Friday, June 9, 2023
Homeಇತರೆಪ್ರತಿಭಟನಾ ನಿರತ ರೈತರು "ಕೆಲಸವಿಲ್ಲದ ಕುಡುಕರು" ಎಂದಿದ್ದ ಬಿಜೆಪಿ ಕಾರ್ಯಕರ್ತನಿಗೆ ಕರಿಪತಾಕೆ ತೋರಿಸಿ ದಾಳಿ ನಡೆಸಿದ...

ಪ್ರತಿಭಟನಾ ನಿರತ ರೈತರು “ಕೆಲಸವಿಲ್ಲದ ಕುಡುಕರು” ಎಂದಿದ್ದ ಬಿಜೆಪಿ ಕಾರ್ಯಕರ್ತನಿಗೆ ಕರಿಪತಾಕೆ ತೋರಿಸಿ ದಾಳಿ ನಡೆಸಿದ ರೈತರು.

ಹಿಸಾರ್: ಪ್ರತಿಭಟನಾನಿರತ ರೈತರನ್ನು ಕುಡುಕರು ಎಂದ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ರವರ ಮೇಲೆ ರೈತರು ಕರಿಪತಾಕೆ ತೋರಿಸಿ ದಾಳಿಯನ್ನು ನಡೆಸಿದ ಪ್ರಕರಣ ದಾಖಲಾಗಿದೆ.

ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಪ್ರತಿಭಟನಾನಿರತ ರೈತರನ್ನು ‘ನಿರುದ್ಯೋಗಿ ಮದ್ಯವ್ಯಸನಿಗಳು’ ಎಂದಿದ್ದರು.

ಗುರುವಾರ ರೋಹ್ಟಕ್‌ನಲ್ಲಿ ಗೋಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಮ್ ಚಂದರ್ ಅಲ್ಲಿಯೂ ರೈತರ ಪ್ರತಿಭಟನೆ ನಡೆಸಿದಾಗ ಪ್ರತಿಭಟನಾಕಾರರನ್ನು ‘ನಿರುದ್ಯೋಗಿ ಮದ್ಯವ್ಯಸನಿಗಳು’ ಎಂದು ಅವರು ಟೀಕಿಸಿದ್ದರಲ್ಲದೆ ಪ್ರತಿಭಟಿಸುತ್ತಿರುವ ಜನರಲ್ಲಿ ಯಾರೂ ಸಹ ರೈತರಲ್ಲ ಇವರೆಲ್ಲರೂ ಕೆಟ್ಟ ಶಕ್ತಿಗಳು ಅವರನ್ನು ಜನರೂ ಕೂಡ ತೀವ್ರವಾಗಿ ವಿರೋಧಿಸುತ್ತಿದ್ದಾರೆ, ದೆಹಲಿಯಲ್ಲಿ ನೋಡಿದಾಗ ಪ್ರತಿಭಟನಾ ಸ್ಥಳದಲ್ಲಿರುವ ಅನೇಕ ಟೆಂಟುಗಳು ಖಾಲಿಯಾಗಿವೆ, ಈ ಸಮಸ್ಯೆ ಶೀಘ್ರವೇ ಕೊನೆಗೂಳ್ಳುತ್ತದೆ ಎಂದು ಹೇಳಿದ್ದರು.

ಅವರ ಈ ಹೇಳಿಕೆಗಳಿಗೆ ಆಕ್ರೋಶಗೊಂಡ ರೈತರು ಇಂದು ಹರಿಯಾಣದ ಹಿಸಾರ್ ಜಿಲ್ಲೆಯ ನಮೌಂದ್ ನಗರಕ್ಕೆ ಧರ್ಮಶಾಲೆಯೊಂದರ ಉದ್ಘಾಟನೆಗೆ ಇವರು ಆಗಮಿಸಿದ ವೇಳೆ ಇವರ ಮೇಲೆ ದಾಳಿಯನ್ನು ನಡೆಸಿದೆ. ದಾಳಿಯಲ್ಲಿ ರಾಮ್ ಚಂದರ್ ರವರ ಕಾರು ನುಜ್ಜುಗೂಜ್ಜಾಗಿದೆ ಎಂದು ತಿಳಿದುಬಂದಿದೆ.

Most Popular

Recent Comments