Tuesday, November 28, 2023
Homeಇತರೆಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಪ್ರಕಟ.

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಪ್ರಕಟ.

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಸುವ ಚುನಾವಣೆಯ ದಿನಾಂಕವನ್ನು ಇಂದು ಘೋಷಿಸಿದೆ.

ಡಿಸೆಂಬರ್ 10 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದ್ದು ಡಿಸೆಂಬರ್ 14 ಮಂಗಳವಾರ ಮತ ಎಣಿಕೆಯನ್ನು ನಡೆಸಿ, ಡಿಸೆಂಬರ್ 16ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನವೆಂಬರ್ 23 ರಂದು ಚುನಾವಣಾ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನ. ನವೆಂಬರ್ 24ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಿ ನವೆಂಬರ್ 26 ರಂದು ನಾಮಪತ್ರಗಳನ್ನು ಪಡೆಯಲು ಕೊನೆಯ ದಿನವಾಗಿದೆ. ಚುನಾವಣೆ ನಡೆಯುವ ಜಿಲ್ಲೆಗಳು ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಸದಸ್ಯರ ಅಧಿಕಾರ ಅವಧಿ ಪೂರ್ಣಗೊಂಡಿದೆ. ಅವರಿಂದ ತೆರವಾದ ಸ್ಥಾನಕ್ಕೆ ಈ ಬಾರಿ ಚುನಾವಣೆ ನಡೆಯಲಿದೆ.

ಈ ಕೆಳಗಿನ ಜಿಲ್ಲೆಗಳಲ್ಲಿ ಖಾಲಿಯಿರುವ ಅಭ್ಯರ್ಥಿಗಳ ಸ್ಥಾನಗಳಿಗೆ ಈ ಚುನಾವಣೆಯನ್ನು ಏರ್ಪಡಿಸಲಾಗಿದೆ.

ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆಯಲ್ಲಿ ಅಧಿಕಾರಕ್ಕೆ ನಿಲ್ಲುವ ಸದಸ್ಯರ ಹೆಸರು ಈ ಕೆಳಗಿನಂತಿದೆ. 

ಬೀದರ್ (ವಿಜಯ್ ಸಿಂಗ್), ಕಲಬುರಗಿ (ಬಿ. ಜಿ. ಪಾಟೀಲ್),
ಬಿಜಯಪುರ ( ಎಸ್. ಆರ್. ಪಾಟೀಲ್, ಸುನೀಲ್ ಗೌಡ ಪಾಟೀಲ್),
ಬೆಳಗಾವಿ (ಮಹಾಂತೇಶ್‌ ಕವಟಗಿ, ವಿವೇಕ್‌ರಾವ್ ವಸಂತ್‌ರಾವ್ ಪಾಟೀಲ್),
ಉತ್ತರ ಕನ್ನಡ (ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ).
ಧಾರವಾಡ (ಪ್ರದೀಪ್ ಶೆಟ್ಟರ್, ಮಾನೆ ಶ್ರೀನಿವಾಸ್),
ರಾಯಚೂರು (ಬಸವರಾಜ ಪಾಟೀಲ್ ಇಟಗಿ), ಬಳ್ಳಾರಿ (ಕೆ. ಸಿ. ಕೊಂಡಯ್ಯ),
ಚಿತ್ರದುರ್ಗ (ಜಿ. ರಘು ಆಚಾರ್),
ಶಿವಮೊಗ್ಗ (ಆರ್. ಪ್ರಸನ್ನ ಕುಮಾರ್),
ದಕ್ಷಿಣ ಕನ್ನಡ (ಕೆ. ಪ್ರತಾಪ್ ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ).
ಚಿಕ್ಕಮಗಳೂರು (ಎಂ. ಕೆ. ಪ್ರಾಣೇಶ್),
ಹಾಸನ (ಎಂ. ಎ. ಗೋಪಾಲಸ್ವಾಮಿ), ತುಮಕೂರು (ಬೆಮಲ್ ಕಾಂತರಾಜ್),
ಮಂಡ್ಯ (ಎನ್. ಅಪ್ಪಾಜಿ ಗೌಡ),
ಬೆಂಗಳೂರು (ಎಂ. ನಾರಾಯಣಸ್ವಾಮಿ), ಬೆಂಗಳೂರು ಗ್ರಾಮಾಂತರ (ಎಸ್. ರವಿ), ಕೋಲಾರ (ಸಿ. ಆರ್. ಮನೋಹರ್),
ಕೊಡಗು ( ಸುನೀಲ್ ಸುಬ್ರಮಣಿ ಎಂ. ಪಿ.), ಮೈಸೂರು (ಆರ್. ಧರ್ಮಸೇನಾ, ಸಂದೇಶ್ ನಾಗರಾಜ್).

Most Popular

Recent Comments