Sunday, September 24, 2023
Homeಮಲೆನಾಡುಪೊಲೀಸ್ ಕಾನ್ ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲು

ಪೊಲೀಸ್ ಕಾನ್ ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲು

ಭದ್ರಾವತಿ/ಸಾಗರ: (ನ್ಯೂಸ್ ಮಲ್ನಾಡ್ ವರದಿ) ನ್ಯೂಟೌನ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸರ ವಿರುದ್ಧವೇ ಸಾಗರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ವಿಚಾರಣೆಯ ಹೆಸರಿನಲ್ಲಿ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳು ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿಗೆ, ತೇಜೋವಧೆ, ಕಿರುಕುಳ ಮತ್ತು ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರು ದಾಖಲಾಗಿದೆ. ತೀರ್ಥಲಿಂಗೇಶ್ ಮತ್ತು ರಂಗಪ್ಪ ವಿರುದ್ಧ ದೂರು ದಾಖಲಾಗಿರುವ ಕಾನ್ ಸ್ಟೇಬಲ್ ಗಳು.

ಇದನ್ನೂ ಓದಿ; ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಅರಣ್ಯ ಜಾಗೃತದಳದ ಮಹಿಳಾ ಕಾನ್ ಸ್ಟೇಬಲ್ ನಿಂದ ಈ ದೂರು ದಾಖಲಾಗಿದ್ದು, ಬೆಂಗಳೂರಿನಲ್ಲಿ ಜೀವನ್ ಭೀಮಾ ನಗರ ಠಾಣೆಯಲ್ಲಿ ಕೆಲಸ ಮಾಡುವಾಗ ಆನಂದ್ ಬಿ ಪಾಟೀಲ್ ಎಂಬುವರು ಅತ್ಯಾಚಾರ ನಡೆಸಿದ್ದು, ಈ ಪ್ರಕರಣದ ವಿಚಾರಣೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ತೀರ್ಥಲಿಂಗೇಶ್ ಎಂಬುವರು ಮಾಹಿತಿ ಕಲೆಹಾಕಲು ನೇಮಕವಾಗಿದ್ದರು.

ಇದನ್ನೂ ಓದಿ; ಬಾವಿಗೆ ಹಾರಿ ರೈತ ಅತ್ಮಹತ್ಯೆ

ಈ ಕುರಿತು ಮಹಿಳಾ ಕಾನ್ ಸ್ಟೇಬಲ್ ಊರಿಗೆ ತೆರಳಿ ಅಕ್ಕಪಕ್ಕದಲ್ಲಿ ವಿಚಾರಣೆ ನಡೆಸಿದ ತೀರ್ಥಲಿಂಗೇಶ್ ನನ್ನ ವಿರುದ್ಧದ ಅಪಪ್ರಚಾರದಲ್ಲಿ ತೊಡಗಿರುವುದಾಗಿ ಮಹಿಳಾ ಕಾನ್ ಸ್ಟೇಬಲ್ ದೂರಿದ್ದಾರೆ. ಹಾಗೂ ತೀರ್ಥಲಿಂಗೇಶ್ ಗೆ ಕರೆ ಮಾಡಿ ಊರೆಲ್ಲ ನನ್ನ ವಿಷಯ ಪ್ರಸ್ತಾಪಿಸುತ್ತಿದ್ದೀರ ಎಂದು ಕೇಳಿದ್ದಕ್ಕೆ ತೀರ್ಥಲಿಂಗೇಶ್ ಮಹಿಳೆಗೆ ಬೈದಿರುವುದಾಗಿ ಆರೋಪಿಸಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಎಫ್ ಐಆರ್ ನಲ್ಲಿ ಏನಿದೆ?:
ಮಾ.29 ರಂದು ಮಹಿಳಾ ಕಾನ್ ಸ್ಟೇಬಲ್ ಗೆ ಪದೇ ಪದೇ ಕರೆ ಮಾಡಿ ಬೆಳಗಾವಿಗೆ ಹೋಗಿ ಆನಂದ ಬಿ. ಪಾಟೀಲ್ ಮನೆ ಎದುರು ವಿಷದ ಬಾಟಲು ಹಿಡಿದು ಧರಣಿ ನಡೆಸಿ ಎಂದು ಪ್ರಚೋದಿಸಲಾಗಿದೆ ಎಂದು ಸಹ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಏ.14 ರಂದು ಮಹಿಳಾ ಕಾನ್ ಸ್ಟೇಬಲ್ ಸಾಗರದ ಜ್ಯೂ. ಕಾಲೇಜಿನ ಮುಂದೆ ಸಾಗುವಾಗ ತೀರ್ಥಲಿಂಗೇಶ್, ರಂಗಪ್ಪ ವೇಲು ಹಿಡಿದು ಎಳೆದು ಮಾನಭಂಗಕ್ಕೆ ಪ್ರಯತ್ನಿಸಿದ್ದು ಹಲ್ಲೆ ಮಾಡಿರುವುದಾಗಿ ದೂರಿದ್ದಾರೆ. ಸಾಗರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ; ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ಆರೋಪಿ ಬಂಧನ

ಚುನಾವಣಾ ಮೆರವಣಿಗೆಗೆ ಮಕ್ಕಳ ಬಳಕೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ

ದಿನಾಂಕ 18 ಏಪ್ರಿಲ್ 2023ರಂದು ಕೊಡಗಿನ ವಿರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆಗೆ ಮಕ್ಕಳನ್ನು ಬಳಕೆ ಮಾಡಿಕೊಂಡ ಕುರಿತು ಗಂಭೀರ ಆರೋಪ ಕೇಳಿಬಂದಿದ್ದು ಈ ಘಟನೆ ಸಂಬಂಧ ಚುನಾವಣೆ ಆಯೋಗ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ;  ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಸಾವಿರಾರು ಸಂಖ್ಯೆ ಜನರೊಂದಿಗೆ ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ರ್ಯಾಲಿ ನಡೆಸಿದ್ದರು.

ಈ ಸಂದರ್ಭದಲ್ಲಿ ನೂರಾರು ಮಕ್ಕಳು ಕಾಂಗ್ರೆಸ್ ಶಾಲು, ಟೋಪಿ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು

ಚುನಾವಣಾ ಆಯೋಗ ಈಗಾಗಲೇ 18 ವರ್ಷದೊಳಗಿನ ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದ್ಧು ಈ ಬೆಳವಣಿಗೆ ಸಂಬಂಧ ಚುನಾವಣೆ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ

ಹಣ ನೀಡಿ ಜನರನ್ನು ಕರೆತಂದರು:

ಇನ್ನು ಹಣ ನೀಡಿ ಮೆರವಣಿಗೆಗೆ ಜನರನ್ನು ಕರೆದುಕೊಂಡು ಬಂದಿರುವುದು ಹಾಗೂ ಹೊರ ಊರುಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಂದಿದ್ದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಸಾಕಷ್ಟು ವೈರಲ್ ಆಗಿದೆ.

Most Popular

Recent Comments