Tuesday, November 28, 2023
Homeಇತರೆಆಹಾರ ವಿತರಣೆ ಸೋಗಿನಲ್ಲಿ ಡ್ರಗ್ಸ್ ಸಾಗಾಟ, ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಬಂಧನ.

ಆಹಾರ ವಿತರಣೆ ಸೋಗಿನಲ್ಲಿ ಡ್ರಗ್ಸ್ ಸಾಗಾಟ, ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಬಂಧನ.

ಬೆಂಗಳೂರು: ಬರ್ತ್ ಡೇ ಗಿಫ್ಟ್ ಹಾಗೂ ಆಹಾರ ಸರಬರಾಜಿನ ನೆಪದಲ್ಲಿ ಮಾದಕವಸ್ತುಗಳನ್ನು ಪ್ಯಾಕ್ ಮಾಡಿ ಚಾಲಾಕಿತನದಿಂದ ಸಾಗಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ರವಿದಾಸ್ ಮತ್ತು ರವಿ ಪ್ರಕಾಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಗಳ ಬಳಿಯಿದ್ದ 60 ಲಕ್ಷ ಬೆಲೆಬಾಳುವ ಹೈಡ್ರೋ ಗಾಂಜಾ ಮಾದಕದ್ರವ್ಯಗಳು ಹಾಗೂ ಆರೋಪಿಗಳಿಂದ 300 ಎಂಡಿಎಂಎ ಎಕ್ಸ್‍ಟೆಸಿ ಮಾತ್ರೆಗಳು , 100 ಎಲ್ ಎಸ್‍ಡಿ ಪೇಪರ್ ಬ್ಲಾಟ್ಸ್, 350 ಗ್ರಾಂ ಚರಸ್, 1.5 ಕೆಜಿ ಹೈಡ್ರೋ ಗಾಂಜಾ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಗಿಫ್ಟ್ ಬಾಕ್ಸ್, ಪ್ಯಾಕಿಂಗ್ ಕವರ್, ಸ್ವಿಗ್ಗಿ ಕಂಪನಿಯ ಟೀಶರ್ಟ್, ಡಂಝೋ ಬ್ಯಾಗ್ ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಯುವಕರು ಪೊಲೀಸರಿಗೆ ಅನುಮಾನ ಬರಬಾರದೆಂದು ಇವರು ನೂತನ ಮಾದರಿಯನ್ನು ಕಂಡು ಕೊಂಡಿದ್ದರು. ಆಹಾರ ವಿತರಣೆಯನ್ನು ಮಾಡುವ ಆಯಪ್ ಗಳಲ್ಲಿ ಕೆಲಸ ಮಾಡುವ ವಿತರಕರು ಧರಿಸುವಂತಹ ಉಡುಪುಗಳನ್ನು ಹಾಕಿಕೊಂಡು ದ್ವಿಚಕ್ರ ವಾಹನಗಳಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು.

ನವದೆಹಲಿ ಮತ್ತು ಬೆಂಗಳೂರಿನಲ್ಲಿ ಏಕಕಾಲದಲ್ಲಿ ಈ ಜಾಲ ಮಾದಕ ವಸ್ತು ಸಾಗಣೆಯಲ್ಲಿ ನಿರತವಾಗಿತ್ತು. ಹೊರನೋಟಕ್ಕೆ ಬುಕ್ ರೀತಿಯಲ್ಲಿ ಕಾಣುವ ಹಾಗೆ ವಿನ್ಯಾಸ ಮಾಡಿ ಅದರಲ್ಲಿ ಮಾದಕ ವಸ್ತುಗಳನ್ನು ಇಟ್ಟು ಸರಬರಾಜು ಮಾಡುತ್ತಿದ್ದರು. ಈ ಪಾರ್ಸೆಲುಗಳನ್ನು ವಕೀಲರ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ಬಹು ಯೋಜಿತವಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ಡಾರ್ಕ್ ವೆಬ್ ಮೂಲಕವೂ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು.

ಬೆಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಬಾರದೆಂದು ನವದೆಹಲಿಯಲ್ಲಿಯೇ ಕುಳಿತುಕೊಂಡು ಜಾಲದ ಅವ್ಯವಹಾರ ನಡೆಸುತ್ತಿದ್ದರು, ಮಾದಕ ವಸ್ತುಗಳನ್ನು ಸಾಗಣೆ ಮಾಡಲು ಯುವ ವಿತರಕರನ್ನು ನೇಮಿಸಿಕೊಂಡು ಇವರಿಗೆ ಪೋನ್, ಸಿಮ್, ವಸತಿ, ವಾಹನವನ್ನು ನೀಡುತ್ತಿದ್ದರು ಎನ್ನಲಾಗಿದೆ. ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Most Popular

Recent Comments