ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಸಚಿವ ಸಂಪುಟದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೆಗಣನೆ ಮತ್ತೆ ಮುಂದುವರಿದಿದೆ. ನಿನ್ನೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ 24 ನೂತನ ಸಚಿವರನ್ನು ಸೇರಿಸಿಕೊಂಡು ಒಟ್ಟು 34 ಸಚಿವರನ್ನೊಳಗೊಂಡ ಪೂರ್ಣಪ್ರಮಾಣದ ಸಂಪುಟ ರಚನೆ ಮಾಡಲಾಗಿದೆ.
ಇದನ್ನೂ ಓದಿ; ಹಿಟ್ ಅಂಡ್ ರನ್; ತಪ್ಪಿದ ಭಾರಿ ಅನಾಹುತ
ಇದನ್ನೂ ಓದಿ; ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆ ಎಂದೇ ಚಿಕ್ಕಮಗಳೂರನ್ನು ನೆನಪಿಸಿಕೊಳ್ಳುವ ಕಾಂಗ್ರೆಸ್, ನಾಯಕರು ಸಚಿವ ಸ್ಥಾನ ಕರುಣಿಸುವ ವಿಚಾರದಲ್ಲಿ ಮರೆತಂತಿದೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೂ, ಒಬ್ಬರಿಗೂ ಕೂಡ ಸಚಿವರ ಸ್ಥಾನ ಒಲಿಯದಿರುವುದು ನಿರಾಸೆ ಮೂಡಿಸಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪಿಎಸ್ಐ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು
- ಒಬ್ಬ ಶಾಸಕರ ಸಂಬಳವೆಷ್ಟು ಗೊತ್ತಾ? ಮಾಜಿ ಶಾಸಕರಿಗೂ ಸಂಬಳ ಸಿಗುತ್ತಾ?
- ಸರಗಳ್ಳರ ಕೈಚಳಕ: ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ!
ಎರಡನೇ ಬಾರಿಗೆ ಆಯ್ಕೆಯಾಗಿರುವ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್.ಶ್ರೀನಿವಾಸ್ ಈ ಇಬ್ಬರಲ್ಲಿ ಒಬ್ಬರಿಗೆ ಒಲಿಯಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಅಭಿವೃದ್ಧಿ, ಸಮಸ್ಯೆಗಳ ಪ್ರಸ್ತಾಪ, ಪರಿಹಾರಕ್ಕೆ ಅನುಕೂಲ ಎಂಬುದು ಮನವಿಯಾಗಿಯೇ ಉಳಿದಿದೆ.
ಇದನ್ನೂ ಓದಿ; ಸಂಸತ್ ಭವನದ ಉದ್ಘಾಟನೆಗೆ ಶೃಂಗೇರಿ ಪೀಠದ ಪುರೋಹಿತರು
ಜಿಲ್ಲೆಯ ಉಸ್ತುವಾರಿ ಹೊಣೆ ಹೊರ ಜಿಲ್ಲೆಯವರ ಪಾಲಾಗಲಿದೆ. ‘ಸಚಿವ ಸ್ಥಾನ ನಿಟ್ಟಿನಲ್ಲಿ ಜಿಲ್ಲೆಯ ಪಾಡು ನರಿ ಕೂಗು ಗಿರಿಗೆ ಕೇಳಲ್ಲ’ ಎಂಬಂತಾಗಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರು, ಶಾಸಕರು ಹೈಕಮಾಂಡ್ ಮುಂದೆ ಬಿಗಿಪಟ್ಟು ಹಿಡಿಯಬೇಕಿತ್ತು. ಆ ಕೆಲಸವನ್ನು ಸಮರ್ಥವಾಗಿ ಮಾಡಿಲ್ಲ ಎಂದು ಕೆಪಿಸಿಸಿ ಪದಾಧಿಕಾರಿಯೊಬ್ಬರು ತಿಳಿಸಿದರು.
ಕಾಂಗ್ರೆಸ್ ಪಕ್ಷವು 34 ವರ್ಷಗಳ ನಂತರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ತೆಕ್ಕೆಯಿಂದ ವಶಕ್ಕೆ ಪಡೆದಿದೆ. ಇತಿಹಾಸ ಮರುಕಳಿಸಿದ ಸಂಭ್ರಮದಲ್ಲಿ ಕಾಂಗ್ರೆಸ್ ಇದೆ. 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದೊಂದು ಸ್ಥಾನ ಗೆದ್ದಿತ್ತು. 2013ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲೂ ಜಿಲ್ಲೆಗೆ ಸಚಿವ ಸ್ಥಾನ ಸ್ಥಾನದ ಭಾಗ್ಯ ಸಿಕ್ಕಿರಲಿಲ್ಲ. 2018 -19 ಅವಧಿಯಲ್ಲಿ ಒಂದೂವರೆ ವರ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಈ ಅವಧಿಯಲ್ಲೂ ಜಿಲ್ಲೆಗೆ ಸಚಿವ ಸ್ಥಾನ ದೊರೆತಿರಲಿಲ್ಲ. ಈಗ 2023ರ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಗೆದ್ದರೂ ಆದ್ಯತೆ ಸಿಕ್ಕಿಲ್ಲ.
ಒಟ್ಟಾರೆ ಕಳೆದ ಇಪ್ಪತ್ತು ವರ್ಷಗಳಿಂದ ಎಲ್ಲಾ ಪಕ್ಷಗಳು ಸಚಿವ ಸಂಪುಟ ರಚನೆಯಲ್ಲಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ರಾಜಕೀಯ ಪಕ್ಷಗಳ ಇಂತಹ ನಿಲುವಿನಿಂದ ಜಿಲ್ಲೆಯ ಅಭಿವೃದಿಗೆ ಹಿನ್ನಡೆಯಾಗುತ್ತದೆ. ಇದನ್ನು ಜಿಲ್ಲೆಯ ಶಾಸಕರು ಮತ್ತು ರಾಜಕೀಯ ಮುಖಂಡರು ಗಟ್ಟಿಧ್ವನಿಯಲ್ಲಿ ಪ್ರತಿರೋಧಿಸುವ ಅಗತ್ಯವಿದೆ.
ಬಾರೀ ಸರ್ಕಸ್ ಬಳಿಕ 24 ನೂತನ ಸಚಿವರ ಲಿಸ್ಟ್ ಇಂತಿದೆ
ಸಿದ್ದರಾಮಯ್ಯ, ಸಿಎಂ – ಹಣಕಾಸು, ಸಂಪುಟ ವ್ಯವಹಾರ, ಗುಪ್ತಚರ ಇಲಾಖೆ
ಡಿ.ಕೆ ಶಿವಕುಮಾರ್ ,ಡಿಸಿಎಂ- ಜಲಸಂಪನ್ಮೂಲ ಮತ್ತು ಬೆಂಗಳೂರು ನಗಾರಭಿವೃದ್ಧಿ
ಜಿ.ಪರಮೇಶ್ವರ್ – ಗೃಹ ಖಾತೆ
ಹೆಚ್.ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ
ಕೆ.ಹೆಚ್ ಮುನಿಯಪ್ಪ – ಆಹಾರ ಮತ್ತು ನಾಗರೀಕ ಸರಬರಾಜು
ಕೆ.ಜೆ ಜಾರ್ಜ್ – ಇಂಧನ ಖಾತೆ
ಎಂ.ಬಿ ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ-ಬಿಟಿ
ರಾಮಲಿಂಗಾರೆಡ್ಡಿ – ಸಾರಿಗೆ ಖಾತೆ
ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಜಮೀರ್ ಅಹ್ಮದ್ ಖಾನ್- ವಸತಿ, ವಕ್ಫ್ ಖಾತೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
ಕೃಷ್ಣಬೈರೇಗೌಡ – ಕಂದಾಯ ಖಾತೆ
ಡಾ.ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ ಇಲಾಖೆ
ದಿನೇಶ್ ಗುಂಡೂರಾವ್ – ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ
ಆರ್.ಬಿ ತಿಮ್ಮಾಫುರ – ಅಬಕಾರಿ, ಮುಜರಾಯಿ
ಎನ್. ಚಲುವರಾಯಸ್ವಾಮಿ – ಕೃಷಿ
ಕೆ.ವೆಂಕಟೇಶ್ – ಪಶುಸಂಗೋಪನಾ ಖಾತೆ
ಹೆಚ್.ಸಿ ಮಹದೇವಪ್ಪ – ಸಮಾಜ ಕಲ್ಯಾಣ ಇಲಾಖೆ
ಈಶ್ವರ್ ಖಂಡ್ರೆ – ಅರಣ್ಯ ಖಾತೆ
ಡಾ.ಶರಣಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ
ಮಂಕಾಳು ವೈದ್ಯ – ಮೀನುಗಾರಿಕೆ ಮತ್ತು ಬಂದರು, ಒಳಾಡಳಿತ ಸಾರಿಗೆ
ಸಂತೋಷ್ ಲಾಡ್ – ಕಾರ್ಮಿಕ ಸಚಿವ
ಭೈರತಿ ಸುರೇಶ್ – ನಗರಾಭಿವೃದ್ಧಿ
ಮಧು ಬಂಗಾರಪ್ಪ – ಶಿಕ್ಷಣ
ಕೆ.ಎನ್ ರಾಜಣ್ಣ – ಸಹಕಾರ
ಶಿವಾನಂದ್ ಪಾಟೀಲ್ – ಸಕ್ಕರೆ & ಜವಳಿ ಖಾತೆ
ಡಾ.ಎಂ.ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ
ಬಿ.ನಾಗೇಂದ್ರ – ಯುವಜನ, ಕ್ರೀಡಾ ಸಚಿವ
ಶರಣಬಸಪ್ಪ ದರ್ಶನಾಪುರ – ಸಣ್ಣ ಕೈಗಾರಿಕೆ
ಡಾ| ಶರಣ್ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ
ಎಸ್.ಎಸ್ ಮಲ್ಲಿಕಾರ್ಜುನ – ಗಣಿ, ಭೂವಿಜ್ಞಾನ ಇಲಾಖೆ
ಲಕ್ಷ್ಮಿ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ರಹೀಂ ಖಾನ್ – ಪೌರಾಡಳಿತ ಖಾತೆ
ಡಿ.ಸುಧಾಕರ್ – ಮೂಲಸೌಕರ್ಯ, ಹಜ್
ಬೋಸರಾಜ್ – ಪ್ರವಾಸೋದ್ಯಮ ಇಲಾಖೆ