Tuesday, November 28, 2023
Homeಇತರೆ40 ಲಕ್ಷ ಮೌಲ್ಯದ ಡ್ರಗ್ಸ್ ವಶ : ಯುವತಿಯ ಬಂಧನ

40 ಲಕ್ಷ ಮೌಲ್ಯದ ಡ್ರಗ್ಸ್ ವಶ : ಯುವತಿಯ ಬಂಧನ

ಬೆಂಗಳೂರು: 40 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವ ಬೆಂಗಳೂರು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು 9185 ರ ಕಾಯ್ದೆ ಅಡಿಯಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಯೋಗಿತಾ ಬಂಧಿತ ಮಹಿಳೆಯಾಗಿದ್ದಾರೆ. ಆಕೆಯಿದ 40 ಲಕ್ಷ ರೂ. ಮೌಲ್ಯದ ಎಂಡಿಎoಎ ಡ್ರಗ್ಸ್ ನನ್ನು ಜಪ್ತಿ ಮಾಡಲಾಗಿದೆ. ಜರ್ಮನಿಯಿಂದ ಅಂತಾರಾಷ್ಟ್ರೀಯ ಅಂಚೆಯ ಮೂಲಕ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಪಾರ್ಸೆಲ್ ಬಂದಿತ್ತು. ಸೌಂದರ್ಯ ವರ್ಧಕಗಳು ಎಂದು ಪಾರ್ಸೆಲ್ ನಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ ಪಾರ್ಸೆಲ್ ನಲ್ಲಿ ಮಾದಕ ವಸ್ತುಗಳು ಎಂಡಿಎoಎ ಬಂದಿರುವ ಬಗ್ಗೆ ಮೊದಲೇ ಮಾಹಿತಿಯನ್ನು ಸಂಗ್ರಹಿಸಿದ್ದoತಹ ಎನ್ ಸಿಬಿ ಅಧಿಕಾರಿಗಳು ಯುವತಿ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಬರುತ್ತಿದ್ದಂತೆ ಆಕೆಯನ್ನು ವಶಕ್ಕೆ ಪಡೆದುಕೊಂಡು ಸೌಂದರ್ಯ ವರ್ಧಕಗಳಿದ್ದ ಬಾಕ್ಸ್ ಗಳನ್ನು ತೆರೆದು ಪರಿಶೀಲನೆಯನ್ನು ನಡೆಸಿದ್ದಾರೆ.

ವಶಪಡಿಸಿಕೊಂಡ ನಂತರ, ಎನ್‌ಸಿಬಿ ಕಣ್ಗಾವಲು ಹಾಕಿ ಪಾರ್ಸೆಲ್ ಸ್ವೀಕರಿಸಲು ಬಂದ ಯೋಗಿತಾಳನ್ನು ಬಂಧಿಸಿದ್ದಾರೆ ಯೋಗಿತಾ ಕಳೆದ ಮೂರು ವರ್ಷಗಳಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿನ ಹೊರತಾಗಿ, ಆಕೆ ದಕ್ಷಿಣ ಭಾರತದ ಇತರ ನಗರಗಳಿಗೆ ಡ್ರಗ್ಸ್ ಮಾರಾಟವನ್ನು ಮಾಡುತ್ತಿದ್ದಳು ಎಂದು ಅಧಿಕಾರಿ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.

Most Popular

Recent Comments