Sunday, October 1, 2023
Homeಮಲೆನಾಡುಚಿಕ್ಕಮಗಳೂರುನಾಮಪತ್ರ ಸಲ್ಲಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?

ನಾಮಪತ್ರ ಸಲ್ಲಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿಧಾನಸಭಾ ಚುನಾವಣೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ; ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ನಾಮಪತ್ರ ಸಲ್ಲಿಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅವರು ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿರುವ ಪ್ರಕಾರ ಇವರು 4 ಕೋಟಿಯ ಒಡೆಯರಾಗಿದ್ದಾರೆ.

ಒಟ್ಟು ನಗದು ಎಷ್ಟು?:
ಸಿ.ಟಿ. ರವಿ ಅವರ ಬಳಿ ಇರುವ ನಗದು: 86,431 ರೂ.
ಪತ್ನಿ ಪಲ್ಲವಿ ಅವರ ಬಳಿ ಇರುವ ನಗದು: 7,89,257 ರೂ.

ಒಟ್ಟು ಸ್ಥಿರಾಸ್ತಿ ಮೌಲ್ಯ ಎಷ್ಟು?:
ಸಿ.ಟಿ. ರವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 1,61,51,302 ರೂ.
ಸಿಟಿ ರವಿ ಪತ್ನಿ ಪಲ್ಲವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 96,27,829 ರೂ.

ಒಟ್ಟು ಚರಾಸ್ತಿ ಮೌಲ್ಯ ಎಷ್ಟು?:
ಸಿಟಿ ರವಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 2,38,87,384 ರೂ.
ಪತ್ನಿ ಪಲ್ಲವಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 84,22,597 ರೂ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಜಮೀನು ವಿವರಗಳು:
ಸಿ.ಟಿ. ರವಿ ಹೆಸರಿನಲ್ಲಿ ಅರೆನೂರು ಗ್ರಾಮದಲ್ಲಿ 7 ಎಕರೆ ಜಮೀನು ಇದೆ.
ಪತ್ನಿ ಪಲ್ಲವಿ ಹೆಸರಿನಲ್ಲಿ ಹುಳಿಯಾರಹಳ್ಳಿಯಲ್ಲಿ 1 ಎಕರೆ 35 ಗುಂಟೆ ಜಮೀನು ಇದೆ. ಪತ್ನಿ ಹೆಸರಿನ ಜಮೀನು ಅನ್ಯಕ್ರಾಂತ ಮಾಡಿಸಲಾಗಿದೆ.

ವಾಹನಗಳು ಎಷ್ಟು?:
ಸಿ.ಟಿ. ರವಿ ಬಳಿ 9.55 ಲಕ್ಷ ರೂ. ಮೌಲ್ಯದ 2005 ಮಾಡಲ್‌ನ ಸ್ಕಾರ್ಪಿಯೋ ಕಾರು ಇದೆ ಹಾಗೂ 65,550 ರೂ. ಮೌಲ್ಯದ ಪಿಸ್ತೂಲ್ ಇದೆ.

ಒಟ್ಟು ಸಾಲ ಎಷ್ಟು?:
ಸಿ.ಟಿ. ರವಿ 94,57,504 ರೂ. ಸಾಲ ಮಾಡಿದ್ದಾರೆ.
ಪತ್ನಿ ಪಲ್ಲವಿ 2,16,99,595 ರೂ. ಸಾಲ ಪಡೆದುಕೊಂಡಿದ್ದಾರೆ. (ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳಲ್ಲಿ ಹೆಚ್ಚು ಸಾಲ ಮಾಡಿದ್ದಾರೆ)

ಇದನ್ನೂ ಓದಿ; ಕಡೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ

 

Most Popular

Recent Comments