Sunday, September 24, 2023
Homeಮಲೆನಾಡುಚಿಕ್ಕಮಗಳೂರುದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ದೀಪಕ್ ದೊಡ್ಡಯ್ಯ

ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ದೀಪಕ್ ದೊಡ್ಡಯ್ಯ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ ಎಸ್ ಸಿ ಮೀಸಲು ಕ್ಷೇತ್ರಕ್ಕೆ ದೀಪಕ್ ದೊಡ್ಡಯ್ಯ ಹೆಸರು ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನವನ್ನು ಪಡೆದರು.

ಇದನ್ನೂ ಓದಿ;  ksrtc ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ; ಪುಟ್ಟ ಕಂದಮ್ಮ ಸೇರಿ ಆರು ಮಂದಿ ಬಲಿ

ಮೂಡಿಗೆರೆ ಎಸ್ ಸಿ ಮೀಸಲು ಕ್ಷೇತ್ರಕ್ಕೆ ದೀಪಕ್ ದೊಡ್ಡಯ್ಯ ಅವರ ಹೆಸರು ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿತ್ತು. ಈ ಹಿನ್ನಲೆಯಲ್ಲಿ ಚುನಾವಣೆ ಪ್ರಚಾರಕ್ಕೂ ಮುನ್ನ ದತ್ತಾತ್ರೇಯನ ಪಾದುಕೆ ದರ್ಶನವನ್ನು ದೀಪಕ್ ದೊಡ್ಡಯ್ಯ ಹಾಗೂ ತನ್ನ ಕಾರ್ಯಕರ್ತರ ಜೊತೆ ಭೇಟಿ ನೀಡಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಇನ್ನೂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತಾರು ವರ್ಷದ ಹೋರಾಟದ ಫಲವಾಗಿ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ಆಗಿದೆ. ದತ್ತಪೀಠದ ಅಭಿವೃದ್ಧಿಗೆ ಸದಾ ಸಿದ್ದ ಇರುತ್ತೇನೆ. ಚುನಾವಣೆ ವಿಜಯದ ನಂತರ ನನ್ನ ಮೊದಲ ಪೂಜೆ ದತ್ತಪೀಠದಲ್ಲಿ ಎಂದು ದೀಪಕ್ ದೊಡ್ಡಯ್ಯ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ👇;

ಕೊನೆಗೂ ಮೂಡಿಗೆರೆ ಹಾಗೂ ತರೀಕೆರೆಯ ಟಿಕೆಟ್ ಘೋಷಿದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಕಡೆಯ ಪಟ್ಟಿಯಲ್ಲಿ 43  ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಕೊನಗೂ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೊದಲ 2 ಎರಡು ಪಟ್ಟಿ ಬಿಡುಗಡೆಗೊಳಿಸಿದ್ದ ಕಾಂಗ್ರೆಸ್ ಟಫ್ ಫೈಟ್ ಇರೋ ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿತ್ತು. ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ; ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರಂಟ್

ಇನ್ನು ಮೂಡಿಗೆರೆ ಕ್ಷೇತ್ರದಿಂದ ನಯನ ಮೋಟಮ್ಮಗೆ ಟಿಕೆಟ್ ಫೈನಲ್ ಆಗಿದೆ. ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಶ್ರೀನಿವಾಸ್ ಅವರಿಗೆ ಟಿಕೆಟ್ ಫೈನಲ್ ಆಗಿದೆ.

ಮೂಡಿಗೆರೆಯಿಂದ ಕಾಂಗ್ರೆಸ್ ನಲ್ಲಿ 5ಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳಿದ್ದರು, ನಯನ ಮೋಟಮ್ಮಗೆ ಟಿಕೆಟ್ ನೀಡಬಾರದೆಂದು ಹಲವು ಬಾರಿ ಬಹಿರಂಗ ಸಭೆ ಮಾಡಿದ್ದರು. ನಯನ ಮೋಟಮ್ಮ ಇಲ್ಲಿಯವರಲ್ಲ ಅವರು ಹೊರಗಿನವರು, ಮೋಟಮ್ಮ ಅವರ ಮಗಳು ಎನ್ನುವುದೇ ಚುನಾವಣೆಗೆ ಸ್ಪರ್ಧಿಸಲು ಮಾನದಂಡವಾಗುವುದಿಲ್ಲ ಎಂಬ ಮಾತುಗಳು ಮೂಡಿಗೆರೆಯ ಕಾಂಗ್ರೆಸ್ ಆಕಾಂಕ್ಷಿಗಳಿಂದ ಕೇಳಿಬಂದಿತ್ತು. ತೀವ್ರ ವಿರೋಧದ ನಡುವೆಯೂ ನಯನ ಮೋಟಮ್ಮಗೆ ಕೈ ಟಿಕೆಟ್ ಘೋಷಣೆ ಮಾಡಿದೆ.

ಇದನ್ನೂ ಓದಿ; 5 ನಿಮಿಷದಲ್ಲಿ ಕೈ ಸೇರುತ್ತೆ ಡಿಜಿಟಲ್ ವೋಟರ್ ಐಡಿ

ಇನ್ನು ತರೀಕೆರೆಯಲ್ಲಿ ಗೋಪಿಕೃಷ್ಣ ಪ್ರಭಲ ಆಕಾಂಕ್ಷಿಯಾಗಿದ್ದರು. ಲಿಂಗಾಯಿತ ನಾಯಕ ದೋರನಾಳು ಪರಮೇಶ್ ಕೂಡ ರೇಸ್ ನಲ್ಲಿದ್ದರು. ಇತ್ತೀಚಿಗಷ್ಟೇ ದೋರನಾಳು ಪರಮೇಶ್ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಕೊಟ್ಟು ಈ ಬಾರಿ ದೋರನಾಳ್ ಪರಮೇಶ್ ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಆದರೆ ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್ ಶ್ರೀನಿವಾಸ್ ಗೆ ಟಿಕೆಟ್ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಟಿಕೆಟ್ ಘೋಷಣೆ ಮಾಡಿದ್ದು, ಬಾರೀ ಗೊಂದಲವಿರುವ ಚಿಕ್ಕಮಗಳೂರಿನ ಟಿಕೆಟ್ ಬಾಕಿ ಉಳಿಸಿಕೊಂಡಿದೆ.

Most Popular

Recent Comments