ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೈತರ ಪ್ರತಿಭಟನೆಯ ಕುರಿತು ದೆಹಲಿ, ಉತ್ತರಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳಿಗೆ ನೋಟೀಸ್ ಕಳುಹಿಸಿದೆ.
ದೇಶದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವಂತಹ ರೈತರ ಪ್ರತಿಭಟನೆಯಿಂದಾಗಿ ಸಾರಿಗೆ, ಕಾರ್ಖಾನೆ ಉದ್ದಿಮೆ ಹಾಗೂ ಕೊರೊನಾ ಮಾರ್ಗಸೂಚಿಯ ಪಾಲನೆ ಮಾಡುವ ವಿಷಯಗಳಲ್ಲಿ ದುಷ್ಪರಿಣಾಮ ಉಂಟಾಗಿದೆ ಎಂದು ನೋಟೀಸ್ ನಲ್ಲಿ ಹೇಳಿದೆ.
ರೈತರ ಪ್ರತಿಭಟನೆಯಿಂದಾಗಿ 9000 ಸಣ್ಣ, ಮಧ್ಯಮ ಮತ್ತು ದೊಡ್ಡ ಕಂಪನಿಗಳಿಗೆ ಅಪಾರವಾದ ನಷ್ಟ ಸಂಭವಿಸಿದೆ. ಈ ಬಗ್ಗೆ ತನ್ನ ಬಳಿ ದೂರುಗಳು ಬರುತ್ತಲೇ ಇರುವುದಾಗಿ ಆಯೋಗ ತಿಳಿಸಿದೆ.
ಅಲ್ಲದೆ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಸಂಭವಿಸುತ್ತಿದೆ. ರಾಜ್ಯಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯವನ್ನು ತೋರಿರುವುದಾಗಿ ಆಯೋಗ ಆರೋಪಿಸಿದೆ.