ಬೆಂಗಳೂರು: ರಸ್ತೆ ಅಪಘಾತಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 43 ವರ್ಷದ ವ್ಯಕ್ತಿ ಬೆಂಗಳೂರಿನ ಆರು ಮಂದಿಗೆ ಅಂಗಾoಗ ದಾನ ಮಾಡಿದ್ದಾರೆ.
ಬಿಡದಿಯ ರೈತ ನಂಜುoಡಯ್ಯ ಅಪಘಾತವಾಗಿ ಜುಲೈ 26 ರಂದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿತ್ತು.
ಅಪಘಾತದಿಂದ ನಂಜುoಡಯ್ಯ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಪರೀಕ್ಷೆ ನಡೆಸಿದ ವೈದ್ಯರು ಅವರನ್ನು ಐಸಿಯುನಲ್ಲಿರಿಸಿದ್ದರು. ನರರೋಗ ತೀವ್ರ ಘಟಕದಲ್ಲಿದ್ದ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು.
ರೋಗಿಯ ಕುಟುಂಬಸ್ಥರೊoದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಅವರ ಮಿದುಳು ಸಾವನ್ನಪ್ಪಿರುವುದನ್ನು ತಿಳಿಸಿದರು. ನಂತರ ಅಂಗಾoಗ ದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದರು. ನಂಜುoಡಯ್ಯ ಅವರ ಅಂಗಾoಗ ದಾನದಿಂದ ಆರು ಮಂದಿಗೆ ಜೀವದಾನ ನೀಡಲಾಯಿತು. ಅದಾದ ನಂತರ ಆಗಸ್ಟ್ 2ರಂದು ಅವರು ಸಾವನ್ನಪ್ಪಿದರು ಎಂದು ಬಿಜಿಎಸ್ ಆಸ್ಪತ್ರೆ ನರ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಎನ್.ಕೆ ವೆಂಕಟರಾಮ ತಿಳಿಸಿದ್ದಾರೆ.