Tuesday, November 28, 2023
Homeಸುದ್ದಿಗಳುದೇಶಉಭಯ ದೇಶಗಳ ಕಮಾಂಡರ್ ಹಂತದ ಸಭೆ : ಸೇನೆ ಹಿಂಪಡೆತದ ಕುರಿತು ಗಂಭೀರ ಚರ್ಚೆ

ಉಭಯ ದೇಶಗಳ ಕಮಾಂಡರ್ ಹಂತದ ಸಭೆ : ಸೇನೆ ಹಿಂಪಡೆತದ ಕುರಿತು ಗಂಭೀರ ಚರ್ಚೆ

ನವದೆಹಲಿ: ಭಾರತ ಮತ್ತು ಚೀನಾ ಸೇನೆಗಳ ನಡುವಿನ ಕಾರ್ಪ್ಸ್ ಕಮಾಂಡರ್-ಮಟ್ಟದ 12 ನೇ ಸುತ್ತಿನ ಚರ್ಚೆ ನಡೆಯುತ್ತಿದ್ದು, ಗೋಗ್ರ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ಘರ್ಷಣೆಯ ಕೇಂದ್ರಬಿoದು ಗಡಿಗಳಲ್ಲಿ ಉಭಯ ಸೇನೆಗಳನ್ನು ಹಿಂಪಡೆಯುವ ಕುರಿತು ಉನ್ನತ ಮಟ್ಟದ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಭಾರತ ಮತ್ತು ಚೀನಾ ನಡುವಿನ 12ನೇ ಸುತ್ತಿನಲ್ಲಿ ಕಮಾಂಡರ್-ಮಟ್ಟದ ಮಾತುಕತೆಗಳು ಮೊಲ್ಡೊದ ನೈಜ ನಿಯಂತ್ರಣದ ರೇಖೆಯಲ್ಲಿ ಪ್ರಾರಂಭವಾಯಿತು. ಭಾರತ ಮತ್ತು ಚೀನಾ ಈಗಾಗಲೇ ಪ್ಯಾಂಗೋoಗ್ ಸರೋವರದ ಗಡಿ ಪ್ರದೇಶಗಳಲ್ಲಿ, ಹಾಗೂ ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ ಪ್ರದೇಶಗಳಲ್ಲಿನ ಸೇನಾ ನಿಯೋಜನೆಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಸಲಾಗಿದೆ ಎಂದು
ಸೇನಾ ಮೂಲಗಳು ಮಾಹಿತಿಯನ್ನು ನೀಡಿವೆ.

ಮೂಲಗಳ ಪ್ರಕಾರ ಚೀನಾ ಸೈನಿಕಾಧಿಕಾರಿಗಳು ಸೇನೆ ಹಿಂಪಡೆಯುವ ಕುರಿತು ಸಕಾರಾತ್ಮಕ ಮಾಹಿತಿ ನೀಡಿದ್ದು, ಕಳೆದ ವರ್ಷ ಚೀನೀ ಆಕ್ರಮಣ ಮಾಡಿಕೊಂಡಿದ್ದ ಪೋಸ್ಟ್ ಗಳನ್ನುತೆರವುಗೊಳಿಸುವ ವಿಷಯದ ಕುರಿತು ಗಂಭೀರವಾದ ಚರ್ಚೆಯನ್ನು ನಡೆಸಲಾಗಿದೆ.

ಭಾರತ ಮತ್ತು ಚೀನಾ ಎರಡು ದೇಶಗಳು ಕಳೆದೊಂದು ವರ್ಷ ವಿವಾದಿತ ಗಡಿ ಪ್ರದೇಶದಲ್ಲಿ ಮಿಲಿಟರಿ ನಿಲುಗಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವು. ಆದರೆ ಮಿಲಿಟರಿ ಮತ್ತು ರಾಜಕೀಯ ಮಟ್ಟಗಳಲ್ಲಿ ವ್ಯಾಪಕ ಮಾತುಕತೆಗಳ ನಂತರ ಕಳೆದ ತಿಂಗಳ ಅವಧಿಯಲ್ಲಿ ಅತ್ಯಂತ ವಿವಾದಾಸ್ಪದ ಪ್ಯಾಂಗೋoಗ್ ಲೇಕ್ ಪ್ರದೇಶದಿಂದ ಸೇನೆಯನ್ನು ಹಿಂಪಡೆಯಲು ಈ ಹಿಂದಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಸಭೆ ನಡೆಸಿ ಚೀನಾ ಸಹವರ್ತಿಗಳೊಂದಿಗೆ ಪರಿಸ್ಥಿತಿಯ ಗಂಭೀರತೆಯ ಕುರಿತು ಮಾತುಕತೆ ನಡೆಸಿದ್ದರು. ಈ ಹಿಂದೆ ನಡೆದಂತಹ 11 ಸುತ್ತಿನ ಮಾತುಕತೆಗಳಲ್ಲಿ ವಿವಾದಿತ ಪ್ಯಾಂಗೋoಗ್ ಲೇಕ್ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವ ಕುರಿತ ಚರ್ಚೆಯೇ ಪ್ರಮುಖವಾಗಿತ್ತು ಎಂದು ಮೂಲಗಳು ತಿಳಿಸಿವೆ.

Most Popular

Recent Comments