Wednesday, November 29, 2023
Homeಮಲೆನಾಡುಚಿಕ್ಕಮಗಳೂರುಕೊಪ್ಪ: ಆನೆ ಸಂಚಾರ; ಆತಂಕದಲ್ಲಿ ಗ್ರಾಮಸ್ಥರು

ಕೊಪ್ಪ: ಆನೆ ಸಂಚಾರ; ಆತಂಕದಲ್ಲಿ ಗ್ರಾಮಸ್ಥರು

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಗ್ರಾಮದ ಬಿಟ್ಟಿ ಕುಡಿಗೆಯ ಸುತ್ತಮುತ್ತ ಆನೆ ಸಂಚರಿಸಿದ್ದು, ಗ್ರಾಮಸ್ಥರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ.

ಇದನ್ನೂ ಓದಿ;  ಶೃಂಗೇರಿ; ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯ

ಮಳೆ ಆರಂಭ ಆದ ಹಿನ್ನಲೆಯಲ್ಲಿ ರೈತರು ತೋಟದ ಕೆಲಸದಲ್ಲಿ ನಿರತರಾಗಿರುತ್ತಾರೆ ಈ ನಡುವೆ ಆನೆ ಸಂಚರದಿಂದ ಗ್ರಾಮಸ್ಥರಿಗೆ ಆತಂಕ ಮನೆ ಮಾಡಿದ್ದು, ಹಾಲ್ ಗೋಡು, ನೆಲ್ಲಿ ಹಡಲು, ಬೆಂಡೆ ಹಕ್ಳು, ಗಾಳಿ ಗುಡ್ಡದಲ್ಲಿ ಆನೆ ಸುತ್ತು ಬಂದಿರುವ ಬಗ್ಗೆ ಗ್ರಾಮಸ್ಥರು ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ.

ಇದನ್ನೂ ಓದಿ; ಹೊಸ ಫೋನ್‌ ಖರೀದಿಸಿದ್ರೆ 2 kg ಟೊಮೆಟೊ ಉಚಿತ!;ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಇನ್ನು ಆನೆ ಸಂಚಾರದಿಂದ ಈ ಭಾಗದ ರೈತರು ತೋಟದಲ್ಲಿ ಕೆಲಸ ಮಾಡಲು ಭಯದ ವಾತಾವರಣ ಮೂಡಿದೆ ಎನ್ನುತ್ತಾರೆ ಗ್ರಾಮಸ್ಥರಾದ ಚೇತನ ಗುರುಪ್ರಸಾದ್.

ಕಳಸ :ಅವೈಜ್ಞಾನಿಕ ಕಾಮಗಾರಿಯಿಂದ ಕೆಸರುಮಯವಾದ ರಸ್ತೆ, ತುರ್ತು ಕ್ರಮಕ್ಕೆ ಒತ್ತಾಯ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡ್ಲಾರ್ ಮಕ್ಕಿ ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ರಸ್ತೆ ಕೆಸರಮಯವಾಗಿದ್ದು ಓಡಾಡಲು ಕಷ್ಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಇದನ್ನೂ ಓದಿ; ಮೂಡಿಗೆರೆ: ದೇವರಮನೆ ಗುಡ್ಡದಲ್ಲಿ ಯುವಕನ ಕೊಲೆ ಮಾಡಿ ಶವ ಎಸೆದ ಪ್ರಕರಣ; ಮತ್ತೆ ನಾಲ್ವರು ಆರೋಪಿಗಳ ಸೆರೆ

2 ತಿಂಗಳ ಹಿಂದೆ ಜಲಜೀವನ್ ಸ್ಕೀಮ್ ಅಡಿಯಲ್ಲಿ ರಸ್ತೆ ಬದಿಯಲ್ಲೇ ಪೈಪ್ ಅಳವಡಿಸಿ ಆ ಮಣ್ಣನ್ನು ರಸ್ತೆಗೆ ಹಾಕಿದ್ದರು. ಬಳಿಕ ಅದನ್ನು ಸರಿಯಾಗಿ ಡೋಸಿಂಗ್ ಮಾಡದ ಹಿನ್ನೆಲೆಯಲ್ಲಿ ಇದೀಗ ಆ ರಸ್ತೆಯಲ್ಲಿ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ, ಅತಿಯಾದ ಮಳೆಯ ಕಾರಣದಿಂದ ಓಡಾಡುವುದೇ ಸಮಸ್ಯೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಪ್ರೀತಮ್ ಹೆಬ್ಬಾರ್ ಒತ್ತಾಯಿಸಿದ್ದಾರೆ.

Most Popular

Recent Comments