Tuesday, November 28, 2023
Homeಇತರೆಸೆಪ್ಟೆಂಬರ್ 27 ಕ್ಕೆ ಭಾರತ್ ಬಂದ್ :ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರೈತರಿಗೆ ಸಂಪೂರ್ಣ ಬೆಂಬಲ...

ಸೆಪ್ಟೆಂಬರ್ 27 ಕ್ಕೆ ಭಾರತ್ ಬಂದ್ :ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರೈತರಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್,

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಕೇಂದ್ರ ಕೃಷಿ ಕಾಯ್ದೆ ರದ್ದುಪಡಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ಖಚಿತಪಡಿಸಿದೆ. ಇದೀಗ ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಕರೆ ನೀಡುವ ಮುಖಾಂತರ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ರೈತ ಸಂಘಟನೆಯು ಮುಂದಾಗಿದೆ. ರೈತರು ಕರೆ ನೀಡಿದ ಭಾರತ್ ಬಂದ್‌ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲವನ್ನು ನೀಡಿದೆ.

ಕೇಂದ್ರಕ್ಕೆ ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಲು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಸೆಪ್ಟೆಂಬರ್ 27ರಂದು ಭಾರತ್ ಬಂದ್‌ಗೆ ಕರೆಯನ್ನು ನೀಡಿದೆ. ಕಿಸಾನ್ ಮೋರ್ಚಾ ಕರೆಗೆ 300ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲವನ್ನು ಸೂಚಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತ ಸಂಘಟನೆ ಕರೆ ನೀಡಿದ ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.

ಕೇಂದ್ರದ ಕೃಷಿ ಮಸೂದೆಯನ್ನು ಪ್ರಬಲವಾಗಿ ವಿರೋಧಿಸಿದ ಕಾಂಗ್ರೆಸ್. ರೈತ ಸಂಘಟನೆಗಳ ಪ್ರತಿಭಟನೆಗೆ ಆರಂಭದಿoದಲೂ ಬೆಂಬಲವನ್ನು ಸೂಚಿಸಿದ ಕಾಂಗ್ರೆಸ್ ಇತ್ತೀಚೆಗೆ ಕೇಂದ್ರದ ವಿರುದ್ಧದ ಪ್ರತಿಭಟನೆ, ಆಂದೋಲನದ ನಾಯಕತ್ವವನ್ನು ದಿಗ್ವಿಜಯ್ ಸಿಂಗ್‌ಗೆ ನೀಡಲಾಗಿದೆ. ದಿಗ್ವಿಜಯ್ ಸಿಂಗ್ ನಾಯಕತ್ವದಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವಂತಹ ರೈತರ ಕಿಸಾನ್ ಮಹಾಪಂಚಾಯತ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ನೀಡಿದೆ.

ಬಿಜೆಪಿಯೇತರ ಪಕ್ಷಗಳು ಭಾರತ್ ಬಂದ್ ಲಾಭವನ್ನು ಪಡೆಯಲು ಮುಂದಾಗಿದೆ. ಕೇಂದ್ರದ ವಿರುದ್ಧ ಈಗಾಗಲೇ ಅನೇಕ ವಸ್ತುಗಳ ಹಾಗೂ ಅಡುಗೆ ಅನಿಲದ ಬೆಲೆಯೇರಿಕೆಯ ವಿಷಯದಲ್ಲಿ ಪ್ರತಿಭಟನೆ ನಡೆಯುತ್ತಿದೆ ಇದರ ಜೊತೆ ಕೃಷಿ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸುವ ಮುಖಾಂತರ ಕೇಂದ್ರ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಹಾಗೂ ವಿಪಕ್ಷಗಳು ಮುಂದಾಗಿದೆ.

ಕೇoದ್ರ ಸರ್ಕಾರ ರೈತ ಸಂಘಟನೆಗಳ ಬೇಡಿಕೆಯನ್ನು ಈಡೇರಿಸಿಲ್ಲ. ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಅನ್ನೋದೇ ನಮ್ಮ ಬೇಡಿಕೆ. ಇದರಲ್ಲಿ ತಿದ್ದುಪಡಿಯ ಅಗತ್ಯವಿಲ್ಲ ಎಂದು ರೈತ ಸಂಘಟನಗಳು ಪುನರುಚ್ಚರಿಸಿದೆ. ಪ್ರತಿಭಟನಾ ನಿರತ ರೈತರೊಂದಿಗೆ ಕಳದ 9 ತಿಂಗಳಲ್ಲಿ ಕೇಂದ್ರ ಸರ್ಕಾರ 11 ಸಭೆಯನ್ನು ನಡೆಸಿದೆ ವಿಪರ್ಯಾಸವೆಂದರೆ ನಡೆಸಬೇಕಿದ್ದ ಆ 11 ಸಭೆಗಳು ವಿಫಲವಾಗಿದೆ ಎಂದು ತಿಳಿಸಿದ್ದಾರೆ.

Most Popular

Recent Comments