ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಆಸ್ಪತ್ರೆಯ ಆವರಣದಲ್ಲಿ ರೋಗಿಯೊಬ್ಬರು ಮೃತ ಪಟ್ಟಿರುವ ಘಟನೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಮಂಜುನಾಥ್(32) ಮೃತ ಪಟ್ಟ ವ್ಯಕ್ತಿ.
ಇದನ್ನೂ ಓದಿ; ನಾಗರ ಹಾವು ಕಚ್ಚಿ ಉರಗತಜ್ಞ ಸ್ನೇಕ್ ನರೇಶ್ ಸಾವು
ಇದನ್ನೂ ಓದಿ; ಸಿಡಿಲು ಬಡಿದು ಮಹಿಳೆ ಸಾವು
ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ದಾವಣಗೆರೆ ಜಿಲ್ಲೆಯ ಚನ್ನಗರಿ ಪಟ್ಟಣದ ನಿವಾಸಿ ಮಂಜುನಾಥ್, ಮೇ. 19 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಇತನನ್ನು ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ಒಳ ರೋಗಿ ಯಾವುದೇ ಡಿಸ್ಜಾರ್ಚ್ ಪ್ರಕ್ರಿಯೆ ನಡೆಯದೆ, ಇನ್ನೂ ಚೇತರಿಸಿಕೊಳ್ಳದ ರೋಗಿಯು ಒಳರೋಗಿ ವಿಭಾಗದಿಂದ ಹೊರಗೆ ಬಂದಿದ್ದಾನೆ, ಆಸ್ಪತ್ರೆಯ ಸಿಬ್ಬಂದಿ ಈತನನ್ನು ಗಮನಿಸಿಲ್ಲ, ಇದರ ಪರಿಣಾಮ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ
- ಸಾಲಬಾಧೆಯಿಂದ ಬೇಸತ್ತ ಯುವಕರೈಲಿಗೆ ತಲೆಕೊಟ್ಟು ಆತ್ಮಹತ್ಯೆ
- ಸರಕು ಸಾಗಣೆ ವಾಹನ ಮತ್ತು ಸ್ಕೂಟರ್ ಮಧ್ಯೆ ಅಪಘಾತ; ಸ್ಕೂಟರ್ ಸವಾರ ಸಾವು
ಮಂಜುನಾಥ್‌ನ ಬ್ಯಾಗ್‌ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ದಾಖಲೆ ಸೇರಿದಂತೆ ಇನ್ನಿತರ ದಾಖಲೆಗಳು ಪತ್ತೆಯಾಗಿವೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು, ಕ್ಯಾಂಪಸ್‌ನಲ್ಲಿ ಕೂನೆ ಉಸಿರು ಎಳೆದಿದ್ದಾನೆ. ಈ ಘಟನೆಯಿಂದ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹೀಗೆ ಒಳರೋಗಿ ಆಗಿದ್ದ ಮೃತನು ಹೊರಗೆ ಬಂದಿದ್ದು ಹೇಗೆ ಬಂದ ಬಳಿಕ ಆತನ ಬಗ್ಗೆ, ಯಾರು ಕೂಡಾ ನಿಗಾವಹಿಸಿಲ್ಲ, ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯು ಸೂಕ್ತ ಚಿಕಿತ್ಸೆ ಸಿಗದೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಾಣ ಬಿಟ್ಟಿದ್ದಾನೆ. ಮೃತನ ಸಂಬಂಧಿಕರು ಘಟನೆ ಕುರಿತು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ಮತ್ತು ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ಬೈಕ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಮಹಿಳೆ ಸಾವು
ಬಿರುಗಾಳಿ ಮಳೆ ಸೃಷ್ಟಿಸಿದ ಅವಾಂತರ: ಎಲ್ಲೆಲ್ಲಿ ಏನೇನು?
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಮೂಲಕ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ ಹಲವೆಡೆ ಬೆಳೆಗಳು ನಾಶವಾಗಿದೆ, ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ.
ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲವೆಡೆ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬೇಲೂರು, ಚೀಕನಹಳ್ಳಿ, ಮೂಡಿಗೆರೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತು ಮೂರು ಟ್ರಾನ್ಸ್ ಫಾರ್ಮ ಗಳು ಹಾಳಾಗಿವೆ. ಮತ್ತೊಂದೆಡೆ ಕೋನರ್ಲು ಗ್ರಾಮದಲ್ಲಿ ಬಿರುಗಾಳಿಗೆ ಹುಸೇನ್ ಎಂಬುವವರ ವಾಸದ ಮನೆಯ ಮೇಲ್ನಾವಣಿ ಹಾರಿ ಹೋಗಿದೆ. ಇನ್ನು ಭಾರಿ ಮಳೆಯಿಂದ ಟ್ರಾನ್ಸ್ಫಾರ್ಮ ಗಳು ಹಾಳಾದ ಹಿನ್ನೆಲೆ ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೆ ಬೇಲೂರು ತಾಲೂಕಿನ, ಬಳ್ಳೂರು ಗ್ರಾಮದಲ್ಲಿ ಧರ್ಮೇಗೌಡ ಎಂಬುವವರ ಜಮೀನಿನಲ್ಲಿ ನೂರಾರು ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಬಾಳೆ ಬೆಳೆ ಕಳೆದುಕೊಂಡ ರೈತ ಧರ್ಮೇಗೌಡ ಕಾಂಗಾಲಾಗಿದ್ದಾರೆ. ಅಲ್ಲದೆ ಗಾಳಿ, ಮಳೆಯಿಂದ ನೆಲಕ್ಕುರುಳಿದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಸಾರ್ವಜನಿಕರೇ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ; ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ; ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ