Wednesday, April 24, 2024
Homeವಿಶೇಷತಂತ್ರಜ್ಞಾನವಾಹನ ಸವಾರರಿಗೆ ಸಿಹಿ ಸುದ್ದಿ: ಪೊಲೀಸರಿಗೆ ಮೊಬೈಲ್ ನಲ್ಲೇ ತೋರಿಸಿ ಎಲ್ಲಾ ದಾಖಲೆ

ವಾಹನ ಸವಾರರಿಗೆ ಸಿಹಿ ಸುದ್ದಿ: ಪೊಲೀಸರಿಗೆ ಮೊಬೈಲ್ ನಲ್ಲೇ ತೋರಿಸಿ ಎಲ್ಲಾ ದಾಖಲೆ

ವಾಹನ ಸವಾರರಿಗೊಂದು ಸಿಹಿ ಸುದ್ದಿ ಇಲ್ಲಿದೆ : ಈ ಹಿಂದಿನ ದಿನಗಳಲ್ಲಿ ವಾಹನ ಗಳ ದಾಖಲೆಯನ್ನು ಎಲ್ಲಿಗೆ ಹೋದರೂ ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು. ಅದರಲ್ಲಿ ದಾಖಲೆಯನ್ನು ಕಳೆದು ಕೊಂಡವರೆಷ್ಟೋ. ಮಳೇಗಾಲದಲ್ಲಿ ಒದ್ದೆಯಾಗಿ ಪ್ರಯೋಜನಕ್ಕೆ ಬಾರದಂತೆ ಆದ ದಾಖಲೆಗಳ ಎಷ್ಟೋ ಉದಾಹರಣೆಗಳು ಇದೆ. ಆದರೆ ಈಗ ಎಲ್ಲವೂ ಬದಲಾಗಿದೆ

ಇನ್ನು ಮುಂದಿನ ದಿನಗಳಲ್ಲಿ ಒರಿಜಿನಲ್ ವಾಹನ ದಾಖಲೆಗಳು ಹಾಗೂ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಜೊತೆಯಲ್ಲೇ ತೆಗೆದುಕೊಂಡು ಹೋಗ ಬೇಕೆಂದಿಲ್ಲ ಬದಲಾಗಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪೋಲೀಸರಿಗೆ ತೋರಿಸಬಹುದು ಎಂದು ಜಂಟಿ ಪೋಲಿಸ್ ಸಂಚಾರ ಆಯುಕ್ತರಾದ ರವಿಕಾಂತೇಗೌಡ ರವರು ತಿಳಿಸಿದ್ದಾರೆ.

ಕೇಂದ್ರದ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಮತ್ತು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯ ಜಾರಿಗೆ ತಂದಿರುವ ಡಿಜಿಲಾಕರ್ ಮತ್ತು ಎಂಪರಿವಾಹನ್ ಮೊಬೈಲ್ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ಪೊಲೀಸರು ತಪಾಸಣೆ ನಡೆಸುವ ವೇಳೆಗೆ ದಾಖಲೆಗಳನ್ನು ತೋರಿಸಬಹುದು ಎಂದು ಅವರು ತಿಳಿಸಿದರು.ದೇಶವು ಡಿಜಿಟಲ್ ಪತದತ್ತ ಸಾಗುತ್ತಿದೆ. ಹೀಗಿರುವಾಗ ಪ್ರತಿಯೊಂದು ಆಯಾಮಗಳಲ್ಲಿಯೂ ನಾವು ಹೊಸತನ್ನು ಅಳವಡಿಸಿ ಕೊಳ್ಳುತ್ತಾ ಮುಂದೆ ಸಾಗಬೇಕಿದೆ ಆ ನಿಟ್ಟಿನಲ್ಲಿ, ಈ ರೀತಿಯಾದ ಹೊಸ ಕ್ರಮಗಳು ವಾಹನ ಸಂಚಾರ ಮಾಡುವವರಿಗೆ ಹಾಗೂ ತಪಾಸಣೆ ನಡೆಸುವ ಅಧಿಕಾರಿಗಳಿಗೆ ಇಬ್ಬರಿಗೂ ಸಮಾನವಾದ ಅನುಕೂಲ ಆಗಲಿದೆ ಎಂದು ಹೇಳಿದರು.

ತನಿಖಾಧಿಕಾರಿಗಳು ತಪಾಸಣೆ ನಡೆಸುವ ವೇಳೆ ವಾಹನ ಸವಾರರು ತೋರಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಶೀಲಿಸಿದ ನಂತರ ವಾಹನ ಸವಾರರು ತೆರಳಬಹುದು ಎಂದು ಮಾಹಿತಿಯನ್ನು ನೀಡಿದರು.ಈ ಹಿಂದೆಯೇ ಈ ಯೋಜನೆ ಜಾರಿಗೆ ಬಂದಿದ್ದರೂ ಸಹ ಹಲವೆಡೆ ಇದರ ಪಾಲನೆಯಾಗುತ್ತಿರಲಿಲ್ಲ. ಇದೀಗ ಇದರ ಅನುಷ್ಠಾನಕ್ಕೆ ಪೊಲೀಸ್ ಇಲಾಖೆಯೇ ಇಳಿದಿದೆ.

Most Popular

Recent Comments