Sunday, September 24, 2023
Homeರಾಜಕೀಯಡ್ರಗ್ಸ್ ಸೇವನೆ ಮತ್ತು ಪೂರೈಕೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷೆ ಖಚಿತ: ಆರಗ ಜ್ಞಾನೇಂದ್ರ

ಡ್ರಗ್ಸ್ ಸೇವನೆ ಮತ್ತು ಪೂರೈಕೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷೆ ಖಚಿತ: ಆರಗ ಜ್ಞಾನೇಂದ್ರ

ಬೆಳಗಾವಿ: ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀಗೆ ಪರವಾಗಿ ಯಾವ ರಾಜಕೀಯ ನಾಯಕರೂ ನಮ್ಮ ಮೇಲೆ ಒತ್ತಡವನ್ನು ತರುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಸೇವನೆಯ ಪ್ರಕರಣದ ಚಾರ್ಜ್ಶೀಟ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಕೈವಾಡವಿದೆ ಎಂದು ಎಲ್ಲೆಡೆ ಉಹಾಪೋಹ ಹರಡಿರುವಂತಹ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳಗಾವಿಯಲ್ಲಿ ಮಹತ್ವದ ಹೇಳಿಕೆಯನ್ನು ನೀಡಿದ್ದು, ನಿರೂಪಕಿ ಅನುಶ್ರೀ ಹೆಸರು ಕೈಬಿಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಅಧಿಕಾರಿಗಳನ್ನು ಕೇಳಿ ಪ್ರತಿಕ್ರಿಯೆಯನ್ನು ನೀಡುತ್ತೇನೆ ಎಂದು ಹೇಳಿದರು,

ಅದರಂತೆಯೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಡ್ರಗ್ಸ್ ಪ್ರಕರಣವನ್ನು ನಮ್ಮ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಅನುಶ್ರೀಗೆ ಸಂಬoಧಿಸಿದoತಹ ಡ್ರಗ್ಸ್ ಪ್ರಕರಣದಲ್ಲಿ ಯಾವ ರಾಜಕೀಯ ನಾಯಕರೂ ನಮ್ಮ ಮೇಲೆ ಒತ್ತಡವನ್ನು ತರುತ್ತಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ನಾಯಕರು ಆರೋಪಿಗಳನ್ನು ಪಾರು ಮಾಡಲು ಒತ್ತಡವನ್ನು ಹಾಕಲ್ಲ. ಡ್ರಗ್ಸ್ ಸೇವನೆ ಹಾಗೂ ಪೂರೈಕೆಯ ಪ್ರಕರಣ ಗಂಭೀರವಾದದ್ದು ಎಂಥ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅಂತಹ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ. ನಿರೂಪಕಿ ಅನುಶ್ರೀ ಕೇಸ್‌ನಲ್ಲಿ ನಮಗೆ ರಾಜಕೀಯ ಒತ್ತಡಗಳಿಲ್ಲ. ನಮ್ಮ ಪೊಲೀಸರು ಇಂತಹ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಅನುಶ್ರೀ ಹೆಸರನ್ನು ಕೈಬಿಟ್ಟಿದ್ದರೆ, ಆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುತ್ತೇನೆ ಎಂದು ಹೇಳಿದರು.

Most Popular

Recent Comments