ವಿಜಯವಾಡ: ಬೈಕ್‌ನಲ್ಲಿ ಬರುತ್ತಿದ್ದ ಸಬ್ ಇನ್ಸ್ಪೆಕ್ಟರ್ ಮೇಲೆ ಅನುಮಾನ ಮೂಡಿ ಆತನನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುವಾಗ ಎಲ್ಲರು ಶಾಕ್ ಆಗುವಂತಹ ಸಂಗತಿ ಬಯಲಾದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಬೈಕನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಆತ ಒರಿಜಿನಲ್ ಪೊಲೀಸ್ ಅಲ್ಲ, ಅವನೊಬ್ಬ ನಕಲಿ ಪೊಲೀಸ್ ಎಂಬುದು ತಿಳಿದಿದ್ದು, ವಿಶಾಖಪಟ್ಟಣದ ಅಂಕಪಲ್ಲಿ ಪಟ್ಟಣ ಪೊಲೀಸರು ನಕಲಿ ಎಸ್‌ಐನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪುಡಿ ಮಹೇಶ್ ಅಲಿಯಾಸ್ ಮತ್ಸ್ಯರಾಜು ಎಂದು ಗುರುತಿಸಲಾಗಿದೆ. ಈತ ಆಂಧ್ರದ ಚಿಡಿಕಡಾ ಮಂಡಲದ ವೀರಭದ್ರ ರಾವ್ ಪೇಟಾ ಗ್ರಾಮದ ನಿವಾಸಿಯಾಗಿದ್ದಾನೆ.
ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ತಪ್ಪಿಸಿಕೊಳ್ಳಲು ನಕಲಿ ಎಸ್‌ಐ ಪ್ರಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ. ಪೊಲೀಸ್ ಯೂನಿಫಾರ್ಮ್, ಸ್ಟಾರ್ಸ್ ಮತ್ತು ವಿಸಲ್ ಗಾರ್ಡ್ ಎಲ್ಲವನ್ನು ಖರೀದಿಸಿದ್ದಾನೆ. ಸಿನಿಮಾ ಶೂಟಿಂಗ್‌ಗಾಗಿ ಎಸ್‌ಐ ವೇಷ ದೊರೆಯುವ ವಿಶಾಖಪಟ್ಟಣಂ ಮಾರ್ಕೆಟ್ ನ ಒಂದು ಆಂಗಡಿಯಲ್ಲಿ ಎಲ್ಲವನ್ನು ಖರೀದಿ ಮಾಡಿದ್ದಾನೆ.
ಯೂನಿಫಾರ್ಮ್ ಮಾತ್ರವಲ್ಲ ಆರೋಪಿ ನಕಲಿ ಐಡಿಯನ್ನು ಕೂಡ ಸೃಷ್ಟಿ ಮಾಡಿಕೊಂಡಿದ್ದಾನೆ. ಡ್ರೈವಿಂಗ್ ಲೈಸೆನ್ಸ್ ನನ್ನು ಪಡೆದುಕೊಳ್ಳಲು ಆರೋಪಿ ಯೂನಿಫಾರ್ಮ್ ನಲ್ಲಿಯೇ ಆರ್‌ಟಿಒ ಕಚೇರಿಗೆ ಹೋಗಿದ್ದ ಎಂದು ತಿಳಿದುಬಂದಿದೆ. ಗುರುವಾರ ಅಂಕಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತ ಬೈಕ್ ರೈಡ್ ಮಾಡುವಾಗ ಅನುಮಾನ ಬಂದ ಹಿನ್ನೆಲೆಯಲ್ಲಿ ಮಹೇಶ್‌ನನ್ನು ಪೋಲೀಸರು ಬಂಧಿಸಲಾಗಿದೆ. ಈ ಆರೋಪಿಯ ಮೇಲೆ ವಂಚನೆಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.