂಗತಿ ಎಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಚುನಾವಣೆಗೆ ಕನಿಷ್ಠ 10 ದಿನಗಳ ಮೊದಲು ಪರಿಶೀಲನೆ ಮಾಡಬೇಕು. ಇದರಿಂದ ಯಾವುದೇ ರೀತಿಯ ದೋಷವನ್ನು ಆದಷ್ಟು ಬೇಗ ಸರಿಪಡಿಸಬಹುದು.