ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಪಡೆ ಬ್ಲ್ಯಾಕ್ ಕ್ಯಾಟ್ ವಿಭಾಗಕ್ಕೆ (ಎನ್‌ಎಸ್‌ಜಿ- National Security Gaurd) ಕಮಾಂಡೋ ಆಗಿ ನೇಮಕವಾಗಿದ್ದ ಚಿಕ್ಕಮಗಳೂರಿನ ನವ ವಿವಾಹಿತ ರಜೆ ಮುಗಿಸಿ ಕೆಲಸಕ್ಕೆ ಹೋಗುವಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ನಡೆದಿದೆ. ದೀಪಕ್ (22) ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಕಮಾಂಡೋ.
ಇದನ್ನೂ ಓದಿ; ಕಾರ್ಯಕರ್ತರ ಶ್ರಮ ಅಪಾರ, ಸಮಚಿತ್ತದಿಂದ ಚುನಾವಣೆಯ ಫಲಿತಾಂಶ ಸ್ವೀಕಾರ: ಡಿ.ಎನ್ ಜೀವರಾಜ್
ಇದನ್ನೂ ಓದಿ; ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್
ಮೃತ ದೀಪಕ್ ಮೂಲತಃ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ತಣಿಗೇಬೈಲು ಸಮೀಪದ ಜೈಪುರ ನಿವಾಸಿ. 2018ರಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಸೇರಿದ್ದ ದೀಪಕ್ ಇತ್ತೀಚೆಗೆ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ನೇಮಕವಾಗಿದ್ದರು.
ಕಳೆದ 2020 ರಲ್ಲಿ ಮದುವೆಯಾಗಿದ್ದ ದೀಪಕ್ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳ ಮೇಲೆ ರಜೆಗೆ ಊರಿಗೆ ಬಂದಿದ್ದ ದೀಪಕ್ ಇತ್ತೀಚೆಗೆ ತಾವು ಖರೀದಿಸಿದ್ದ ಹೊಸ ಬೈಕ್‌ನಲ್ಲಿ ರಜೆ ಮುಗಿಸಿ ಕೆಲಸಕ್ಕೆ ತೆರಳಲು ಬೆಂಗಳೂರಿಗೆ ಹೋಗುತ್ತಿದ್ದಾಗ ಯಡಿಯೂರಿನ ಹೇಮಾವತಿ ಕ್ರಾಸ್ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಡೂರು ತಾಲ್ಲೂಕು ಕಛೇರಿ SDA ಕಿರಣ್ ಕುಮಾರ್ ಅಮಾನತು; ಜಿಲ್ಲಾಧಿಕಾರಿಗಳಿಂದ ಆದೇಶ
- ವಿನಯ್ ಗುರೂಜಿ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿ ಏನು ಮೆಸೇಜ್ ಮಾಡ್ತಿದ್ದಾರೆ ಗೊತ್ತಾ?
- ಕಾದ ಕಾವಲಿಯಂತಿದ್ದ ಜಿಲ್ಲೆಗೆ ತಂಪೆರೆದ ಮಳೆರಾಯ, ಹಲವೆಡೆ ಅವಾಂತರ ಸೃಷ್ಟಿ
ದೀಪಕ್ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಮತ್ತೊಂದು ದುರ್ಘಟನೆ; ಒಂದೇ ಕುಟುಂಬದ ಮೂವರು ಸಾವು
ಚಿಕ್ಕಮಗಳೂರು: ಸ್ಟೈಲಾಗಿ ಡ್ರೆಸ್ ಮಾಡ್ಕೊಂಡು ಹಣ ವಸೂಲಿಗಿಳಿದ ಲೇಡಿ ಗ್ಯಾಂಗ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಮನೆ ಅಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದ ರಾಜಸ್ಥಾನದ ಖತರ್ನಾಕ್ ಲೇಡೀಸ್ ಗ್ಯಾಂಗ್ ಒಂದಕ್ಕೆ ಸಾರ್ವಜನಿಕರ ತರಾಟೆಗೆ ತೆಗದುಕೊಂಡಿರುವ ಘಟನೆ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ನಡೆದಿದೆ. (ವೀಡಿಯೋ ನೋಡಿ..)
ಇದನ್ನೂ ಓದಿ; ಬೆಂಗಳೂರಿಂದ ಚಿಕ್ಕಮಗಳೂರಿಗೆ 6 ಅತ್ಯಾಧುನಿಕ ‘ಎಲೆಕ್ಟ್ರಿಕ್ ಬಸ್’
ಪ್ರಕೃತಿ ವಿಕೋಪದಿಂದ ನಮ್ಮ ಮನೆ- ಆಸ್ತಿ ನಾಶವಾಗಿದೆ.. ನಮಗೆ ಹಾಕೋಕೆ ಬಟ್ಟೆಯೂ ಇಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಯುವತಿಯರ ಗ್ಯಾಂಗ್ ಒಂದು ಮನೆ ಅಂಗಡಿಗಳಿಗೆ ಹೋಗಿ ಹಣಕ್ಕೆ ಬೇಡಿಕೆ ಇಟ್ಟಿದೆ. ಈ ವೇಳೆ ಸಾರ್ವಜನಿಕರು ತರಾಟೆಗೆ ತೆಗದುಕೊಂಡಿದ್ದಾರೆ. ನೋಡೋಕೆ ಸ್ಟೈಲಿಶ್ ಆಗಿ ಡ್ರೆಸ್ ಮಾಡ್ಕೊಂಡು ಬಂದಿರೋ ಯುವತಿಯರು ರಾಜಸ್ಥಾನ ಮೂಲದವರು ಎನ್ನಲಾಗಿದೆ. ತಮ್ಮ ಮನೆ ಆಸ್ತಿ ಎಲ್ಲವನ್ನೂ ಪ್ರಕೃತಿ ವಿಕೋಪದಲ್ಲಿ ಕಳೆದುಕೊಂಡಿದ್ದೇವೆ ಎನ್ನುತ್ತಿದ್ದ ಯುವತಿಯರು 10, 20 ರೂಪಾಯಿ ಕೊಟ್ರೆ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲರ ಬಳಿಯೂ 100, 200 ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ವೀಡಿಯೋ ಮಾಡಿದ್ದು ತರಾಟೆಗೆ ತೆಗದುಕೊಂಡಿದ್ದಾರೆ. ಈ ರೀತಿಯ ನಿಮ್ಮ ನಾಟಕಗಳು ನಮ್ಮ ಚಿಕ್ಕಮಗಳೂರಿನಲ್ಲಿ ನಡೆಯೋದಿಲ್ಲ.. ನೀವು ಎಲ್ಲಿಂದ ಬಂದಿದ್ದೀರಿ.. ನಿಮ್ಮ ದಾಖಲೆ ಕೊಡಿ ಎನ್ನುತ್ತಿದ್ದಂತೆ ಐವರು ಯುವತಿಯ ಗ್ಯಾಂಗ್ ಆಟೋ ಹತ್ತಿ ಎಸ್ಕೇಪ್ ಆಗಿದೆ. (ವೀಡಿಯೋ ನೋಡಿ)
ಇತ್ತೀಚಿನ ದಿನದಲ್ಲಿ ಬಿಕ್ಷಾಟನೆಯೂ ಹೈಟೆಕ್ ಉದ್ಯೋಗವಾಗಿಬಿಟ್ಟಿದೆ. ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಭಿಕ್ಷಾಟನೆಗೆ ಬಂದವರಿಗೆ ಹಣ ಕೊಡುವ ಮೊದಲು ವಿಚಾರಿಸಿ ಮುಂದುವರೆಯುವುದು ಉತ್ತಮ.