ಆಧಾರ್ ಕಾರ್ಡ್(aadhaar card) ಒಂದು ಬಯೋಮೆಟ್ರಿಕ್(biometric) ದಾಖಲೆಯಾಗಿದ್ದು ಅದು ಭಾರತದಲ್ಲಿ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸರ್ಕಾರಿ ಡೇಟಾಬೇಸ್‌ನಲ್ಲಿ ವ್ಯಕ್ತಿಗಳ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲು ಬಳಸಲಾಗುವ ಅನನ್ಯ 12-ಅಂಕಿಯ ಸಾರ್ವತ್ರಿಕ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ.
ಇದನ್ನೂ ಓದಿ; ಉಚಿತ ವಿದ್ಯುತ್ ಯೋಜನೆಯನ್ನು ಪಡೆಯಲು ಏನು ಮಾಡಬೇಕು?
ಇದನ್ನೂ ಓದಿ; ತಿಂಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್ ಸರ್ಕಾರಿ ಹುದ್ದೆಗಳು ಯಾವುದು ಗೊತ್ತ?
ಸಾರ್ವಜನಿಕ ಕಲ್ಯಾಣ ಯೋಜನೆಗಳು ಮತ್ತು ನಾಗರಿಕ ಸೇವೆಗಳಿಗೆ ಆಧಾರ್ ಕಾರ್ಡ್ ಅಗತ್ಯವಿರುವಂತೆ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಅಗತ್ಯವಾಗುತ್ತಿದೆ. ಎಲೆಕ್ಟ್ರಾನಿಕ್ ಮತ್ತು ಆಫ್‌ಲೈನ್ ವಿಧಾನಗಳ ಮೂಲಕ ಒಬ್ಬರ ಗುರುತನ್ನು ಪರಿಶೀಲಿಸಬಹುದಾದ್ದರಿಂದ ಇದು ದೃಢೀಕರಣದ ಹೊಂದಿಕೊಳ್ಳುವ ವಿಧಾನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದು ಸಾರ್ವತ್ರಿಕ ದಾಖಲೆಯಾಗಿರುವುದರಿಂದ ಜನರು ಹಲವಾರು ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ.
ಆಧಾರ್ ಕಾರ್ಡ್ ಯಾವುದಕ್ಕೆಲ್ಲಾ ಉಪಯೋಗಕ್ಕೆ ಬರುತ್ತದೆ?:
ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು, ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುವುದು, ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಷೇರು ಮಾರುಕಟ್ಟೆಗಳು ಹಾಗೂ ಸರ್ಕಾರದ ಸಬ್ಸಿಡಿಗಳಿಗೆ ಈ ಆಧಾರ್ ಕಾರ್ಡ್ ಉಪಯೋಗಕ್ಕೆ ಬರುತ್ತದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು ಹಾಗೂ ನರಸಿಂಹರಾಜಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ
- ನಿಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಕೊನೆ ದಿನ
- ಪ್ಯಾರ ಮೆಡಿಕಲ್ ಕಾಲೇಜು ಮುಖ್ಯಸ್ಥರಿಂದ ವಿದ್ಯಾರ್ಥಿನಿಗೆ ಹಲ್ಲೆ
ಹಾಗೆಯೇ ಸರ್ಕಾರದ ಕಡೆಯಿಂದ ಹಲವಾರು ಯೋಜನೆಗಳಿಂದ ಹಣ ಜಮೆಯಾಗುತ್ತದೆ. ನಿಮಗೆ ಇದುವರೆಗೂ ಎಷ್ಟು ಹಣ ಬಂದಿದೆ ಎಂದು ಈಗ ನಿಮ್ಮ ಫೋನಿನಲ್ಲಿ ಆಧಾರ್ ಸಂಖ್ಯೆ ಹಾಕೋ ಮೂಲಕ ನೀವು ತಿಳಿಯಬಹುದು. ಹೇಗೆ ಅಂತಿರಾ? ಇಲ್ಲಿದೆ ನೋಡಿ.
ರೈತರು ತಮ್ಮ ಬಳಿಯಿರುವ ಫೋನ್ ನಲ್ಲೇ ಯಾವ ಬೆಳೆಗೆ ಎಷ್ಟು ಬೆಳೆಹಾನಿ ಪರಿಹಾರ ಹಣವಾಗಿರಬಹುದು ಅಥವಾ ಇನ್ನೀತ್ತರ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
* ಗೂಗಲ್ ಪ್ಲೇ ಸ್ಟೋರ್ (Google pay store) ಮೂಲಕ ಡಿ.ಬಿ.ಟಿ(dbt) ಎಂಬ ಆಯಪನ್ನು (app) ಡೌನ್ಲೋಡ್(download) ಮಾಡಿಕೊಳ್ಳಿ https://play.google.com/store/apps/details?I’d=com.dbtkarnataka
* ನಂತರ ನಿಮಗೆ ಒಂದು ಅಪ್ಲಿಕೇಶನ್ ಓಪನ್ ಆಗುವುದು
* ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಅಲ್ಲಿ ಸೆಂಡ್ ಒಟಿಪಿ ಎಂಬ ಆಯ್ಕೆ ಇರೋದು ಅದನ್ನು ಸಮ್ಮಿಟ್ ಮಾಡಿ.
* ನಿಮ್ಮ ಆಧಾರ್ ಅನ್ನು ಹಾಕಿದ ನಂತರ ಓಟಿಪಿ ಯನ್ನು ಹಾಕಿ ನಂತರ ನೀವು ಅಲ್ಲಿ ಕಾಣುವ ಸಬ್ಮಿಟ್ ಬಟನ್ ಅನ್ನು ಒತ್ತಿ.
* ಹಾಕಿದ ನಂತರ ಕೆಳಗಡೆ ನಿಮ್ಮ ಭದ್ರತೆಗೋಸ್ಕರ ಎಂ ಪಿನ್ ಎಂಬ ಭದ್ರತಾ ಕೊಡ್ ಅನ್ನೋ ನೀವು ಕ್ರಿಯೇಟ್ ಮಾಡಿಕೊಳ್ಳಿ.
* ಈ ಎಂಪಿನ್ ಎಂಬುದನ್ನು ಕ್ರಿಯೇಟ್ ಮಾಡಿದ ನಂತರ ನಿಮಗೆ ಮುಖಪುಟ ಓಪನ್ ಆಗುವುದು.
* ನಂತರ ಪೇಮೆಂಟ್ ಸ್ಟೇಟಸ್ ಎಂಬುದನ್ನು ಕ್ಲಿಕ್ ಮಾಡಿ.
ಆಗ ನಿಮಗೆ ಸರ್ಕಾರದಿಂದ ಯಾವ ಯಾವ ಯೋಜನೆಯಿಂದ ನಿಮಗೆ ಎಷ್ಟು ಹಣ ನಿಮ್ಮ ಅಕೌಂಟಿಗೆ ಕ್ರೆಡಿಟ್ ಆಗಿದೆ ಎಂಬುದನ್ನು ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಬಹುದು.
ತಿಂಗಳಿಗೆ ಅತಿ ಹೆಚ್ಚು ಸಂಬಳ ನೀಡುವ ಟಾಪ್ ಸರ್ಕಾರಿ ಹುದ್ದೆಗಳು ಯಾವುದು ಗೊತ್ತ?
ನಮ್ಮಲ್ಲಿ ಬಹುತೇಕರು ಸರ್ಕಾರಿ ಉದ್ಯೋಗಗಳಿಗಾಗಿ ಸಾಕಷ್ಟು ವರ್ಷಗಳ ಕಾಲ ಪ್ರಯತ್ನಿಸುತ್ತಾರೆ. ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಸರ್ಕಾರಿ ಕೆಲಸ ಸಿಕ್ಕಿದ್ದರು ಸಾಕು ಅನ್ಕೋತಾರೆ. ಆದರೆ ಇನ್ನೂ ಕೆಲವರು ಪ್ರೈವೇಟ್ ಜಾಬ್ಸ್ ಬೆಸ್ಟ್ ಅಂತಾರೆ. ಯಾಕಂದ್ರೆ ಅಲ್ಲಿ ಲಕ್ಷಗಳಲ್ಲಿ ಸಂಬಳ ಸಿಗುತ್ತೆ, ಪ್ಯಾಕೇಜ್ ಚೆನ್ನಾಗಿರುತ್ತೆ ಅಂತ. ಆದ್ರೆ ಅದು ಸಂಪೂರ್ಣ ಸತ್ಯವಲ್ಲ. ಸರ್ಕಾರಿ ಕೆಲಸಗಳಲ್ಲೂ ಲಕ್ಷಾಂತರ ಸಂಬಳ ಪಡೆಯುವಂತಹ ಹುದ್ದೆಗಳಿವೆ. ಆ ಹುದ್ದೆಗಳು ಯಾವುವು ಅಂತ ನಾವು ಇವತ್ತು ನೋಡೋಣ.
ಇದನ್ನೂ ಓದಿ; ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ ಪವನ್
ಪ್ರೈವೇಟ್ ಜಾಬ್ ಗಳಲ್ಲಿ ಲಕ್ಷಾಂತರ ರೂಪಾಯಿ ಪ್ಯಾಕೇಜ್ ಸಿಗುತ್ತೆ. ಆದರೂ ಇವತ್ತಿಗೂ ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಿಗೆ ವರ್ಷಗಳ ಕಾಲ ತಯಾರಿ ನಡೆಸುತ್ತಾರೆ. ಯಾಕೆಂದ್ರೆ ಪ್ರೈವೇಟ್ ಜಾಬ್ ಗಳಲ್ಲಿ ಸಂಬಳ ಜಾಸ್ತಿ ಇದ್ರೂ ಜಾಬ್ ಸೆಕ್ಯೂರಿಟಿ ಇರೋದಿಲ್ಲ. ಆದರೆ ಸರ್ಕಾರಿ ಹುದ್ದೆಗಳಲ್ಲಿ ಉದ್ಯೋಗ ಭದ್ರತೆ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
ಅದಕ್ಕಾಗಿಯೇ ಜನ ಜಾಸ್ತಿ ಸಂಬಳ ಬರದಿದ್ದರೂ ಜಾಬ್ ಸೆಕ್ಯೂರಿಟಿಗಾಗಿ ಸರ್ಕಾರಿ ಹುದ್ದೆಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲೂ ಸರ್ಕಾರಿ ಹುದ್ದೆಗಳಿಗೆ ಬೇಡಿಕೆ ಇದೆ. ಹಾಗಾದರೆ ಯಾವೆಲ್ಲ ಹುದ್ದೆಗಳಲ್ಲಿ ಲಕ್ಷಗಳ ಪ್ಯಾಕೇಜ್ ಸಿಗುತ್ತೆ ಅನ್ನೋದರ ಬಗ್ಗೆ ಇವತ್ತು ಇಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ; ಜನಾರ್ಧನ್ ರೆಡ್ಡಿಗೆ ಮತ್ತೊಂದು ಸಂಕಷ್ಟ; ಸಾವಿರಾರು ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಆದೇಶ
1. ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಗಳು:
ಅತೀ ಹೆಚ್ಚು ಸಂಬಳ ನೀಡುವ ಮತ್ತು ಗೌರವಾನ್ವಿತ ಹುದ್ದೆಗಳ ಪೈಕಿ ಉಪನ್ಯಾಸಕ ಹುದ್ದೆಯು ಒಂದು. ಉಪನ್ಯಾಸಕ ಹುದ್ದೆಗಳಿಗೆ ರೂ.40,000 ದಿಂದ 1,00,000 ದವರೆಗೂ ವೇತನ ನೀಡಲಾಗುತ್ತದೆ.
2. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆ:
ವಿದೇಶಾಂಕ ಸಚಿವಾಲಯದ ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಎಎಸ್‌ಒ) ಹುದ್ದೆ ಪಡೆಯಬೇಕಾದರೆ ಸಿಬ್ಬಂದಿ ನೇಮಕಾತಿ ಆಯೋಗದ (ಎಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ವಿದೇಶಾಂಗ ಸಚಿವಾಲಯದ ಎಎಸ್‌ಒ ಹುದ್ದೆಗಳಿಗೆ 50.000 ದಿಂದ ರೂ.1,80,000 ದವರೆಗೆ ವೇತನ ನೀಡಲಾಗುತ್ತದೆ.
3. ಸರ್ಕಾರಿ ಬ್ಯಾಂಕ್ ಹುದ್ದೆಗಳು;
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳ ಬಯಸುವ ಅಭ್ಯರ್ಥಿಗಳಿಗೆ ಹುದ್ದೆ ಬೆಸ್ಟ್ ಎಂದೇಳಬಹುದು. ಈ ಹುದ್ದೆಗೆ ಸಾಮಾನ್ಯವಾಗಿ ಮಾಸಿಕ 30,000 ರಿಮದ 1,00,000 ದವರೆಗೆ ವೇತನ ನೀಡಲಾಗುತ್ತದೆ.
4. ಪಿಎಸ್‌ಯು ಜಾಬ್ಸ್ (ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್):
ಪಿಎಸ್‌ಯು ಅಥವಾ ಪಬ್ಲಿಕ್ ಸೆಕ್ಟಾರ್ ಅಂಡರ್‌ಟೇಕಿಂಗ್ ಜಾಬ್ಸ್ ಗಳಿಗೆ ಇಂಜಿನಿಯರ್ ಪದವೀಧರರು ಅರ್ಜಿ ಸಲ್ಲಿಸಬಹುದು. ಪಿಎಸ್‌ಯು ಹುದ್ದೆಯ ಅಧಿಕಾರಿಗಳಿಗೆ ರೂ.52,000 ಮಾಸಿಕ ಸಂಭಾವನೆ ನೀಡಲಾಗುತ್ತದೆ.
5. ರಕ್ಷಣಾ ಸೇವೆ:
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಕಂಬೈನ್ಡ್ ಡಿಫೆನ್ಸ್ ಸರ್ವೀಸ್, ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ಸೇರಿದಂತೆ ಇತರೆ ಹಲವು ಪರೀಕ್ಷೆಗಳನ್ನು ರಕ್ಷಣಾ ಸೇವೆಯ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುತ್ತದೆ. ಪ್ರೌಢಶಿಕ್ಷಣ ಮುಗಿಸಿದ ನಂತರ ಅಥವಾ ಪದವಿ ಶಿಕ್ಷಣ ಮುಗಿಸಿದ ನಂತರ ಯಾವಾಗ ಬೇಕಾದರೂ ಈ ಸೇವೆಗೆ ಸೇರಬಹುದು. ರಕ್ಷಣಾ ಇಲಾಖೆಯ ಹುದ್ದೆಗಳಿಗೆ ಆರಂಭಿಕ ವೇತನ ರೂ. 50,000 ರಿಂದ 1,00,000 ದವರೆಗೆ ಇರುತ್ತದೆ.
6. ರೈಲ್ವೆ ಇಂಜಿನಿಯರ್ ಹುದ್ದೆ:
ರೈಲ್ವೆ ಇಂಜಿನಿಯರ್ ಹುದ್ಡೆಗಳಿಗೆ ಮಹತ್ವವಾದ ಹಾಗೂ ಒಳ್ಳೆಯ ಹುದ್ದೆ ಎಂದು ಕರೆಸಿಕೊಂಡಿದ್ದೆ ಇವರಿಗೆ ವಿವಿಧ ಭತ್ಯೆಗಳ ಜೊತೆಗೆ ಮಾಸಿಕ 70,000 ರಿಂದ 1,00,000 ದವರೆಗೆ ಸಂಬಳ ನೀಡಲಾಗುತ್ತದೆ.
7. ಆದಾಯ ತೆರಿಗೆ ಇಲಾಖೆ:
ಈ ಹುದ್ದೆಯಲ್ಲಿ ನಾನಾತರವಾದ ಹುದ್ದೆಗಳು ಅದರಲ್ಲಿ ಆದಾಯ ತೆರಿಗೆ ಇಲಾಖೆಯ ಇನ್ಸ್ಪೆಕ್ಟರ್ ಹಾಗೂ ಕಮಿಷನರ್ ವರೆಗೆ ಯಾವ ಹುದ್ದೆಗೆ ಬೇಕಾದರು ಏರಬಹುದು. ಇದರಲ್ಲಿ ವಿವಿಧ ಸೌಲಭ್ಯಗಳು ಸಹ ನೀಡಲಾಗುತ್ತದೆ. ಮಾಸಿಕ ವೇತನ 50,000 ರಿಂದ 1,00,000 ದವರೆಗೆ ನೀಡಲಾಗುತ್ತದೆ.
8. ಸರ್ಕಾರಿ ವೈದ್ಯರು:
ಇನ್ನು ವೈದ್ಯರ ವೇತನ ಹೆಚ್ಚುವರಿಯಾಗಿನೆ ಇರುತ್ತದೆ. ಓರ್ವ ಸರ್ಕಾರಿ ಹಿರಿಯ ಸರ್ಜನ್ ಗೆ 1,00,000 ದಿಂದ 2,00,000 ದವರೆಗೆ ಸಿಗುತ್ತದೆ, ಕಿರಿಯ ವೈದ್ಯರಿಗೆ 50,000 ರಿಂದ 90,000 ದವರೆಗೆ ನೀಡಲಾಗುತ್ತದೆ.
9. ಸರ್ಕಾರಿ ವಿಜ್ಞಾನಿ:
ದೇಶದ ಪ್ರಗತಿಗೆ ಹಾಗೂ ಅದರ ವೈಜ್ಞಾನಿಕ ಅಭಿವೃದ್ದಿಯಲ್ಲಿ ವಿಜ್ಞಾನಿಗಳ ಪಾತ್ರ ಬಹಳ ಮುಖ್ಯ. ಇವರಗೆ ಮಾಸಿಕ ವೇತನ 40,000 ರಿಂದ 1,00,000 ದವರೆಗೆ ನೀಡಲಾಗುತ್ತದೆ. ಹಾಗೂ ಅನುಭವದ ಮೇಲೆ ಮಾಸಿಕ ವೇತನ ಹೆಚ್ಚಿಸಲಾಗುತ್ತದೆ.
ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ
10. ಸರ್ಕಾರಿ ಬ್ಯಾಂಕ್ ಹುದ್ದೆಗಳು:
ಬ್ಯಾಂಕ್ ಹುದ್ದೆಗಳಲ್ಲಿ ನಾನಾತರವದ ಹುದ್ದೆಗಳು ಇರುತ್ತದೆ ಅದರಲ್ಲಿ ಮಾಸಿಕ ವೇತನ 30,000 ರಿಂದ 1,00,000 ದವರೆಗೆ ಸಾಮಾನ್ಯವಾಗಿ ಸಿಗುತ್ತದೆ. ಇನ್ನು ಅನುಭವದ ಮೇಲೆ ಮಾಸಿಕ ವೇತನ ಹೆಚ್ಚಿಸಲಾಗುತ್ತದೆ.
ಮೇಲಿನ ಸರ್ಕಾರಿ ಹುದ್ದೆಗಳಿಗೆ ನೀಡಲಾದ ವೇತನ ಮಾಹಿತಿಯೂ ಆರಂಭಿಕ ವೇತನವಾಗಿದೆ. ಅದೇ ಹುದ್ದೆಗಳಲ್ಲಿ ಮುಂದುವರೆಯುವವರು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಬಳ ಪಡೆಯುತ್ತಾ ಮುಂದುವರೆಯುತ್ತಾರೆ. ಅಲ್ಲದೆ, ಆ ಹುದ್ದೆಯಿಂದ ಮತ್ತೊಂದು ಉನ್ನತ ಹುದ್ದೆಗೆ ಭಡ್ತಿ ಸಹ ಪಡೆಯುತ್ತಾರೆ.