ನವದೆಹಲಿ: ಸತತ 1 ವರ್ಷದಿಂದ ಕೃಷಿ ಸಂಬಂಧ ಕಾನೂನುಗಳು, ಕಾಯ್ದೆಗಳು, ಇತರ ವಿಷಯಗಳ ಕುರಿತಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 11 ಶನಿವಾರದಂದು ತಮ್ಮ ಪ್ರತಿಭಟನೆಯನ್ನು ಕೊನೆಗೂಳಿಸುವುದಾಗಿ ಘೋಷಿಸಿದ್ದಾರೆ.
ನವೆಂಬರ್ 21 ರಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಮುಖರು 6ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿಗೆ ಪತ್ರವನ್ನು ನೀಡಿದ ನಂತರ ಕೇಂದ್ರ ಸರ್ಕಾರ ಬುಧವಾರ ಎಸ್ ಕೆ ಎಂ ನ 5 ಜನ ಸದಸ್ಯ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು ತಾವು ಎತ್ತಿದ ಹಲವಾರು ಬೇಡಿಕೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಕೃಷಿ ಕಾನೂನುಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿ ಸೇರಿದಂತೆ ಇತರ ರೈತ ಕಾಯ್ದೆಗಳ ವಿಷಯಗಳ ಕುರಿತು ಪ್ರತಿಭಟನೆ ನಡೆಸುತ್ತಿರುವ ಶನಿವಾರ ಪ್ರತಿಭಟನೆಯನ್ನು ನಿಲ್ಲಿಸಿ ಮನೆಗಳಿಗೆ ಹಿಂತಿರುಗಲಿದ್ದಾರೆ.
ಪ್ರತಿಭಟನೆ ನಿರತ ರೈತ ಸಂಘಗಳು ಇಂದು ಸಂಜೆ 5-30 ರ ಸಮಯದಲ್ಲಿ ವಿಜಯ ಪ್ರಾರ್ಥನೆ (ಫತೇಹ್ ಅರ್ದಾಸ್), ಡಿಸೆಂಬರ್ 11 ರಂದು ಬೆಳಿಗ್ಗೆ 9 ಗಂಟೆಯ ವೇಳೆ ದೆಹಲಿಯ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಪ್ರತಿಭಟನಾ ಸ್ಥಳಗಳಲ್ಲಿ ವಿಜಯ ಮೆರವಣಿಗೆ ( ಫತೇಜ್ ಮಾರ್ಚ್ ) ನನ್ನು ನಡೆಸಲು ತೀರ್ಮಾನಿಸಿವೆ ಎಂಬ ಮಾಹಿತಿ ಲಭಿಸಿದೆ.