Sunday, December 3, 2023
Homeಮಲೆನಾಡುಚಿಕ್ಕಮಗಳೂರುಕಳಸ: ಆಸ್ಪತ್ರೆಗೆ ಕುಡಿದು ಬಂದ ಪ್ರಕರಣ, ಡಾ. ಬಾಲಕೃಷ್ಣ ಸಸ್ಪೆಂಡ್ ಗೆ ಆರೋಗ್ಯ ಸಚಿವರ ಆದೇಶ;...

ಕಳಸ: ಆಸ್ಪತ್ರೆಗೆ ಕುಡಿದು ಬಂದ ಪ್ರಕರಣ, ಡಾ. ಬಾಲಕೃಷ್ಣ ಸಸ್ಪೆಂಡ್ ಗೆ ಆರೋಗ್ಯ ಸಚಿವರ ಆದೇಶ; ಘಟನೆ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್ ಹೇಳಿದ್ದೇನು?

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ವೈದ್ಯರೊಬ್ಬರು ಮದ್ಯ ಸೇವಿಸಿ ಆಪರೇಷನ್ ಮಾಡಲು ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಬಾಲಕೃಷ್ಣ ಅಮಾನತ್ತಿಗೆ ಆರೋಗ್ಯ ಇಲಾಖೆಯ ಅಧಿಕಾರಿ ದಿನೇಶ್ ಗುಂಡೂರಾವ್ ಚಿಕ್ಕಮಗಳೂರು ಡಿಹೆಚ್‌ಒಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ; ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಚ್ ಡಿ ತಮ್ಮಯ್ಯ ಫುಲ್ ರೌಂಡ್ಸ್

ವೈದ್ಯನ ಅವಾಂತರದ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಗ್ಯ ಇಲಾಖೆಯಿಂದ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್ ಪ್ರತಿಕ್ರಿಯೆ ನೀಡಿದ್ದು, ವೈದ್ಯರು ಮಧ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ರೀತಿ ಯಾರೇ ಮಾಡಿದರೂ ತಪ್ಪು ತನಿಖೆಗೆ ಒಂದು ಸಮಿತಿ ರಚನೆ ಮಾಡುತ್ತೇನೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಹಾಗೂ ಸಿಇಓ, ಆರೋಗ್ಯ ಆಯುಕ್ತರ ಬಳಿ ಮಾತಾನಾಡಿದ್ದೇನೆ ಹಾಗೂ ಸಮಿತಿ ರಚಿಸಿ ವರದಿ ನೀಡುವಂತೆ ಸೂಚನೆ ನೀಡುತ್ತೇನೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳಸ: ಸರ್ಕಾರಿ ಆಸ್ಪತ್ರೆ ವೈದ್ಯ ಬರುವಾಗಲೇ ಚಿತ್ತಾಲ್ ಪತ್ತಾಲ್!

ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಲ್ಲಿ ವಿಷ್ಣುಸೇನಾ ಚಿತ್ರದ ಪಾರ್ಟ್ 2 ಸನ್ನಿವೇಶ ನಡೆದಿದೆ. ಮದ್ಯ ಸೇವಿಸಿ ಆಪರೇಷನ್ ಮಾಡಲು ಬಂದಿದ್ದ ವೈದ್ಯ ಟೈಟಾಗಿ ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಇದನ್ನೂ ಓದಿ; ಸ್ನೇಕ್ ನರೇಶ್ ಮನೆಯಲ್ಲಿ ರಾಶಿ ರಾಶಿ ನಾಗರಹಾವು ಪತ್ತೆ

ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಷನ್ ಕ್ಯಾಂಪ್ ಏರ್ಪಾಡು ಮಾಡಲಾಗಿತ್ತು, ಸುಮಾರು 10ಕ್ಕೂ ಹೆಚ್ಚು ಮಹಿಳೆಯರನ್ನು 8 ಗಂಟೆಗೆ ಬರಲು ಹೇಳಿದ್ದರು. ಆದರೆ ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಅಲಿಯಾಸ್ ಎಣ್ಣೆ ಡಾಕ್ಟರ್ ಬರುವಾಗಲೇ  ಫುಲ್ ಚಿತ್ತಾಲ್-ಪತ್ತಾಲ್ ಆಗಿ ಬಂದಿದ್ದಾರೆ.

ಇದನ್ನೂ ಓದಿ; ಸಿಡಿಲು ಬಡಿದು ಮಹಿಳೆ ಸಾವು

ಈ ವಿಚಾರವನ್ನು ಮರೆಮಾಚುವ ಸಲುವಾಗಿ ವೈದ್ಯರಿಗೆ ಏನೋ ಆಗಿದೆ, ಶುಗರ್ ಕಮ್ಮಿ ಆಗಿದೆ, ಬಿಪಿ ಜಾಸ್ತಿ ಆಗಿದೆ ಅಂತ ಹೈ ಡ್ರಾಮಾ ಸೃಷ್ಟಿ ಮಾಡಿ ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ಕಳಸ ಆಸ್ಪತ್ರೆಯಿಂದ ಕೊಪ್ಪಕ್ಕೆ ವಾಪಸ್ ಕಳಿಸಿದ್ದಾರೆ.

ಇನ್ನು ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರ ಸಂಬಂಧಿಗಳು ಫುಲ್ ರೆಬಲ್ ಆಗಿದ್ದಾರೆ, ಇಂದು ಮತ್ತೆ ಬೇರೆ ವೈದ್ಯರನ್ನ ಕರೆಸಿ ಆಪರೇಷನ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಡಾ. ಬಾಲಕೃಷ್ಣ ವಿರುದ್ಧ ಈ ಹಿಂದೆಯಿಂದಲೂ ಹಲವು ಆರೋಪಗಳು ಕೇಳಿ ಬಂದಿದ್ದವು. ಶೃಂಗೇರಿ, ಕೊಪ್ಪ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಇದೇ ರೀತಿ ಟೈಟಾಗಿ ಬಂದು ಹಲವರ ಜೀವಕ್ಕೆ ಕುತ್ತು ತಂದಿರೋ ಆರೋಪ ಈತನ ಮೇಲಿದೆ. ಒಟ್ಟಿನಲ್ಲಿ ಇಂತಹ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ಕಾರ ಈ ಕುರಿತು ಎಚ್ಚೆತ್ತುಕೊಂಡು ಸೂಕ್ತ ವೈದ್ಯರ ನೇಮಕ ಮಾಡಬೇಕಿದೆ.

Most Popular

Recent Comments