ಮಂಗಳೂರು: ಸ್ಯಾಂಡಲ್ ವುಡ್ ನಟಿ ಹಾಗೂ ಉತ್ತಮ ನಿರೂಪಕಿ ಅನುಶ್ರೀ ಅವರ ಕೊರಳಿಗೆ ಸರಿಯಾಗಿ ಒಂದು ವರ್ಷದ ನಂತರ ಮತ್ತೆ ಡ್ರಗ್ಸ್ ನಶೆಯ ಆರೋಪ ಸುತ್ತಿಕೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಯಾಗಿದ್ದಂತಹ ಆರೋಪಿ ಕಿಶೋರ್ ಶೆಟ್ಟಿ ಮತ್ತಷ್ಟು ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ.
ಕಿಶೋರ್ ಶೆಟ್ಟಿ ನೀಡಿದಂತಹ ಮಾಹಿತಿಗಳ ಆಧಾರದ ಮೇಲೆ ಮೈಸೂರು ಪೊಲೀಸರು ಚಾರ್ಜ್ ಶೀಟ್ ನನ್ನು ತಯಾರಿಸಿದ್ದು ಅದರಲ್ಲಿ ನಿರೂಪಕಿ ಅನುಶ್ರೀ ಯವರ ಹೆಸರು ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.