Sunday, October 1, 2023
Homeಇತರೆಇಂಜಿನಿಯರಿಂಗ್ ದಿನದ ಕಾರ್ಯಕ್ರಮದಲ್ಲಿ ಮಾಡಿದ ಸ್ವಾಗತ ಭಾಷಣಕ್ಕೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ.

ಇಂಜಿನಿಯರಿಂಗ್ ದಿನದ ಕಾರ್ಯಕ್ರಮದಲ್ಲಿ ಮಾಡಿದ ಸ್ವಾಗತ ಭಾಷಣಕ್ಕೆ ಸಿಡಿಮಿಡಿಗೊಂಡ ಸಿಎಂ ಬೊಮ್ಮಾಯಿ.

ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ 161ನೇ ಜಯಂತಿ ಕಾರ್ಯಕ್ರಮದ ವೇಳೆ ಸ್ವಾಗತ ಭಾಷಣ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆದ ಘಟನೆ ನಡೆದಿದೆ.

ಇಂದು ಎಂಜಿನಿಯರಿoಗ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ ಎಂ. ವಿಶ್ವೇಶ್ವರಯ್ಯ 161ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಗತದ ಭಾಷಣ ತಕ್ಷಣ ಮುಗಿಸದೇ 10 ನಿಮಿಷಗಳ ಕಾಲ ಅನಗತ್ಯವಾಗಿ ವೇದಿಕೆಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಗರಂ ಆದ ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಆಯೋಜಕರಿಗೆ ಭಾಷಣದ ಆರಂಭದಲ್ಲೇ ಸಮಯಕ್ಕೆ ಮಹತ್ವವನ್ನು ಕೊಡಬೇಕು ಎಂದು ಹೇಳುವ ಮೂಲಕ ಚಾಟಿ ಬೀಸಿದ್ದಾರೆ.

ವಿಶ್ವೇಶ್ವರಯ್ಯನವರು ಎಂದಿಗೂ ಸಮಯಕ್ಕೆ ಬೆಲೆಯನ್ನು ಕೊಡುತ್ತಿದ್ದರು ಹಾಗೂ ನಾನು ಸಹ ಅವರ ಹಾಗೆಯೇ ಹೆಚ್ಚಿನದಾಗಿ ಸಮಯಕ್ಕೆ ಬೆಲೆಯನ್ನು ನೀಡುತ್ತೇನೆ ಏಂದು ಹೇಳಿದರು.

Most Popular

Recent Comments