Sunday, June 4, 2023
Homeರಾಜ್ಯದೇಶದಾದ್ಯಂತ ಆಗಸ್ಟ್ 10 ರಂದು ವಿದ್ಯುತ್ ನೌಕರರಿಂದ ಪ್ರತಿಭಟನೆ!!

ದೇಶದಾದ್ಯಂತ ಆಗಸ್ಟ್ 10 ರಂದು ವಿದ್ಯುತ್ ನೌಕರರಿಂದ ಪ್ರತಿಭಟನೆ!!

ಬೆಂಗಳೂರು: ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

ವಿದ್ಯುತ್ ಖಾಸಗೀಕರಣ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿದ್ಯುತ್ ಕಂಪನಿಗಳನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ ದೇಶದಾದ್ಯಂತ ಈ ಪ್ರತಿಭಟನೆ ನಡೆಯಲಿದೆ ಎಂದು ವಿದ್ಯುತ್ ನೌಕರರ ಸಂಘಟನೆಗಳು ತಿಳಿಸಿವೆ.

ವಿದ್ಯುತ್ ಕಂಪನಿಗಳಿoದ ಆಗಿರುವ ಲಕ್ಷಾಂತರ ಕೋಟಿ ನಷ್ಟವನ್ನು ಸರಿದೂಗಿಸುವ ನೆಪದಲ್ಲಿ ಕೇಂದ್ರ ಸರ್ಕಾರವು ಖಾಸಗೀಕರಣಕ್ಕೆ ಮುಂದಾಗಿದೆ. ಈ ಖಾಸಗೀಕರಣದಿಂದ ರೈತರು, ಬಡವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಬಡವರಿಗೆ ಹಾಗೂ ರೈತರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ ಯೋಜನೆಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ ಎಂದು ಸಂಘಟನೆಗಳು ತಿಳಿಸಿವೆ,

ಕೇಂದ್ರ ಸರ್ಕಾರ ಈಗಾಗಲೇ ಹಲವು ವಲಯಗಳನ್ನು ಖಾಸಗೀಕರಣ ಮಾಡಿದೆ. ಅದೇ ರೀತಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ಆ.10 ರಂದು ನಡೆಸಲಾಗುತ್ತಿರುವ ಮುಷ್ಕರಕ್ಕೆ ಹಲವು ಸಂಘ-ಸoಸ್ಥೆಗಳು ಬೆಂಬಲವನ್ನು ವ್ಯಕ್ತಪಡಿಸಿವೆ ಎಂದು ವಿದ್ಯುತ್ ನೌಕರರು ತಿಳಿಸಿದ್ದಾರೆ.

Most Popular

Recent Comments