ಚಿಕ್ಕಮಗಳೂರು/ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ನಿನ್ನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿದೆ. ಅದರಲ್ಲಿ ಶೃಂಗೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ; ಮರಳಿ ಗೂಡಿಗೆ ಮೇಷ್ಟ್ರು | ಮಾಜಿ ಶಾಸಕ ವೈಎಸ್ ವಿ ದತ್ತಾ ಜೆಡಿಎಸ್ ಸೇರ್ಪಡೆ
ಇದನ್ನೂ ಓದಿ; ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ!
ನಾಮಪತ್ರ ಸಲ್ಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಿಳಿಸಿರುವ ಪ್ರಕಾರ ಅವರ ಕೈಯಲ್ಲಿ ಇರುವುದು ಬರೀ 2 ಲಕ್ಷ ರೂ ನಗದು ಮಾತ್ರ. ಪತ್ನಿ ಎಂ.ಎಸ್. ನಿವೇದಿತಾ ಬಳಿ ಒಂದು ಲಕ್ಷ, ಮಗ ಸುಧನ್ವ ಬಳಿ 50 ಸಾವಿರ ರೂಪಾಯಿ ನಗದು ಮಾತ್ರ ಇದೆ.
ಒಟ್ಟು ಆಸ್ತಿ ಎಷ್ಟು?:
ಇನ್ನೂ ಜೀವರಾಜ್ ಬಳಿ ಇರುವ ಚರಾಸ್ತಿಯ ಮೌಲ್ಯ 1,43,91,405 ರೂ ಪತ್ನಿಯ ಬಳಿ ಇರುವ ಚರಾಸ್ತಿಯ ಮೌಲ್ಯ 38,79,875 ರೂ. ಪುತ್ರನ ಬಳಿ 26,85,946 ರೂ. ಇದೆ. ಜೀವರಾಜ್ ಬಳಿ 7.30 ಲಕ್ಷ ರೂ ಮೌಲ್ಯದ ಬಂಗಾರ ಇದ್ದರೆ, ಅವರ ಪತ್ನಿ ಬಳಿ 16.90 ಲಕ್ಷ ರೂಗಳ ಬಂಗಾರ ಇದೆ ಎಂದು ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
ಪೊಲೀಸ್ ಠಾಣೆಯ ಮೇಲೆಯೇ ಹತ್ತಿ ಆತ್ಮಹತ್ಯೆಗೆ ಯತ್ನ
ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆ..!?
ಸ್ವಯಾರ್ಜಿತ ಸ್ಥಿರಾಸ್ತಿ ಎಷ್ಟು?:
ಜೀವರಾಜ್ 5.36 ಕೋಟಿ, ಪತ್ನಿ ಬಳಿ 1.22 ಕೋಟಿ, ಪುತ್ರನ ಬಳಿ 32 ಲಕ್ಷ, ಇನ್ನೂ ಜೀವರಾಜ್ ಅವರ ಪಿತ್ರಾರ್ಜಿತ ಆಸ್ತಿ 1.42 ಕೋಟಿ ಇದೆ.
ಸಾಲ ಎಷ್ಟು?:
ಜೀವರಾಜ್ ಹೆಸರಲ್ಲಿ ವಿವಿಧ ಬ್ಯಾಂಕು, ಸಂಸ್ಥೆಗಳಲ್ಲಿ 21, 31,885 ರೂ. ಸಾಲ ಇದ್ದರೆ, ಪತ್ನಿ ಹೆಸರಿನಲ್ಲಿ 10 ಲಕ್ಷ, ಪುತ್ರನ ಹೆಸರಿನಲ್ಲಿ 15,86,082 ರೂ ಇದೆ.
ಇದನ್ನೂ ಓದಿ; ನನಗೆ ಟಿಕೆಟ್ ತಪ್ಪಿಸಿದ್ದು ಶಾಸಕ ಸಿ. ಟಿ ರವಿ: ಎಂ ಪಿ ಕುಮಾರಸ್ವಾಮಿ ಕಿಡಿ
ದತ್ತಾಗೆ ಸಾಲ ನೀಡಿರುವ ಮಾಜಿ ಸಚಿವ ಡಿ ಎನ್ ಜೀವರಾಜ್:
ಇನ್ನೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕಡೂರಿನ ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಗೆ ವೈಯಕ್ತಿಕವಾಗಿ 8 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ ಎಂದು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.