ಪ್ರತಿಭಟನೆಯಲ್ಲಿ ನಿರತರಾಗಿದ್ದಂತಹ ರೈತರ ಮೇಲೆ ದಾಳಿಯನ್ನು ಮಾಡಲು ಆದೇಶಿಸುತ್ತಿದ್ದಂತಹ ಹರಿಯಾಣಾ ಸರ್ಕಾರದ ಉನ್ನತ ಅಧಿಕಾರಿಯವರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
‘ರೈತರ ತಲೆಗಳನ್ನು ಒಡೆಯಿರಿ’ ಎಂದು ಪೊಲೀಸ್ ಸಿಬ್ಬಂದಿಗೆ ಆದೇಶ ಕೊಟ್ಟ ಕರ್ನಲ್ ಜಿಲ್ಲೆಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಶ್ ಸಿನ್ಹಾರನ್ನು ಹರಿಯಾಣಾ ಸರ್ಕಾರದ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
“ಅದೇನೇ ಆಗಲಿ, ಯಾರೊಬ್ಬರೂ ಈ ಬ್ಯಾರಿಕೇಡ್‌ಗಳನ್ನು ದಾಟಕೂಡದು. ಸ್ಪಷ್ಟವಾಗಿ ಹೇಳುತ್ತೇನೆ, ಈ ಗೆರೆ ದಾಟಲು ನೋಡುವ ರೈತ ಮಂದಿಯ ತಲೆಗಳನ್ನು ಒಡೆಯಿರಿ. ನಾನು ಕರ್ತವ್ಯದಲ್ಲಿರುವ ಮ್ಯಾಜಿಸ್ಟ್ರೇಟ್ ಹಾಗೂ ನಾನು ನಿಮಗೆ ಈ ಸೂಚನೆಗಳನ್ನು ಲಿಖಿತವಾಗಿ ಕೊಡುತ್ತಿದ್ದೇನೆ. ನಿಮ್ಮ ಲಾಠಿಗಳಲ್ಲಿ ಅವರ ಮೇಲೆ ದಾಳಿಯನ್ನು ನಡೆಸಿ ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ವರ್ಗದವರು ಇದ್ದಾರೆ. ಕಳೆದ ಎರಡು ದಿನಗಳಿಂದ ನಾವು ನಿದ್ರೆಯನ್ನು ಮಾಡಿಲ್ಲ. ಆದರೆ ನೀವಿಲ್ಲಿಗೆ ಸ್ವಲ್ಪ ನಿದ್ರೆ ಮಾಡಿದ ಬಳಿಕ ಬಂದಿದ್ದೀರಿ. ಬೇಲಿ ದಾಟಿ ಯಾರೂ ಸಹ ನನ್ನನ್ನು ಭೇಟಿ ಮಾಡಕೂಡದು, ಮಾಡಲಾಗುವುದು ಇಲ್ಲ” ಎಂದು ಸಿನ್ಹಾ ತಿಳಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಅಧಿಕಾರಿಯ ಪದಬಳಕೆ ತಪ್ಪು, ರೈತರು ಮಾಡಿರುವಂತಹ ಪ್ರತಿಭಟನೆಯು ಸರಿಯಾದುದ್ದಲ್ಲ, “ಅವರು ಪ್ರತಿಭಟನೆ ಮಾಡಬೇಕೆಂದಿದ್ದರೆ, ಶಾಂತಿಯುತವಾಗಿ ಮಾಡಬೇಕಿತ್ತು. ಹೆದ್ದಾರಿಗಳನ್ನು ಬಂದ್ ಮಾಡಿ ಪೊಲೀಸರ ಮೇಲೆ ಕಲ್ಲು ತೂರಿದರೆ, ಪೊಲೀಸರು ಕಾನೂನು ಪಾಲನೆಯನ್ನು ಮಾಡಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಘಟನೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರವರು ತಿಳಿಸಿದ್ದಾರೆ.
ಮುಂಬರುವ ಪಾಲಿಕೆ ಚುನಾವಣೆಗಳ ಕುರಿತು ಮನೋಹರ್‌ಲಾಲ್ ಸರ್ಕಾರದ ಸಭೆಯೊಂದನ್ನು ವಿರೋಧಿಸಿ ರೈತರು ಧರಣಿಯನ್ನು ನಡೆಸುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ನಾಂದಿಯಾಗಿದೆ.