Sunday, June 4, 2023
Homeಇತರೆಗಂಡ ಮಾಡಿರುವಂತಹ ಸಾಲಕ್ಕೆ ಹೆದರಿ ಒಂದೇ ಸೀರೆಗೆ ಕೊರಳೊಡ್ಡಿ ಸಾವಿಗೆ ಶರಣಾದ ತಾಯಿ, ಮಗಳು

ಗಂಡ ಮಾಡಿರುವಂತಹ ಸಾಲಕ್ಕೆ ಹೆದರಿ ಒಂದೇ ಸೀರೆಗೆ ಕೊರಳೊಡ್ಡಿ ಸಾವಿಗೆ ಶರಣಾದ ತಾಯಿ, ಮಗಳು

ಶಿವಮೊಗ್ಗ: ಗಂಡ ಮಾಡಿರುವಂತಹ ಸಾಲಕ್ಕೆ ಹೆದರಿ ತಾಯಿ-ಮಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನಕಲುಕುವ ಘಟನೆ ಭದ್ರಾವತಿಯ ಯಾಕ್ಸಿನ್ ನಗರದಲ್ಲಿ ಮಂಗಳವಾರ ನಡೆದಿದೆ.

ಸಂಗೀತಾ (35) ಹಾಗೂ ಮಧುಶ್ರೀ (11) ಮೃತ ದುರ್ದೈವಿಗಳು. ಸಂಗೀತಾ ಪತಿ ಧನಶೇಖರ್ ಹೋಲ್‌ಸೇಲ್ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು.

ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಅವರ ವ್ಯವಹಾರದಲ್ಲಿ ಅಪಾರವಾದಂತಹ ನಷ್ಟವನ್ನು ಅನುಭವಿಸಿದ್ದರು. ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿoದ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದರು. ಪತಿಯ ಸಾಲದ ವಿಷಯವನ್ನು ತಿಳಿದಿದ್ದಂತಹ ಪತ್ನಿ ಸಂಗೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಗಂಡ ಮಾಡಿರುವಂತಹ ಸಾಲಕ್ಕೆ ಹೆದರಿಯೇ ತಾಯಿ-ಮಗಳು ನೇಣನ್ನು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಊಹಿಸಲಾಗಿದೆ.

Most Popular

Recent Comments