Wednesday, November 29, 2023
Homeಇತರೆಇಡಿ ಅಧಿಕಾರಿಗಳ ತನಿಖೆಗೆ ನಾನು ಸಂಪೂರ್ಣ ಸಹಕಾರವನ್ನು ನೀಡಿದ್ದೇನೆ - ರೋಷನ್ ಬೇಗ್

ಇಡಿ ಅಧಿಕಾರಿಗಳ ತನಿಖೆಗೆ ನಾನು ಸಂಪೂರ್ಣ ಸಹಕಾರವನ್ನು ನೀಡಿದ್ದೇನೆ – ರೋಷನ್ ಬೇಗ್

ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮನೆ ಆದ ನಂತರ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ತಡರಾತ್ರಿಯವರೆಗೆ ಮುಂದುವರಿದು ಇಂದು ಮುಂಜಾನೆ ಮುಕ್ತಾಯವಾಗಿದೆ.

ಸತತ 20 ಗಂಟೆಗೂ ಅಧಿಕ ಕಾಲ ರೋಷನ್ ಬೇಗ್ ನಿವಾಸದಲ್ಲಿ ಮೇಲೆ ಇಡಿ ಅಧಿಕಾರಿಗಳು ಶೋಧ ಮುಂದುವರಿಸಿ ಅಕ್ರಮ ಹಣ ವರ್ಗಾವಣೆ, ಐಎಎಂಎ ಹಗರಣಕ್ಕೆ ಸಂಬoಧಿಸಿದoತೆ ಮುಖ್ಯವಾಗಿ ಪ್ರಶ್ನೆಗಳನ್ನು ಕೇಳಿದರು ಎಂದು ರೋಶನ್ ಬೇಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೂರ್ನಾಲ್ಕು ಗಂಟೆಗಳಲ್ಲಿ ವಿಚಾರಣೆ ಮುಗಿಯಬೇಕಾಗಿತ್ತು, ಅದೇಕೋ ಸಾಕಷ್ಟು ಹೊತ್ತು ವಿಚಾರಣೆ, ಶೋಧವನ್ನು ಅಧಿಕಾರಿಗಳು ಮುಂದುವರಿಸಿದರು. ಅವರು ಕೇಳಿದ್ದಕ್ಕೆಲ್ಲಾ ಸಂಪೂರ್ಣ ವಿವರವನ್ನು ನೀಡಿದ್ದೇನೆ, ಐಟಿ ಇಲಾಖೆಗೂ ನನ್ನ ಆಸ್ತಿ ವಿವರಗಳ ದಾಖಲೆಗಳನ್ನು ಕೊಟ್ಟಿದ್ದೇನೆ, ಏನೂ ಮುಚ್ಚುಮರೆಯಿಲ್ಲ, ಮನಿ ಲಾಂಡರಿoಗ್ ಬಗ್ಗೆ ಕೇಳಿದರು, ನಾನು ಅದರಲ್ಲಿ ಭಾಗಿಯಾಗಿಲ್ಲ ಎಂದು ವಿವರಣೆ ಕೊಟ್ಟಿದ್ದೇನೆ, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ, ನಮ್ಮದು 300 – 500 ಎಕರೆ ಜಾಗ ಎಲ್ಲೂ ಇಲ್ಲ, ಅಧಿಕಾರಿಗಳು ನೊಟೀಸ್ ಕೊಟ್ಟಿಲ್ಲ, ಮುಂದಿನ ಬಾರಿ ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆಯ ಮೇಲೆ ದಾಳಿ ನಡೆಸಿದ ಸಮಯದಲ್ಲಿಯೇ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ನಡೆದಿದೆ. ಐಎಂಎ ಹಗರಣ, ಮನ್ಸೂರ್ ಖಾನ್ ಜೊತೆ ಅವ್ಯವಹಾರ, ಅಕ್ರಮ ಹಣ ವರ್ಗಾವಣೆಗೆ ಸಂಬoಧಪಟ್ಟoತೆ ಶೋಧ ಮುಂದುವರಿಯಿತು. ರೋಷನ್ ಬೇಗ್‌ಗೆ ಸಂಬoಧಿಸಿದ 6 ಸ್ಥಳಗಳಿಗೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ.

Most Popular

Recent Comments