ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನಗೊಂಡ ನಂತರ ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ ಹೆಲಿಕಾಫ್ಟರ್ ನನ್ನು ಕರ್ಮಕ್ಕೆ ಹೋಲಿಸಿ ಮಾಡಿರುವ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಲ್ಜಿತ್ ಅವರು ಟ್ವಿಟ್ ನಲ್ಲಿ “ಕರ್ಮವೂ ಜನರೊಂದಿಗೆ ವ್ಯವಹರಿಸಲು ತನ್ನದೇ ಆದ ಮಾರ್ಗವನ್ನು ಹೊಂದಿದೆ” ಎಂದು ಬರೆದುಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಅನಿರೀಕ್ಷಿತ ಅವಘಡದಲ್ಲಿ ಬಿಪಿನ್ ರಾವತ್ ರವರ ನಿಧನದಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು, ಸೇನೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳ ಚೇತರೀಕೆಗಾಗಿ ಪ್ರಾರ್ಥನೆ ಸಲ್ಲಿಸುವ ವೇಳೆ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಸಣ್ಣತನದ ಟ್ವಿಟ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಅವರು ಮಾಡಿರುವ ಟ್ವಿಟ್ ವೈರಲ್ ಆಗಿ ಸಾಕಷ್ಟು ಟೀಕೆಗಳು ಎದುರಾದ ಕೂಡಲೇ ತಕ್ಷಣ ಅವರು ಮಾಡಿರುವ ಟ್ವೀಟ್ ನನ್ನು ಡಿಲೀಟ್ ಮಾಡಿದ್ದಾರೆ. ಆದರೂ ಬಲ್ಜಿತ್ ಹಾಕಿದ್ದ ಟ್ವೀಟ್ ವೈರಲ್ ಆಗುತ್ತಿದೆ.