ಗುಜರಾತ್: ಪಾಕಿಸ್ತಾನದಿಂದ ಗುಜರಾತ್ ಗೆ ಸಮುದ್ರ ಮಾರ್ಗವಾಗಿ ಆಮದು ಮಾಡಿಕೊಂಡಿದ್ದ 300 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಗರದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಸಂಬಂಧ ಮಹಾರಾಷ್ಟ್ರ ಜಿಲ್ಲೆಯ ಮುಂಬ್ರಾ ನಿವಾಸಿ ಸಜ್ಜಾದ ಎಂಬ ಯುವಕ. ಮತ್ತು ಆತನ ಸಹಚರರು ಗುಜರಾತ್ ನ ಚಾಮರಾಜನಗರದ ವಾಸಿಗಳು ಸಲೀಮ್ ಯಾಕೂಬ್ ಕರಾ ಮತ್ತು ಅಲಿ ಯಾಕೂಬ್ ಕರಾ ಎಂಬ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಗುಜರಾತ್ ನ ಕಚ್ಚನ ಮುಂದ್ರಾ ಬಂದರಿನ ಮೇಲೆ ಮಾಹಿತಿಯ ಮೇರೆಗೆ ದಾಳಿಯನ್ನು ನಡೆಸಿದ ಪೊಲೀಸರು 21 ಸಾವಿರ ಕೋಟಿ ಮೌಲ್ಯದ ಮೂರು ಸಾವಿರ ಕಿಲೋ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅನಂತರ ಈ ಬೃಹತ್ ಮಾದಕ ಜಾಲವನ್ನು ಭೇಧಿಸಿರುವ ಪೊಲೀಸರು ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಸಜ್ಜಾದ ಎಂಬಾತನ ಬಳಿಯಿದ್ದ 19 ಪ್ಯಾಕೆಟ್ ಮಾದಕ ವಸ್ತು, ಸಲೀಮ್ ಯಾಕೂಬ್ ಬಳಿ ಮತ್ತು ಅಲಿ ಯಾಕೂಬ್ ಬಳಿ ತಲಾ 47 ಪ್ಯಾಕೆಟ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.