ತೆಲಂಗಾಣ: “ಮಹಾತ್ಮಾ ಗಾಂಧಿಯವರ ಸಲಹೆಯ ಆಧಾರದ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನದ ಅರ್ಜಿಗಳನ್ನು ಬರೆದಿದ್ದಾರೆ” ಎಂದಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ‘ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಶೀಘ್ರದಲ್ಲಿಯೇ ಬಿಜೆಪಿ ‘ರಾಷ್ಟ್ರಪಿತ’ ಎಂದು ಘೋಷಿಸಲಿದೆ” ಎಂದು ಹೇಳಿದ್ದಾರೆ.
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷದವರು ವಿಕೃತ ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ, ಇವರು ಇದೇ ರೀತಿ ಮುಂದುವರೆದರೆ ಅವರು ರಾಷ್ಟ್ರಪಿತ ಗಾಂಧೀಜಿಯನ್ನು ತೆಗೆದುಹಾಕಿ ಮಹಾತ್ಮಾ ಗಾಂಧಿಯ ಹತ್ಯೆ ಮಾಡಿದ್ದ ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸುತ್ತಾರೆ ಎಂದು ಹೇಳಿದರು.
ಮಂಗಳವಾರ ನಡೆದ ಸಾವರ್ಕರ್ ರವರ ಜೀವನವದ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಂತಹ ಸಚಿವ ರಾಜನಾಥ್ ಸಿಂಗ್ ರವರು ಮಹಾತ್ಮಾ ಗಾಂಧಿಯವರ ಸಲಹೆಯನ್ನು ಆಧರಿಸಿ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಯನ್ನು ಬರೆದಿದ್ದರು ಎಂದು ಹೇಳಿದ್ದರು.