ಕಡೂರು: (ನ್ಯೂಸ್ ಮಲ್ನಾಡ್ ವರದಿ) ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆಯಿಂದ ಪ್ರಾರಂಭವಾಗಿದ್ದು, ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ; ಶೃಂಗೇರಿ ಕ್ಷೇತ್ರದಿಂದ ಮಲ್ನಾಡ್ ಕೇಸರಿ ಸೇನೆಯ ಪುನೀತ್ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ.!
ಇದನ್ನೂ ಓದಿ; ಬಿಜೆಪಿ ಅಭ್ಯರ್ಥಿ ಜೀವರಾಜ್ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
ನಾಮಪತ್ರ ಸಲ್ಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅವರು ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿರುವ ಪ್ರಕಾರ ಇವರಿಗೆ ಸ್ವಯಾರ್ಜಿತಕ್ಕಿಂತ ಪಿತ್ರಾರ್ಜಿತ ಆಸ್ತಿಯೇ ಹೆಚ್ಚು, ಹಾಗೂ ಕಡೂರು, ತರೀಕೆರೆ ತಾಲೂಕಿನ ವಿವಿಧೆಡೆ ಜಮೀನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟು ಆಸ್ತಿ ಎಷ್ಟು?:
3,44,945 ನಗದು ಇದ್ದರೆ, ಅವರ ಪತ್ನಿ ಕೈಯಲ್ಲಿ 38,485 ರೂ. ನಗದು ಇದೆ.
ಚರಾಸ್ತಿ ಎಷ್ಟು?:
2.70 ಕೋಟಿ ಚರಾಸ್ತಿ ಇದ್ದರೆ, ಅವರ ಪತ್ನಿ ಹತ್ತಿರ 30.81 ಲಕ್ಷ ಚರಾಸ್ತಿ ಇದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪೊಲೀಸ್ ಠಾಣೆಯ ಮೇಲೆಯೇ ಹತ್ತಿ ಆತ್ಮಹತ್ಯೆಗೆ ಯತ್ನ
- ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆ..!?
- ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಭೇಟಿಯಾದ ಹಿಂದು ಬ್ರಿಗೇಡ್ ಪ್ರವೀಣ್ ಖಾಂಡ್ಯ, ಹಾಗೂ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್
ಸ್ಥಿರಾಸ್ತಿ ಎಷ್ಟು?:
10.01 ಕೋಟಿ ರೂ ಸ್ಥಿರಾಸ್ತಿ ಇದ್ದರೆ, ಅವರ ಪತ್ನಿ ಹತ್ತಿರ 35.08 ಲಕ್ಷ ರೂ ಇದೆ.
ಸಾಲ ಎಷ್ಟು?:
ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಕೂಡ ಅವರು ಸಾಲಗಾರರು. ವಿವಿಧ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ 8.14 ಕೋಟಿ ಸಾಲ ಮಾಡಿದ್ದಾರೆ. ಇವರ ಪತ್ನಿ ಹೆಸರಲ್ಲಿ 22.52 ಲಕ್ಷ ಸಾಲ ಮಾಡಿದ್ದಾರೆ ಎಂದು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು