Monday, December 11, 2023
Homeಮಲೆನಾಡುಚಿಕ್ಕಮಗಳೂರುಕಾಫಿನಾಡ ರೆಸಾರ್ಟ್ ನಲ್ಲಿ ನಡೀತಾ ಮಹತ್ವತ ಸಭೆ? ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಕಾಫಿನಾಡ ರೆಸಾರ್ಟ್ ನಲ್ಲಿ ನಡೀತಾ ಮಹತ್ವತ ಸಭೆ? ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹುಟ್ಟು ಹಬ್ಬದ ನೆಪವೊಡ್ಡಿ ಬಿಜೆಪಿ ನಾಯಕರು ಕಾಫಿನಾಡಿನ ಖಾಸಗಿ ರೆಸಾರ್ಟ್ ನಲ್ಲಿ ತಂಗಿ ಪ್ರತಿಪಕ್ಷ ನಾಯಕನ ಆಯ್ಕೆ ಸೇರಿದಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆ ಮಹತ್ವ ಪಡೆದ ಸಭೆ ನಡೆಸಿದ್ದಾರೆ.

ಜೂ.30ರಂದು ತಡರಾತ್ರಿಯಿಂದ ಮಧ್ಯಾಹ್ನದ ತನಕ ಕಾಫಿನಾಡಿನ ರೆಸಾರ್ಟ್‌ನಲ್ಲಿ ತಂಗಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಮುನಿರಾಜು, ವಿ.ಸುನೀಲ್ ಕುಮಾರ್, ಶಾಸಕ ರಾಜುಗೌಡ ಸೇರಿದಂತೆ ಹಲವು ಮುಖಂಡರು ಮುಳ್ಳಯ್ಯನಗಿರಿ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು.

ಇದನ್ನೂ ಓದಿ; ಚಿಕ್ಕಮಗಳೂರು: ಟ್ರೆಕ್ಕಿಂಗ್ ಗೆಂದು ತೆರಳಿದ್ದ 27ರ ಯುವಕ ಹೃದಯಾಘಾತದಿಂದ ಸಾವು

ಪ್ರತೀ ವರ್ಷ ಹುಟ್ಟುಹಬ್ಬಕ್ಕೆ ಚಿಕ್ಕಮಗಳೂರಿಗೆ ಬರ್ತೀನಿ

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಆರ್ ಅಶೋಕ್, ಹುಟ್ಟುಹಬ್ಬಕ್ಕೆ ಪ್ರತಿ ವರ್ಷವೂ ಚಿಕ್ಕಮಗಳೂರಿಗೆ ಬರುತ್ತೇನೆ. ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್, ಸನ್ಮಾನ ಎಲ್ಲವೂ ಇರುತ್ತದೆ. ಅದರ ಬದಲಾಗಿ ಪ್ರಕೃತಿಯ ನಡುವೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಇಷ್ಟ ಅದಕ್ಕಾಗಿ ಇಲ್ಲಿಗೆ ಬರುತ್ತೇನೆ ಎಂದರು. ಮೊದಲು ಇಲ್ಲಿಗೆ ಬಂದು ನಂತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ಕಳೆದ ಬಾರಿ ಸಿ.ಟಿ.ರವಿ ಅವರ ಜೊತೆ ಚಿಕ್ಕಮಗಳೂರು ನಗರದ ಶ್ರೀರಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ನಮ್ಮ ಜೊತೆಗಿದ್ದಾರೆ ಎಂದರು.

ಇದನ್ನೂ ಓದಿ; ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ವರ್ಗಾವಣೆಗೆ ಮಹಿಳೆ ಕಣ್ಣೀರು

ರಾಜಕೀಯದ ಬಗ್ಗೆ ಮಾತನಾಡಲು ಇಲಿ ಬರಬೇಕಾ?

ಇನ್ನು ಈ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ರೆಸಾರ್ಟ್‌ನಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜಕೀಯದ ಬಗ್ಗೆ ಮಾತನಾಡಲು ಇಲ್ಲಿಗೆ ಬರಬೇಕಾ? ವಿಪಕ್ಷ ನಾಯಕನ ಬಗ್ಗೆ ಇಂದು ಸಂಜೆ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾವು ಬಂದಿರೋದು ಶಾಸಕ ಆರ್‌.ಅಶೋಕ್‌ ಹುಟ್ಟುಹಬ್ಬ ಆಚರಣೆಗೆ ಮಾತ್ರ ಎಂದು ಬೊಮ್ಮಾಯಿ ಹೇಳಿದ್ದಾರೆ. ಅವರು ಆರನೇ ವರ್ಷ ಇಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಹೇಳಿದ್ದಾರೆ. ಪ್ರತಿ ವರ್ಷ ಆರ್‌. ಅಶೋಕ್‌ ತಮ್ಮ ಹುಟ್ಟುಹಬ್ಬವನ್ನು ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿಯೇ ಆಚರಿಸಿಕೊಳ್ಳುತ್ತಿದ್ದರು ಎಂದರು.

Related Article: ಚಿಕ್ಕಮಗಳೂರಿನಲ್ಲಿ ಬಿಜೆಪಿ ಸೋತಿದೆ ಹೊರತು ಸತ್ತಿಲ್ಲ: ಹೆಚ್ ಡಿ ತಮ್ಮಯ್ಯ

ಚಿಕ್ಕಮಗಳೂರು: ಕ್ಷೇತ್ರದಲ್ಲಿ ಬಿಜೆಪಿ ಸೋತಿರಬಹುದು ಆದರೆ ಸತ್ತಿಲ್ಲ ಎಂದು ಚಿಕ್ಕಮಗಳೂರು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸೋತಿರಬಹುದು ಆದರೆ ಇನ್ನು ಸತ್ತಿಲ್ಲ. ನಾವು ಒಂದು ಕ್ಷಣ ಕೂಡ ಮೈಮರೆಯುವಂತಿಲ್ಲ ಅದನ್ನು ಎಲ್ಲರು ನೆನಪಿಟ್ಟುಕೊಂಡು ಕೆಲಸ ಮಾಡಬೇಕು. ಇನ್ನು 5 ವರ್ಷ ನಾವು ಮೈಮರೆಯುವಂತಿಲ್ಲ, ನಮ್ಮ ಪಕ್ಷ ನಿಡಿರುವ 5 ಗ್ಯಾರಂಟಿ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಪ್ರಮಾಣಿಕವಾಗಿ ಮಾಡಬೇಕು. ವಿರೋಧ ಪಕ್ಷದವರು ಎಷ್ಟೇ ತೊಂದರೆಯನ್ನೂ ನೀಡಿದರು ಕೂಡ ಅವುಗಳನ್ನೆಲ್ಲಾ ಮೀರಿ ನಾನು ನಮ್ಮ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

Most Popular

Recent Comments