ಬೆಂಗಳೂರು: ಅಪ್ಪು- ಪಪ್ಪು ಖ್ಯಾತಿಯ ಸ್ನೇಹಿತ್, ಬೌನ್ಸರ್ ಮತ್ತು ಆತನ ಕುಟುಂಬದವರ ಮೇಲೆ ಕೆಲಸದವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದೂರು ದಾಖಲಾಗಿದೆ.
ಸೌಂದರ್ಯ ಜಗದೀಶ್, ಪತ್ನಿ ರೇಖಾ, ಪುತ್ರ ಸ್ನೇಹಿತ್ ಮತ್ತು ಬೌನ್ಸರ್ಗಳಿಂದ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ಶನಿವಾರ ಸಂಜೆ ಉದ್ಯಮಿ ಮಂಜುಳಾ ಪುರುಷೋತ್ತಮ್ ಎಂಬವರ ಮನೆ ಕೆಲಸವರಾದ ನೀಲಮ್ಮ ಮತ್ತು ಅವರ ಪುತ್ರಿ ಅನುರಾಧಾ ಎಂಬುವವರ ಮೇಲೆ ನಟ ಸ್ನೇಹಿತ್ ಹಲ್ಲೆಯನ್ನು ನಡೆಸಿದ್ದಾರೆ, ನೀಲಮ್ಮ ಮತ್ತು ಅನುರಾಧಾ ಮನೆಯ ಹೊರಗಡೆ ಸ್ವಚ್ಛಗೊಳಿಸುತ್ತಿದ್ದಾಗ ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮನೆ ಸಿಬ್ಬಂದಿ ಒಬ್ಬರಿಗೆ ಕಸ ತಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಳಿಕ ಸೌಂದರ್ಯ ಜಗದೀಶ್ ಅವರ ಪುತ್ರ, ನಟನೂ ಆಗಿರುವ ಮಾಸ್ಟರ್ ಸ್ನೇಹಿತ್, ಆತನ ತಾಯಿ ರೇಖಾ ಜಗದೀಶ್ ಮತ್ತು ಭದ್ರತಾ ಸಿಬ್ಬಂದಿ ಸೇರಿ ಕೆಲಸದವರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ. ಈ ಹಿಂದೆಯೂ ಮಾಸ್ಟರ್ ಸ್ನೇಹಿತ್ ಮತ್ತು ಸ್ನೇಹಿತರಿಂದ ಪುಂಡಾಟಿಕೆ ನಡೆದಿದ್ದು, ಇದು ಮೂರನೇ ಸಲ ಎಂದು ತಿಳಿದುಬಂದಿದೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಇಳಿಯುತ್ತಿದ್ದಂತೆ ಇಡೀ ಕುಟುಂಬ ಪೋಲೀಸರ ಕೈಗೆ ಸಿಗದೆ ತಲೆಮಾರೆಸಿಕೊಂಡಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇತ್ತ ಬಂಧನ ಭೀತಿಯಿಂದ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆಬೀಸಿದ್ದು ತನಿಖೆ ಮುಂದುವರೆಸಿದ್ದಾರೆ, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.