Sunday, October 1, 2023
Homeಮಲೆನಾಡುಚಿಕ್ಕಮಗಳೂರುಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ತಂಪೆರೆದ ವರುಣದೇವ

ಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ತಂಪೆರೆದ ವರುಣದೇವ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನ ಚಿಕ್ಕಮಗಳೂರಿನಲ್ಲಿ ವರ್ಷದ ಮೊದಲ ಮಳೆ, ಬಿಸಿಲಿನಿಂದ ತತ್ತರಿಸಿರುವ ಮಲೆನಾಡಿಗೆ ವರುಣದೇವ ತಂಪೆರೆದಿದ್ದಾನೆ. ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ; ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಚಿಕ್ಕಮಗಳೂರು ಸೇರಿದಂತೆ ಬಾಳೆಹೊನ್ನೂರಿನ ಸುತ್ತಮುತ್ತ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದೆ. ಇದರಿಂದ ಮಲೆನಾಡಿಗರಲ್ಲಿ ಸಂತಸ ತಂದಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಇನ್ನು ಚಿಕ್ಕಮಗಳೂರಿನ ಹಲವೆಡೆ ದಟ್ಟ ಮೋಡಕವಿದ ವಾತಾವರಣವಿದೆ. ಮುಂದಿನ 24 ಗಂಟೆಗಳ ಕಾಲ ಕೆಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ; ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ

ಚುನಾವಣಾ ಮೆರವಣಿಗೆಗೆ ಮಕ್ಕಳ ಬಳಕೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ

ದಿನಾಂಕ 18 ಏಪ್ರಿಲ್ 2023ರಂದು ಕೊಡಗಿನ ವಿರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆಗೆ ಮಕ್ಕಳನ್ನು ಬಳಕೆ ಮಾಡಿಕೊಂಡ ಕುರಿತು ಗಂಭೀರ ಆರೋಪ ಕೇಳಿಬಂದಿದ್ದು ಈ ಘಟನೆ ಸಂಬಂಧ ಚುನಾವಣೆ ಆಯೋಗ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ;  ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಸಾವಿರಾರು ಸಂಖ್ಯೆ ಜನರೊಂದಿಗೆ ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ರ್ಯಾಲಿ ನಡೆಸಿದ್ದರು.

ಈ ಸಂದರ್ಭದಲ್ಲಿ ನೂರಾರು ಮಕ್ಕಳು ಕಾಂಗ್ರೆಸ್ ಶಾಲು, ಟೋಪಿ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು

ಚುನಾವಣಾ ಆಯೋಗ ಈಗಾಗಲೇ 18 ವರ್ಷದೊಳಗಿನ ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದ್ಧು ಈ ಬೆಳವಣಿಗೆ ಸಂಬಂಧ ಚುನಾವಣೆ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ

ಹಣ ನೀಡಿ ಜನರನ್ನು ಕರೆತಂದರು:

ಇನ್ನು ಹಣ ನೀಡಿ ಮೆರವಣಿಗೆಗೆ ಜನರನ್ನು ಕರೆದುಕೊಂಡು ಬಂದಿರುವುದು ಹಾಗೂ ಹೊರ ಊರುಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಂದಿದ್ದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಸಾಕಷ್ಟು ವೈರಲ್ ಆಗಿದೆ.

Most Popular

Recent Comments