Sunday, September 24, 2023
Homeವಿಶೇಷತಂತ್ರಜ್ಞಾನವಾಟ್ಸಾಪ್, ಫೇಸ್ಬುಕ್ ನಲ್ಲಿ ತಾಂತ್ರಕ ದೋಷ, ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಫೇಸ್ಬುಕ್

ವಾಟ್ಸಾಪ್, ಫೇಸ್ಬುಕ್ ನಲ್ಲಿ ತಾಂತ್ರಕ ದೋಷ, ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಫೇಸ್ಬುಕ್

ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು ಬರೋಬ್ಬರಿ 8 ಗಂಟೆಗಳ ಬಳಿಕ ಸರಿಯಾಗಿದೆ.


ನಿನ್ನೆ ಸುಮಾರು ರಾತ್ರಿ 9:15 ರಿಂದ ಇಂದು ಬೆಳಿಗ್ಗೆ 5:45ರವರೆಗೂ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಈ ಸಮಸ್ಯೆ ಕಂಡುಬಂದಿದೆ. ವಾಟ್ಸಾಪ್ ನಲ್ಲಿ ಸಂದೇಶ ರವಾನೆ, ಸ್ಟೇಟಸ್ ಹಾಗೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಯಾವುದೇ ಪೇಜ್ ಗಳು ಕೂಡ ಲೋಡ್ ಆಗುತ್ತಿರಲಿಲ್ಲ. ಈ ಕುರಿತು ಫೇಸ್ಬುಕ್ ಸಂಸ್ಥೆ ‘ಕ್ಷಮಿಸಿ, ತಾಂತ್ರಿಕ ದೋಷ ಉಂಟಾಗಿದ್ದು ಆದಷ್ಟು ಬೇಗ ಇದನ್ನು ಸರಿಪಡಿಸಲಿದ್ದೇವೆ’ ಎಂದು ನಿನ್ನೆ ರಾತ್ರಿಯೇ ತನ್ನ ವೆಬ್ ಸೈಟ್ ಹಾಗೂ ಟ್ವಿಟರ್ ಮೂಲಕ ತನ್ನ ಬಳಕೆದಾರರಿಗೆ ಕ್ಷಮೆಯಾಚಿಸಿತ್ತು. ಇಂದು ಮುಂಜಾನೆಯಿಂದ ಸುಮಾರು 8 ಗಂಟೆಯ ಬಳಿಕ ಮತ್ತೆ ಕಾರ್ಯನಿರ್ವಹಿಸುತ್ತಿವೆ. ಈ ರೀತಿಯ ಸಮಸ್ಯೆಗಳು ವಾಟ್ಸಾಪ್ ನಲ್ಲಿ ಈ ಹಿಂದೆಯೂ ಕಾಣಿಸಿಕೊಂಡಿತ್ತು.

ಕೇವಲ ಭಾರತ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.

Most Popular

Recent Comments